ಕಾರವಾರ: ಎರಡು ಮಕ್ಕಳ ತಾಯಿಯೊಂದಿಗೆ ತಮಿಳುನಾಡಿನಿಂದ ಪರಾರಿಯಾಗಿ ಕಾರವಾರದಲ್ಲಿ ನೆಲೆಸಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆತನ ಪತ್ನಿಯನ್ನೂ ತಮಿಳುನಾಡು ಪೊಲೀಸರು ಬಂಧಿಸಿ, ಕರೆದೊಯ್ದಿದ್ದಾರೆ.
ಯುವಕ ಬೀರ್ ಮೈದಿನ್ (27) ವಿವಾಹಿತ ಮಹಿಳೆ ಆಯೆಷಾ ರೆಹಮತ್‌ವುಲ್ಲಾ (24) ಬಂಧಿತ ಆರೋಪಿಗಳು. ಇದನ್ನೂ ಓದಿ: ತನ್ನೊಂದಿಗೆ ಚಾಟ್ ಮಾಡುವುದನ್ನು ನಿಲ್ಲಿಸಿದ್ದಕ್ಕೇ ಬಾಲಕಿಗೆ ಗುಂಡು ಹಾರಿಸಿದ್ರು
Advertisement
Advertisement
ಎರಡು ಮಕ್ಕಳ ತಾಯಿಯಾಗಿದ್ದ ಆಯೆಷಾ ಫೆ.21ರಂದು ತಮಿಳುನಾಡಿನಿಂದ ನಾಪತ್ತೆಯಾಗಿದ್ದಳು. ಈ ಕುರಿತು ಕುಟುಂಬಸ್ಥರು ತಮಿಳುನಾಡಿನಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೊಬೈಲ್ ಟ್ರ‍್ಯಾಕಿಂಗ್ ಹಾಗೂ ಕಾರವಾರ ಪೊಲೀಸರ ನೆರವಿನೊಂದಿಗೆ ಇಬ್ಬರನ್ನೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕುಟುಂಬದವರು ವಿದೇಶಕ್ಕೆ ಹೋಗಬಾರದು ಅಂತ ವಿಮಾನದಲ್ಲಿ ಬಾಂಬ್ ಇದೆ ಎಂದ!
Advertisement
Advertisement
ಬಾಲ್ಯದಲ್ಲಿ ಸ್ನೇಹಿತ ಹಾಗೂ ದೂರದ ಸಂಬಂಧಿಯೂ ಆಗಿದ್ದ ಬೀರ್ ಮೈದಿನ್ ಕಾರವಾರಕ್ಕೆ ಬಂದು ಸಂಸಾರ ನಡೆಸುತ್ತಿದ್ದರು. ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದ ಮೈದಿನ್ ಕಾರವಾರದಲ್ಲೇ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಕಳೆದ 6 ತಿಂಗಳಿಂದ ಮಹಿಳೆ ಆಯೆಷಾ ರೆಹಮತ್‌ವುಲ್ಲಾ (24) ಹಾಗೂ ಪ್ರಿಯಕರ ಬೀರ್ ಮೈದಿನ್ ಕಾರವಾರದ ನಗರದ ತಾಮ್ಸೆವಾಡದಲ್ಲಿ ವಾಸವಾಗಿದ್ದರು.
ಇದೀಗ ಮಹಿಳೆ 3 ತಿಂಗಳ ಗರ್ಭಿಣಿಯಾಗಿದ್ದು ಇಬ್ಬರನ್ನೂ ತಮಿಳುನಾಡಿನ ಪಿಎಸ್‌ಐ ವೀರಮುತ್ತು ಟೀಂ ಕರೆದೊಯ್ದಿದೆ. ಎರಡು ತಿಂಗಳ ಹಿಂದೆ ಹುಡುಕಿಕೊಂಡು ಬಂದಾಗಲೂ ಇವರು ಪತ್ತೆಯಾಗಿರಲಿಲ್ಲ. ಕೊನೆಗೂ ಯುವಕ, ವಿವಾಹಿತೆಯನ್ನ ಪತ್ತೆಮಾಡಿ ಪೊಲೀಸರು ತಮಿಳುನಾಡಿಗೆ ಕರೆದೊಯ್ದಿದ್ದಾರೆ.