ಬಾಲಿವುಡ್ (Bollywood) ನಟ ಅನುಪಮ್ ಖೇರ್ ಇದೀಗ ಶಿವಣ್ಣ (Shivanna) ನಟನೆಯ ‘ಘೋಸ್ಟ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿರುವ ಅನುಪಮ್ ಖೇರ್‌ಗೆ ಶಿವಣ್ಣ ಸ್ವಾಗತಿಸಿದ್ದಾರೆ.
View this post on Instagram
Advertisement
ನಟ-ನಿರ್ದೇಶಕ ಶ್ರೀನಿ ನಿರ್ದೇಶನದ ‘ಘೋಸ್ಟ್’ (Ghost) ಚಿತ್ರದಲ್ಲಿ ಶಿವಣ್ಣ ಜೊತೆ ಹಿಂದಿ ನಟ ಅನುಪಮ್ ಖೇರ್ (Anupam Kher) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಪಾತ್ರಕ್ಕೆ ಆದ್ಯತೆಯಿದ್ದು, ಶಿವಣ್ಣ ಜೊತೆಗಿನ ಜುಗಲ್‌ಬಂದಿ ಮೋಡಿ ಮಾಡಲಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್
Advertisement
Advertisement
‘ ದಿ ಕಾಶ್ಮೀರ್ ಫೈಲ್ಸ್’ (Kashmir Files) ನಟ ಅನುಪಮ್ ಖೇರ್ ಸ್ಯಾಂಡಲ್‌ವುಡ್‌ಗೆ ಬಂದಿರೋದ್ದಕ್ಕೆ ಶಿವಣ್ಣ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ಕುರಿತ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ನಿಮ್ಮ ಜೊತೆ ಕೆಲಸ ಮಾಡಿದ್ದು, ತುಂಬಾ ಖುಷಿ ಆಯ್ತು ಅನುಪಮ್ ಸರ್. ನಿಮ್ಮ ಅಭಿನಯ ಮತ್ತು ವ್ಯಕ್ತಿತ್ವ ಎರಡು ಅದ್ಭುತ. ನಿಮ್ಮನ್ನು ‘ಘೋಸ್ಟ್’ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತೇನೆ.
Advertisement
ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯ್ತು @AnupamPKher ಸರ್.
ನಿಮ್ಮ ಅಭಿನಯ ಹಾಗೂ ವ್ಯಕ್ತಿತ್ವ ಎರಡೂ ಅದ್ಭುತ. ನಿಮ್ಮನ್ನು #Ghost ಚಿತ್ರದ ಮೂಲಕ ನಮ್ಮ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತಿದ್ದೇನೆ. pic.twitter.com/w6kJG6CfPy
— DrShivaRajkumar (@NimmaShivanna) March 30, 2023
ನಟ ಅನುಪಮ್ ಖೇರ್ ಬೆಂಗಳೂರಿಗೆ ಬಂದು, ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಕೊಟ್ಟಿದ್ದಾರೆ. ಶಿವಣ್ಣ- ಅನುಪಮ್ ಖೇರ್ ಕಾಂಬಿನೇಷನ್ ತೆರೆಯ ಮೇಲೆ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.