ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಬರ್ತ್ ಡೇ ಪಾರ್ಟಿಯನ್ನು ಶನಿವಾರ ಸಂಜೆ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.
ಅಕ್ಟೋಬರ್ 31 ರಂದು ವಿನೀಶ್ ತನ್ನ 10ನೇ ವರ್ಷದ ಹುಟ್ಟುವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದನು. ಆದರೆ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಮಗ ವಿನೀಶ್ ಬರ್ತ್ ಡೇ ಪಾರ್ಟಿಯನ್ನು ಶನಿವಾರ ಸಂಜೆ ಆಯೋಜಿಸಿದ್ದರು. ವಿನೀಶ್ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್ ಕುಟುಂಬದವರು ಮತ್ತು ಸಿನಿಮಾ ರಂಗದ ಆಪ್ತರು ಭಾಗಿಯಾಗಿದ್ದರು.
Advertisement
ನಮ್ಮ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ವಿನೀಶ್ ದರ್ಶನ್ ರವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಮಾರಂಭದ ಅದ್ಭುತ ಪೋಟೋ ❤️#VinishBirthdayCelebration@dasadarshan @dinakar219 @vijayaananth2 pic.twitter.com/YakG8MxzvI
— All India Challenging Star Darshan Fans (@AICSDF) November 3, 2018
Advertisement
ದರ್ಶನ್ ಸಹೋದರಿ ಸ್ಪೂರ್ತಿ ವಿಶ್ವಾಸ್, ಪತಿ ವಿಶ್ವಾಸ್ ತಮ್ಮ ಮಗುವಿನ ಜೊತೆ ಬಂದಿದ್ದರು. ಇನ್ನು ‘ಯಜಮಾನ’ ಸಿನಿಮಾ ನಿರ್ಮಾಪಕಿ ಶೈಲಜಾ ನಾಗ್ ಅವರು ಕೂಡ ಪಾರ್ಟಿ ಯಲ್ಲಿ ಭಾಗಿಯಾಗಿದ್ದರು. ಇನ್ನು ವಿನೀಶ್ ಸ್ನೇಹಿತರೆಲ್ಲರೂ ಬಂದು ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ.
Advertisement
ಮಗನ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಸಂತಸದಿಂದ ಇದ್ದು, ಕುಟುಂಬದ ಮೂವರು ಸಂಭ್ರಮದಲ್ಲಿದ್ದ ಕ್ಷಣಗಳು ಫೋಟೋದಲ್ಲಿ ಸೆರೆಯಾಗಿದೆ. ಮಗನ ಜೊತೆ ನಿಂತು ಕೇಕ್ ಕಟ್ ಮಾಡಿಸಿ ತಿನ್ನಿಸಿದ್ದಾರೆ. ಕೇಕ್ ಕಟ್ ಮಾಡಿದ ನಂತರ ಪಾರ್ಟಿ ಗೆ ಬಂದಂತಹ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ದಚ್ಚು ಕುಟುಂಬ ಸಮೇತ ಒಟ್ಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
Advertisement
@Vinish’s wonderful birthday ???????? party this evening with #ChallengingStarDarshan @dasadarshan @vijayaananth2 @chandana_nag pic.twitter.com/lgmvrh6HH8
— Shylaja Nag (@shylajanag) November 3, 2018
ನಟ ದರ್ಶನ್ ಕುಟುಂಬದವರ ಜೊತೆ ಕಳೆದ ಕ್ಷಣಗಳನ್ನು ಫೋಟೋ ಸಮೇತ ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ‘ಎಕ್ಸ್ ಕ್ಲೂಸಿವ್ ಫೋಟೋ’ ಎಂದು ಬರೆದುಕೊಂಡಿದ್ದಾರೆ. ಡಿ ಕಂಪೆನಿಯವರು ವಿನೀಶ್ ಗೆ ಒಂದು ಅಪರೂಪದ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ನಮ್ಮ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ವಿನೀಶ್ ದರ್ಶನ್ ರವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಮಾರಂಭದ ಅದ್ಭುತ ಪೋಟೋ ❤️#VinishBirthdayCelebration@dasadarshan @vijayaananth2 pic.twitter.com/ZR2oih389l
— ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ (@CSD_Girls) November 3, 2018
https://twitter.com/DarshanFanz/status/1058925444613865472