ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ತಮಿಳಿನ ಖ್ಯಾತ ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ವಿಡಿಯೋ ನೋಡಬೇಕಾದರೆ, ಓಟಿಟಿಗೆ ಸಬ್ ಸ್ಕ್ರೈಬ್ ಆಗಿರಲೇಬೇಕು. ಇಲ್ಲದಿದ್ದರೆ ಆ ವಿಡಿಯೋವನ್ನು ಖಂಡಿತಾ ನೋಡಲು ಸಾಧ್ಯವಿಲ್ಲ. ಈ ಜೋಡಿಯ ಮದುವೆ ವಿಡಿಯೋವನ್ನು ಎಕ್ಸ್ ಕ್ಲೂಸಿವ್ ಆಗಿ ನೆಟ್ ಫ್ಲಿಕ್ಸ್ ಖರೀದಿಸಿದ್ದು, ಹಾಗಾಗಿ ಆಚೆ ನೋಡುವುದಕ್ಕೆ ವಿಡಿಯೋ ಲಭ್ಯವಿರುವುದಿಲ್ಲ.
ತಮಿಳಿನ ಖ್ಯಾತ ಜೋಡಿಯ ಮದುವೆ (Wedding) ಇದಾಗಿದ್ದರಿಂದ ನೆಟ್ ಫ್ಲಿಕ್ಸ್ ಭಾರೀ ಮೊತ್ತ ಕೊಟ್ಟು ಮದುವೆ ವಿಡಿಯೋವನ್ನು ಖರೀದಿಸಿತ್ತು. ಈ ಮದುವೆ ವಿಡಿಯೋವನ್ನು ಶೂಟ್ ಮಾಡುವುದಕ್ಕಾಗಿಯೇ ತಂಡವನ್ನು ರಚನೆ ಮಾಡಿತ್ತು. ಫೋಟೋ ಹೊರತಾಗಿ ಒಂದೇ ಒಂದು ವಿಡಿಯೋ ತುಣುಕು ಆಚೆ ಬರಕೂಡದು ಎಂದು ತಾಕೀತು ಮಾಡಿತ್ತು. ಹಾಗಾಗಿ ಫೋಟೋ ಹೊರತಾಗಿ ಯಾವುದೇ ವಿಡಿಯೋ (Video) ನೋಡುವುದಕ್ಕೆ ಸಿಕ್ಕಿರಲಿಲ್ಲ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?
ಸದ್ಯ ಓಟಿಟಿಯಲ್ಲಿ ಮದುವೆ ಟೀಸರ್ ರಿಲೀಸ್ ಮಾಡಿದ್ದು, ಸದ್ಯದಲ್ಲೇ ವಿಡಿಯೋ ಕಂತುಗಳನ್ನು ರಿಲೀಸ್ ಮಾಡುವುದಾಗಿ ಓಟಿಟಿ ಹೇಳಿಕೊಂಡಿದೆ. ಮದುವೆ ಮುನ್ನ ಕ್ಷಣಗಳು ಮತ್ತು ಮದುವೆಯ ಅಷ್ಟೂ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ ಅಂತೆ. ಅಲ್ಲದೇ, ತಮ್ಮ ಮದುವೆಯ ಕುರಿತು ನಯನಾ ತಾರಾ ಮತ್ತು ವಿಘ್ನೇಶ್ ಶಿವನ್ (Vignesh Shivan) ಅಪರೂಪದ ಕ್ಷಣಗಳನ್ನೂ ಹಂಚಿಕೊಂಡಿದ್ದಾರಂತೆ. ಅವು ಕೂಡ ಓಟಿಟಿಯಲ್ಲಿ ಮಾತ್ರ ನೋಡಬಹುದಂತೆ.