ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಮುಸ್ಲಿಮರೇ ಹೊಡೆದಿರುವುದು ಸಾಬೀತಾಗಿದೆ. ಈಗಲಾದರೂ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು ನನ್ನ ಮಾತನ್ನು ಒಪ್ಪಿಕೊಳ್ಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಹೇಳಿಕೆಯೊಂದನ್ನು ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಕೊಲೆ ಮಾಡಿರುವವರು ಮುಸ್ಲಿಂ ಗೂಂಡಾಗಳು ಅಂತ ನಾನು ಹೇಳಿದ್ದೆ. ನಾನು ನಿನ್ನೆ ಎಸ್ ಪಿ ಬಳಿ ಮಾಹಿತಿ ಪಡೆದು ಹೇಳಿಕೆ ಕೊಟ್ಟಿದ್ದೆ. ಅರೆಸ್ಟ್ ಆಗಿರೋರು ಎಲ್ಲರೂ ಮುಸ್ಲಿಮರೇ ಆಗಿದ್ದಾರೆ ಎಂದು ನಿನ್ನೆ ನೀಡಿರುವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ
ಈ ಪ್ರಕರಣದ ತನಿಖೆ ಎನ್‍ಐಎಯಿಂದ ಆಗಬೇಕು. ಎನ್‍ಐಎ ತನಿಖೆ ಆದರೆ ಎಲ್ಲಾ ಸತ್ಯ ಹೊರ ಬರುತ್ತೆ. ಮುಸ್ಲಿಂ ಅವ್ರೆ ಹೊಡೆದಿರೋದು ಸಾಬೀತಾಗಿದ್ದು, ಈಗಲಾದ್ರು ಹರಿಪ್ರಸಾದ್ ಒಪ್ಪಿಕೊಳ್ಳಲಿ ಎಂದು ತಿಳಿಸಿದರು. ಇದನ್ನೂ ಓದಿ: ಮಗ ಕೇಸರಿ ಶಾಲು, ಕುಂಕುಮ ಮಾತ್ರ ಬಿಟ್ಟು ಹೋಗಿದ್ದಾನೆ: ಹರ್ಷ ತಾಯಿ
ಈಗಾಗಲೇ ಹಲವರ ಬಂಧನ ಆಗಿದೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಿತ್ತು. ಗೋಹತ್ಯೆ ತಡೆಗೆ ಮುಂದಾದವರನ್ನ ಕೊಲೆ ಮಾಡಲಾಗಿತ್ತು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸ್ರು ತರಲು ಕಗ್ಗೊಲೆ ಆಗ್ತಿದೆ. ಉದ್ದೇಶ ಪೂರ್ವಕವಾಗಿ ಇಂತಹ ಕೊಲೆ ಆಗ್ತಿದೆ. ಹೀಗಾಗಿ ನಾನು ಎನ್‍ಐಎ ತನಿಖೆಗೆ ಒತ್ತಾಯ ಮಾಡ್ತೀನಿ. ಸಿಎಂ ಬಳಿ ಎನ್‍ಐಎ ತನಿಖೆಗೆ ಮನವಿ ಮಾಡ್ತಿನಿ. ತನಿಖೆಯಿಂದ ಯಾರ್ ಯಾರ್ ಇದರ ಹಿಂದೆ ಇದ್ದಾರೆ ಅಂತ ಗೊತ್ತಾಗುತ್ತೆ ಎಂದು ಈಶ್ವರಪ್ಪ ಒತ್ತಾಯಿಸಿದರು. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ