ಜಕಾರ್ತ: ಭಾರತದ ಹೆಮ್ಮೆಯ ಇವಿಎಂ (EVM) ತಂತ್ರಜ್ಞಾನ ಹಾಗೂ ಚುನಾವಣಾ ನಿರ್ವಹಣೆಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗ (ECI) ಮತ್ತು ಇಂಡೋನೇಷ್ಯಾದ ಚುನಾವಣಾ ಆಯೋಗ (KPU) ಪರಸ್ಪರ ತಿಳುವಳಿಕಾ ಪತ್ರಕ್ಕೆ (MoU) ಸಹಿ ಹಾಕಿವೆ.
ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿ ಬಳಕೆಯಾಗುತ್ತಿರುವ ಇವಿಎಂ ಮತ್ತು ವಿವಿಪ್ಯಾಟ್ (VVPAT) ತಂತ್ರಜ್ಞಾನದ ಕಾರ್ಯವೈಖರಿ, ಭದ್ರತೆ ಹಾಗೂ ಅದರ ನಿರ್ವಹಣೆಯ ಬಗ್ಗೆ ಇಂಡೋನೇಷ್ಯಾಕ್ಕೆ(Indonesia) ಭಾರತವು ತಾಂತ್ರಿಕ ನೆರವು ಮತ್ತು ತರಬೇತಿಯನ್ನು ನೀಡಲಿದೆ.
ಉಭಯ ರಾಷ್ಟ್ರಗಳಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಕೈಗೊಳ್ಳಬೇಕಾದ ಸುಧಾರಣೆಗಳು, ಮತದಾರರ ಜಾಗೃತಿ ಅಭಿಯಾನಗಳು ಮತ್ತು ಚುನಾವಣಾ (Election) ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಕುರಿತು ಜ್ಞಾನ ವಿನಿಮಯ ಮಾಡಿಕೊಳ್ಳಲು ಈ ಒಪ್ಪಂದ ನೆರವಾಗಲಿದೆ. ಇದನ್ನೂ ಓದಿ: ಬ್ರಹ್ಮೋಸ್, ಅಸ್ತ್ರ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾ ಸಹಿ
#WATCH | Jakarta, Indonesia: PM Narendra Modi says, “…In these times of global turbulence, India believes that the role of dialogue and diplomacy has become more critical than ever. Regarding the issue of Palestine, we support a two-state solution and long-term peace. A golden… pic.twitter.com/Gapm4C0NxP
— ANI (@ANI) July 7, 2026
ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳ ನಿಯೋಗವು ಇಂಡೋನೇಷ್ಯಾಕ್ಕೆ ಭೇಟಿ ನೀಡಿ, ಅಲ್ಲಿನ ಸಾಂಪ್ರದಾಯಿಕ ಮತದಾನ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ನೀಡಲು ಈ ತಿಳುವಳಿಕಾ ಪತ್ರವು ದಾರಿ ಮಾಡಿಕೊಟ್ಟಿದೆ.
ಪ್ರಧಾನಿ ಮೋದಿ ಅವರು ಇವಿಎಂ ತಂತ್ರಜ್ಞಾನವನ್ನು ಭಾರತದ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ. ಒಂದು ಕಾಲದಲ್ಲಿ ಭಾರತದಲ್ಲಿ ಮತಪೆಟ್ಟಿಗೆಗಳನ್ನು (Ballot Boxes) ಅಪಹರಿಸುವ, ಲೂಟಿ ಮಾಡುವ ಸಂಸ್ಕೃತಿ ಇತ್ತು. ಆದರೆ ಇವಿಎಂ ಬಂದ ನಂತರ ದೇಶದ ಪ್ರತಿಯೊಬ್ಬ ಬಡವ, ಸಾಮಾನ್ಯ ಪ್ರಜೆಯ ಮತಕ್ಕೂ ಸಂಪೂರ್ಣ ಸುರಕ್ಷತೆ ಸಿಕ್ಕಿದೆ. ಇವಿಎಂ ಭಾರತದ ಚುನಾವಣಾ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕ ಮತ್ತು ಗಟ್ಟಿಗೊಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ `ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ಪ್ರದಾನ
ಭಾರತವು ಕೇವಲ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿ (Mother of Democracy). ನಮ್ಮ ದೇಶದ ಸ್ವದೇಶಿ ಇವಿಎಂ ಮತ್ತು ವಿವಿಪ್ಯಾಟ್ (VVPAT) ತಂತ್ರಜ್ಞಾನವು ಇಂದು ಜಗತ್ತಿಗೆ ಮಾದರಿಯಾಗಿದೆ. ಇತರ ಪ್ರಜಾಪ್ರಭುತ್ವ ರಾಷ್ಟ್ರಗಳು ತಮ್ಮ ಚುನಾವಣಾ ವ್ಯವಸ್ಥೆಯನ್ನು ಆಧುನೀಕರಿಸಲು ಭಾರತದ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ ಎಂದಿದ್ದಾರೆ.
