CinemaLatestMain PostSouth cinema

ಕಾರಿನಲ್ಲಿ ಸೆಕ್ಸ್ ಮಾಡಿದ್ದೇನೆ ಎಂದ ನಟ ವಿಜಯ್ ದೇವರಕೊಂಡ: ಅಸಹ್ಯ ಎಂದ ಫ್ಯಾನ್ಸ್

Advertisements

ಕಾಫಿ ವಿತ್ ಕರಣ್ ಶೋ ಹಲವು ನಟರ ಬಣ್ಣ ಬಯಲು ಮಾಡುತ್ತಿದೆ. ವೈಯಕ್ತಿಕ ಪ್ರಶ್ನೆಗಳನ್ನು ನೇರಾನೇರ ಕೇಳುವ ಕರಣ್ ಜೋಹಾರ್ ಗೆ ಯಾವುದೇ ಫಿಲ್ಟರ್ ಇಲ್ಲದೇ ಉತ್ತರಿಸುತ್ತಿದ್ದಾರೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು. ಹಾಗಾಗಿ ಶೋಗೆ ಬಂದ ಅತಿಥಿಗಳು ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಅಭಿಮಾನಿಗಳ ಮುಂದೆ ಬೆತ್ತಲಾಗುತ್ತಿದ್ದಾರೆ.

ಮೊನ್ನೆಯಷ್ಟೇ ಅನನ್ಯ ಪಾಂಡೆ ಜೊತೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡ, ತಾವು ಕಾರಿನಲ್ಲಿ ಸೆಕ್ಸ್ ಮಾಡಿದ್ದಾಗಿ ಒಪ್ಪಿಕೊಂಡರು. ಅಲ್ಲದೇ, ಸೆಕ್ಸ್ ಕುರಿತಾಗಿಯೇ ಅನೇಕ ಪ್ರಶ್ನೆಗಳನ್ನು ಅಂದು ಕರಣ್ ಕೇಳಿದ್ದರು. ಅಷ್ಟೂ ಪ್ರಶ್ನೆಗಳಿಗೂ ಯಾವುದೇ ಮುಜಗರವಿಲ್ಲದೇ ವಿಜಯ್ ಮತ್ತು ಅನನ್ಯ ಪಾಂಡೆ ಉತ್ತರಿಸಿದ್ದರು. ಕೊನೆಯ ಬಾರಿಗೆ ನೀವು ಯಾವಾಗ ಸೆಕ್ಸ್ ಮಾಡಿದ್ದೀರಿ ಎಂದು ವಿಜಯ್ ದೇವರಕೊಂಡಿಗೆ ಕರಣ್ ಕೇಳಿದರೆ, ಅದಕ್ಕೆ ಉತ್ತರಿಸಿದ್ದು ಮಾತ್ರ ಅನನ್ಯ ಪಾಂಡೆ. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

ಇದೀಗ ಇಂತಹ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸಿರುವ ವಿಜಯ್ ದೇವರಕೊಂಡ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಅದರಲ್ಲೂ ಕಾರಿನಲ್ಲಿ ನಾನು ಸೆಕ್ಸ್ ಮಾಡಿದ್ದೇನೆ ಎಂದು ಹೇಳಿಕೊಂಡಿರುವ ವಿಜಯ್ ವಿರುದ್ಧ ಅಭಿಮಾನಿಗಳು ಇದೊಂದು ಅಸಹ್ಯವೆಂದು ಕಾಮೆಂಟ್ ಮಾಡಿದ್ದಾರೆ. ಖಾಸಗಿ ಜೀವನ ಖಾಸಗಿಯಾಗಿಯೇ ಇರಬೇಕು. ಈ ಮೂಲಕ ಅಭಿಮಾನಿಗಳಿಗೆ ಅವರು ಯಾವ ಸಂದೇಶವನ್ನು ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Live Tv

Leave a Reply

Your email address will not be published.

Back to top button