ಬಾಲಿವುಡ್ (Bollywood) ನಟ ಆಮೀರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ 2ನೇ ಸಿನಿಮಾದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದಾರೆ. ಈ ಮೂಲಕ ಬಿಟೌನ್‌ನಲ್ಲಿ ಜುನೈದ್ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ:18 ವರ್ಷಗಳ ನಂತರ ಒಂದಾದ ಸೂರ್ಯ, ಜ್ಯೋತಿಕಾ
Advertisement
ಸಾಯಿ ಪಲ್ಲವಿ ಜೊತೆಗಿನ ಚೊಚ್ಚಲ ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಜಪಾನ್ ಸೇರಿದಂತೆ ಹಲವು ಕಡೆ ಸಿನಿಮಾದ ಶೂಟಿಂಗ್ ನಡೆದಿದೆ. ಜುನೈದ್ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಮಹಾರಾಜ’ (Maharaja Film) ಸಿನಿಮಾ ನೋಡೋಕೆ ಕಾಯುತ್ತಿರುವ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರ: ಸಂಸದೆ ಸುಮಲತಾ ಹೇಳಿದ್ದೇನು?
Advertisement
Advertisement
ಪ್ರತಿಷ್ಠಿತ ಸಂಸ್ಥೆಯ ಜೊತೆ ಜುನೈದ್ ಖಾನ್ (Junaid Khan) ಕೈ ಜೋಡಿಸಿದ್ದಾರೆ. 58 ದಿನಗಳ ಕಾಲ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಮೊದಲ ಸಿನಿಮಾಗಿಂತ 2ನೇ ಚಿತ್ರದ ಕಥೆ ಭಿನ್ನವಾಗಿದೆ. ಮೊದಲ ಸಿನಿಮಾ ರಿಲೀಸ್ ಆಗುವ ಮುಂಚೆಯೇ ಆಮೀರ್ ಪುತ್ರನಿಗೆ ಭಾರೀ ಬೇಡಿಕೆಯಿದೆ. ಸೈಲೆಂಟ್ ಆಗಿ ಎರಡು ಸಿನಿಮಾಗಳನ್ನು ಜುನೈದ್ ಮುಗಿಸಿ ಕೊಟ್ಟಿದ್ದಾರೆ.
Advertisement
ಬಾಲಿವುಡ್‌ನಲ್ಲಿ ಸ್ಟಾರ್ ಕಲಾವಿದರ ಮಕ್ಕಳ ದರ್ಬಾರ್ ಶುರುವಾಗಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ, ಶ್ರೀದೇವಿ ಪುತ್ರಿಯರು ಸೇರಿದಂತೆ ಅನೇಕರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆಮೀರ್ ಖಾನ್ ಪುತ್ರ ಕೂಡ ನಟನೆಯ ಅಖಾಡಕ್ಕೆ ಇಳಿಯುವ ಮುಂಚೆಯೇ ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ. ತಂದೆ ಆಮೀರ್‌ರಂತೆಯೇ ಜುನೈದ್ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಎಂದು ಕಾದುನೋಡಬೇಕಿದೆ.