ಟಾಲಿವುಡ್ (Tollywood) ನಟ ಮಹೇಶ್ ಬಾಬು(Mahesh Babu) ಅವರ ತಾಯಿ ಇತ್ತೀಚೆಗೆ ನಿಧನರಾಗಿದ್ದರು. ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಮಹೇಶ್ ಬಾಬು ನೋವಿನಿಂದ ಆಚೆ ಬರಲು ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಹೊಸ ಪ್ರಾಜೆಕ್ಟ್ಗಾಗಿ ಹೊಸ ಹೇರ್ ಸ್ಟೈಲ್ನಲ್ಲಿ ಮಿಂಚಿದ್ದಾರೆ.
ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಇತ್ತೀಚೆಗೆ ವಿಧಿವಶರಾಗಿದ್ದರು. ತಾಯಿ ನಿಧನದಿಂದ ಮೌನಕ್ಕೆ ಜಾರಿದ್ದ ಮಹೇಶ್ ಬಾಬು ಈಗ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್(Trivikram Srinivas) ಜೊತೆ ನಟ ಕೈಜೋಡಿಸಿದ್ದಾರೆ. ಹಾಗಾಗಿ ಆಲಿಮ್ ಖಾನ್ ಸಲೂನ್ಗೆ ಮಹೇಶ್ ಬಾಬು ತೆರಳಿದ್ದಾರೆ. ಸ್ಟೈಲೀಶ್ ಲುಕ್ನಲ್ಲಿ ನಟ ಮಿಂಚಿದ್ದಾರೆ. ಇದೀಗ ಹೊಸ ಲುಕ್ಗೆ ಫೀಮೇಲ್ ಪ್ಯಾನ್ಸ್ ಫಿದಾ ಆಗಿದ್ದಾರೆ. ಬಾಲಿವುಡ್ನ ಫೇಮಸ್ ಕೇಶ ವಿನ್ಯಾಸಕ ಆಲಿಮ್ ಖಾನ್ ಬಳಿ ಹೇರ್ ಸ್ಟೈಲ್ ಮಾಡಿಸಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್
View this post on Instagram
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಪೂಜಾ ಹೆಗ್ಡೆ (Pooja Hegde) ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಮಹೇಶ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಅವರ ಕಾಂಬಿನೇಷನ್ನ ಹೊಸ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.