Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ಬಟ್ಲರ್‌ ಬಿರುಗಾಳಿ ಬೆದರಿದ ಡೆಲ್ಲಿ – ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ರಾಜಸ್ಥಾನ
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಬಟ್ಲರ್‌ ಬಿರುಗಾಳಿ ಬೆದರಿದ ಡೆಲ್ಲಿ – ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ರಾಜಸ್ಥಾನ

Cricket

ಬಟ್ಲರ್‌ ಬಿರುಗಾಳಿ ಬೆದರಿದ ಡೆಲ್ಲಿ – ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ರಾಜಸ್ಥಾನ

Public TV
Last updated: April 22, 2022 11:39 pm
Public TV
Share
2 Min Read
IPL 2022 JOS BUTLER
SHARE

ಮುಂಬೈ: ಜೋಸ್ ಬಟ್ಲರ್ ಬ್ಯಾಟಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಬೌಲಿಂಗ್ ನೆರವಿನಿಂದ ಡೆಲ್ಲಿ ವಿರುದ್ಧ ರಾಜಸ್ಥಾನ 15 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

IPL 2022 RR 3
223 ರನ್‍ಗಳ ಬೃಹತ್ ಗುರಿ ಪಡೆದ ಡೆಲ್ಲಿ ತಂಡದ ಗೆಲುವಿಗಾಗಿ ರೋವ್ಮನ್ ಪೊವೆಲ್ ಕಡೆಯ ವರೆಗೆ ಹೋರಾಡಿ 36 ರನ್ (15 ಎಸೆತ, 5 ಬೌಂಡರಿ) ಚಚ್ಚಿ ಔಟ್ ಆಗುವುದರೊಂದಿಗೆ ಸೋಲಿನಲ್ಲೂ ಗಮನ ಸೆಳೆದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್ ಗಳಿಸಲಷ್ಟೇ ಶಕ್ತವಾಯಿತು.

IPL 2022 RR 4

ಬೃಹತ್ ಮೊತ್ತದ ಗುರಿ ಪಡೆದ ಡೆಲ್ಲಿಗೆ ಆರಂಭಿಕ ಆಟಗಾರರಾದ ಪೃಥ್ವಿ ಶಾ 37 ರನ್ (27 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ಡೇವಿಡ್ ವಾರ್ನರ್ 28 ರನ್ (14 ಎಸೆತ, 5 ಬೌಂಡರಿ, 1 ಸಿಕ್ಸ್) ಕೊಡುಗೆ ನೀಡಿ ಔಟ್ ಆದರು. ಆ ಬಳಿಕ ಪಂತ್ 44 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಲಲಿತ್ ಯಾದವ್ 37 ರನ್ (24 ಎಸೆತ, 3 ಬೌಂಡರಿ, 2 ಸಿಕ್ಸ್) ಚಚ್ಚಿ ಪೆವಿಲಿಯನ್ ಸೇರಿಕೊಂಡರು.

IPL 2022 RR 1 2

ಈ ಮೊದಲು ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಅವರ ಆ ಲೆಕ್ಕಾಚಾರ ಆರಂಭದಿಂದಲೇ ತಲೆಕೆಳಗಾಯಿತು. ರಾಜಸ್ಥಾನದ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ರನ್ ಮಳೆ ಸುರಿಸಿದರು. ಆರಂಭದಿಂದಲೇ ಸ್ಫೋಟಕ ಆಟಕ್ಕೆ ಮುಂದಾದ ಇವರಿಬ್ಬರು ಮನಬಂದಂತೆ ಬ್ಯಾಟ್‍ಬೀಸಿ ರನ್ ಪ್ರವಾಹ ಹರಿಸಿದರು.

IPL 2022 RR 2 1

ಬಟ್ಲರ್ ಬಿರುಗಾಳಿ
ಒಂದು ಕಡೆ ಪಡಿಕ್ಕಲ್ ಇನ್ನೊಂದು ಕಡೆ ಬಟ್ಲರ್ ಬ್ಯಾಟಿಂಗ್ ಬಿರುಗಾಳಿಗೆ ಡೆಲ್ಲಿ ಬೌಲರ್‌ಗಳು ಹೈರಾಣಾದರು. ಸಿಕ್ಕ ಸಿಕ್ಕ ಬೌಲರ್‌ಗಳಿಗೆ ಬೌಂಡರಿ, ಸಿಕ್ಸರ್ ಚಚ್ಚಿದ ಈ ಜೋಡಿಯನ್ನು ಬೇರ್ಪಡಿಸಲು 15ನೇ ಓವರ್‌ನಲ್ಲಿ ಖಲೀಲ್ ಅಹಮ್ಮದ್ ಸಫಲರಾದರು. ಪಡಿಕ್ಕಲ್ 54 ರನ್ (35 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೊದಲು ಬಟ್ಲರ್ ಜೊತೆ ಮೊದಲ ವಿಕೆಟ್‍ಗೆ 155 ರನ್ (91 ಎಸೆತ) ಜೊತೆಯಾಟವಾಡಿ ಡೆಲ್ಲಿಗೆ ಮುಳುವಾದರು.

IPL 2022 RR VS DC

ಆ ಬಳಿಕ ಬಟ್ಲರ್ ಜೊತೆಗೂಡಿದ ಸಂಜು ಸ್ಯಾಮ್ಸನ್ ನಾನೇನು ಕಮ್ಮಿ ಇಲ್ಲ ಎಂಬಂತೆ ಬೌಂಡರಿ, ಸಿಕ್ಸ್ ಸಿಡಿಸಿ ಮೆರೆದಾಡಿದರು. ಇತ್ತ ಬಟ್ಲರ್ ಐಪಿಎಲ್‍ನ ಕಳೆದ 8 ಇನ್ನಿಂಗ್ಸ್‌ಗಳ ಪೈಕಿ 4ನೇ ಶತಕ ಬಾರಿಸಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದರು. ಅಂತಿಮವಾಗಿ ಬಟ್ಲರ್ 116 ರನ್ (65 ಎಸೆತ, 9 ಬೌಂಡರಿ, 9 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಸ್ಯಾಮ್ಸನ್ ಅಜೇಯ 46 ರನ್ (19 ಎಸೆತ, 5 ಬೌಂಡರಿ, 3 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 222 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

ರನ್ ಏರಿದ್ದು ಹೇಗೆ?
41 ಎಸೆತ 50 ರನ್
66 ಎಸೆತ 100 ರನ್
87 ಎಸೆತ 150 ರನ್
112 ಎಸೆತ 200 ರನ್
120 ಎಸೆತ 222 ರನ್

TAGGED:DCDelhi CapitalsIPLIPL 2022Rajasthan RoyalsRRಐಪಿಎಲ್ಡೆಲ್ಲಿ ಕಾಪಿಟಲ್ಸ್ಮುಂಬೈ ಇಂಡಿಯನ್ಸ್
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

Duck
Chikkamagaluru

ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Public TV
ByPublic TV
46 seconds ago
01 1
Latest

ಗಂಗೋತ್ರಿಯಿಂದ ಗಂಗಾ ಸಾಗರದ ತನಕ ಕಮಲ ಅರಳಿದೆ, ಬಂಗಾಳ ಭಯಮುಕ್ತವಾಗಿದೆ: ಮೋದಿ

Public TV
ByPublic TV
10 minutes ago
pm modi 5
Latest

ಬಂಗಾಳದಲ್ಲಿ ಕಮಲ ಅರಳಿದೆ, ಅದ್ಭುತ ಜನಾದೇಶ ಸಿಕ್ಕಿದೆ: ಮೋದಿ ಕೃತಜ್ಞತೆ

Public TV
ByPublic TV
49 minutes ago
Siddaramaiah
Bengaluru City

SIR ಮೋಸದಾಟ, ಚುನಾವಣಾ ಆಯೋಗದ ಕೈವಾಡದಿಂದ ಮಮತಾಗೆ ಸೋಲು: ಸಿದ್ದರಾಮಯ್ಯ ಆಕ್ರೋಶ

Public TV
ByPublic TV
51 minutes ago
Narenndra Modi BJP Victory Specch delhi lection
Latest

ವಾಜಪೇಯಿ ಕನಸು ನನಸು – ಬಿಜೆಪಿ ಆಡಳಿತ ರಾಜ್ಯಗಳ ಸಂಖ್ಯೆ 20ಕ್ಕೆ ಏರಿಕೆ

Public TV
ByPublic TV
59 minutes ago
Siddaramaiah 4
Bagalkot

ನಮ್ಮ ಪಕ್ಷದ ಸಾಧನೆ, ಸಿದ್ಧಾಂತಕ್ಕೆ ಜಯ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ

Public TV
ByPublic TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?