Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಿಕೆ ಅಬ್ಬರ, ಅವೇಶ್ ಖಾನ್ ಶೈನ್ – ಗೆಲುವಿನೊಂದಿಗೆ ಸರಣಿ ಜೀವಂತವಾಗಿರಿಸಿಕೊಂಡ ಭಾರತ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಡಿಕೆ ಅಬ್ಬರ, ಅವೇಶ್ ಖಾನ್ ಶೈನ್ – ಗೆಲುವಿನೊಂದಿಗೆ ಸರಣಿ ಜೀವಂತವಾಗಿರಿಸಿಕೊಂಡ ಭಾರತ

Cricket

ಡಿಕೆ ಅಬ್ಬರ, ಅವೇಶ್ ಖಾನ್ ಶೈನ್ – ಗೆಲುವಿನೊಂದಿಗೆ ಸರಣಿ ಜೀವಂತವಾಗಿರಿಸಿಕೊಂಡ ಭಾರತ

Public TV
Last updated: June 17, 2022 10:32 pm
Public TV
Share
2 Min Read
DINESH KARTHIK
SHARE

ರಾಜ್‍ಕೋಟ್: ಬ್ಯಾಟಿಂಗ್‍ನಲ್ಲಿ ದಿನೇಶ್ ಕಾರ್ತಿಕ್ ಹೋರಾಟ ಮತ್ತು ಬೌಲಿಂಗ್‍ನಲ್ಲಿ ಅವೇಶ್ ಖಾನ್ ಮಿಂಚಿನ ಬೌಲಿಂಗ್ ಮೂಲಕ ಆಫ್ರಿಕಾಗೆ ಸತತ ಸೋಲಿನ ರುಚಿ ತೋರಿಸಿದ್ದಾರೆ. ಭಾರತ ತಂಡ 82 ರನ್‍ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿಕೊಂಡಿದೆ.

TEAM INDIA 1 2
ಭಾರತ ನೀಡಿದ 170 ರನ್‍ಗಳ ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಅನುಭವಿಸಿದ ಬಳಿಕ ಚೇತರಿಕೆ ಕಾಣಲೇ ಇಲ್ಲ. ಭಾರತದ ಪರ ಅವೇಶ್ ಖಾನ್ 4 ವಿಕೆಟ್ ಕಿತ್ತು ಆಫ್ರಿಕಾ ತಂಡಕ್ಕೆ ಬ್ರೇಕ್ ಮೇಲೆ ಬ್ರೇಕ್ ನೀಡಿ ಪರದಾಡುವಂತೆ ಮಾಡಿದರು. ಅಂತಿಮವಾಗಿ ಆಫ್ರಿಕಾ ಓವರ್‌ಗಳಲ್ಲಿ 16.5 ಓವರ್‌ಗಳಲ್ಲಿ 82 ರನ್‌ಗಳಿಗೆ ಆಲೌಟ್‌ ಆಗಿ ಸೋಲು ಕಂಡಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿ 2-2ರಲ್ಲಿ ಸಮಬಲ ಗೊಂಡಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯ ಕುತೂಹಲ ಮೂಡಿಸಿದೆ.

IN VS SA

ಚೇಸಿಂಗ್ ಆರಂಭದಲ್ಲಿ ಡಿಕಾಕ್ 14 ರನ್ (13 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಬಳಿಕ ನಾಯಕ ತೆಂಬ ಬವುಮ ಗಾಯಳುವಾಗಿ ಹೊರನಡೆದರು. ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಆಫ್ರಿಕಾ ದಿಢೀರ್ ಕುಸಿತ ಕಂಡಿತು. ಭಾರತ ಪರ ಅವೇಶ್ ಖಾನ್ 4 ವಿಕೆಟ್ ಕಿತ್ತು ಮಿಂಚಿದರೆ, ಚಹಲ್ 2, ಹರ್ಷಲ್ ಪಟೇಲ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದು ಆಫ್ರಿಕಾಗೆ ಖೆಡ್ಡಾ ತೋಡಿದರು.

IND VS SA 1

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿತು. ಋತುರಾಜ್ ಗಾಯಕ್ವಾಡ್ 5 ರನ್, ಮತ್ತು ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಒಂದು ಕಡೆ ಬೌಂಡರಿ, ಸಿಕ್ಸ್ ಸಿಡಿಸುತ್ತ ಅಬ್ಬರಿಸುವ ಸೂಚನೆ ನೀಡಿದ ಇಶನ್ ಕಿಶಾನ್ ಆಟ 27 ರನ್ (26 ಎಸೆತ, 3 ಬೌಂಡರಿ, 1 ಸಿಕ್ಸ್) ಅಂತ್ಯಗೊಂಡಿತು. ಬಳಿಕ ಬಂದ ನಾಯಕ ಪಂತ್ 17 ರನ್ (23 ಎಸೆತ, 2 ಬೌಂಡರಿ) ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

TEAM INDIA 3

81 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಕುಸಿತಕಂಡ ತಂಡಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಬಲ ತುಂಬಿದರು. ನಿಧಾನವಾಗಿ ತಂಡದ ರನ್ ಏರಿಸಿದ ಇವರಿಬ್ಬರೂ ಸ್ಲಾಗ್ ಓವರ್‌ಗಳಲ್ಲಿ ಅಬ್ಬರದಾಟ ಪ್ರದರ್ಶಿಸಿದರು. ಪಾಂಡ್ಯ 46 ರನ್ (31 ಎಸೆತ, 3 ಬೌಂಡರಿ, 3 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 55 ರನ್ (27 ಎಸೆತ, 9 ಬೌಂಡರಿ, 2 ಸಿಕ್ಸ್) ಚಚ್ಚಿ ಔಟ್ ಅದರು. ಈ ಮೊದಲು ಈ ಜೋಡಿ 5ನೇ ವಿಕೆಟ್‍ಗೆ 65 ರನ್ (33 ಎಸೆತ) ಜೊತೆಯಾಟವಾಡಿ ತಂಡವನ್ನು ಆಧರಿಸಿತು. ಅಲ್ಲದೇ ದಿನೇಶ್ ಕಾರ್ತಿಕ್ ‌ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿತು.

ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‍ಗಿಡಿ 2 ವಿಕೆಟ್ ಪಡೆದು ಮಿಂಚಿದರೆ, ಪೆಟೋರಿಯಸ್, ಆನ್ರಿಚ್ ನಾರ್ಟ್ಜೆ, ಕೇಶವ ಮಹಾರಾಜ್, ಮಾರ್ಕೊ ಜಾನ್ಸೆನ್ ತಲಾ ಒಂದು ವಿಕೆಟ್ ಪಡೆದರು.

Live Tv

TAGGED:Dinesh Karthikindiasouth africaದಕ್ಷಿಣ ಆಫ್ರಿಕಾದಿನೇಶ್ ಕಾರ್ತಿಕ್ಭಾರತ
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

President Murmu In Siddaganga Mutt
Districts

ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿರುತ್ತಾರೆ – ರಾಷ್ಟ್ರಪತಿ ಮುರ್ಮು

Public TV
By Public TV
5 minutes ago
forest officer demanding bribe from farmer in aldur Chikkamagaluru video viral
Chikkamagaluru

ಖರ್ಚಿಗೇನಾದ್ರೂ ಕೊಡೋದಾದ್ರೆ ಹೆಚ್ಚು ಬರಿತೀನಿ ಇಲ್ದಿದ್ರೆ ಇಲ್ಲ – ರೈತನ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಅರಣ್ಯಾಧಿಕಾರಿ ವೀಡಿಯೋ ವೈರಲ್‌

Public TV
By Public TV
14 minutes ago
Haveri Bus Accident 1
Districts

ವೇಗವಾಗಿ ಬಂದು ಬೇಕರಿಗೆ ನುಗ್ಗಿದ ಬಸ್ – 2 ವರ್ಷದ ಮಗು ಸಾವು, ಎದೆ ಝಲ್ ಎನ್ನುವ ವಿಡಿಯೋ ವೈರಲ್

Public TV
By Public TV
24 minutes ago
Sunilkumar
Bagalkot

ಅಹಿಂದಕ್ಕೆ ಅನ್ಯಾಯ ಎಸಗಿದ ಕಾಂಗ್ರೆಸ್‌ ಸರ್ಕಾರವನ್ನು ತಿರಸ್ಕರಿಸಿ: ಸುನಿಲ್‌ ಕುಮಾರ್‌

Public TV
By Public TV
57 minutes ago
Shreyas Iyer
Cricket

IPL 2026 | ಜಿಟಿ ವಿರುದ್ಧ ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ದಂಡ

Public TV
By Public TV
1 hour ago
Digital Census India
31 Districts

Census 2027 | ಈ ಸುದ್ದಿ ಓದಿ ಮನೆಯಲ್ಲೇ ಕುಳಿತೇ 15 ನಿಮಿಷದ ಒಳಗಡೆ ನಿಮ್ಮ ವಿವರವನ್ನು ಭರ್ತಿ ಮಾಡಿ!

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?