ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಸಿನಿಪಯಣ ಶುರು ಮಾಡಿದ್ದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್, ಟಾಲಿವುಡ್ನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. `ಕಿರಿಕ್ ಪಾರ್ಟಿ’ ಪಾರ್ಟ್ 2 ಬಗ್ಗೆ ಹಾಗೂ ರಶ್ಮಿಕಾ, ಶೆಟ್ರ ತಂಡ ಸೇರೋದರ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ಗೆ ನಟ ಪ್ರಮೋದ್ ಶೆಟ್ಟಿ(Pramod Shetty) ಪ್ರತಿಕ್ರಿಯೆ ನೀಡಿದ್ದಾರೆ.
`ಕಾಂತಾರ'(Kantara) ಸಕ್ಸಸ್ ಅಲೆಯಿಂದ, ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರಿಗೂ ಬಂಪರ್ ಆಫರ್ ಅರಸಿ ಬರುತ್ತಿದೆ. `ಕಾಂತಾರ’ ನಟ ಪ್ರಮೋದ್ ಶೆಟ್ಟಿ ಕೂಡ ಮಾಲಿವುಡ್ನತ್ತ ಮುಖ ಮಾಡಿದ್ದಾರೆ. ಹೀಗಿರುವಾಗ ಮತ್ತೆ ರಶ್ಮಿಕಾ ಶೆಟ್ರ ಗ್ಯಾಂಗ್ ಸೇರಿ ಸಿನಿಮಾ ಮಾಡುವುದರ ಬಗ್ಗೆ ಪ್ರಮೋದ್ ಮಾತನಾಡಿದ್ದಾರೆ.
ರಶ್ಮಿಕಾ ಪ್ರತಿಭಾವಂತೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಅವರಿಗೆ ಅದೃಷ್ಟ ಕೂಡ ಸಾಥ್ ಕೊಟ್ಟಿದೆ. ಒಂದೊಳ್ಳೆ ಕಥೆ ಮತ್ತು ಪಾತ್ರ ಬಂದಾಗ ರಶ್ಮಿಕಾ ಮತ್ತೆ ನಮ್ಮ ತಂಡ ಸೇರಿಕೊಳ್ಳುತ್ತಾರೆ. ನಾವು ಕರೆಯುವುದರಲ್ಲೂ ತಪ್ಪಿಲ್ಲ, ರಶ್ಮಿಕಾ ಬರೋದರಲ್ಲೂ ಯಾವ ತಪ್ಪಿಲ್ಲ ಎಂದು ಪ್ರಮೋದ್ ಮಾತನಾಡಿದ್ದಾರೆ. ಇದನ್ನೂ ಓದಿ: ಕಾಂತಾರ ಸಿನಿಮಾವನ್ನು ಕುಟುಂಬ ಸಮೇತ ನೋಡಲಿದ್ದಾರೆ ವೀರೇಂದ್ರ ಹೆಗ್ಗಡೆ
ಮುಂದಿನ ದಿನಗಳಲ್ಲಿ `ಕಿರಿಕ್ ಪಾರ್ಟಿ 2′ ಅಥವಾ ಬೇರೆ ಒಂದೊಳ್ಳೆ ಪ್ರಾಜೆಕ್ಟ್ ಮೂಲಕ ಶೆಟ್ರ ಬಳಗದಲ್ಲಿ ರಶ್ಮಿಕಾ ಕಮಾಲ್ ಮಾಡೋದನ್ನ ಕಾದುನೋಡಬೇಕಿದೆ.