ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಜನರು ದೇಶ ತೊರೆಯಲು ಆರಂಭಿಸಿದ್ದಾರೆ.
ಉಗ್ರರಿಗೆ ಎಷ್ಟು ಭಯಗೊಂಡಿದ್ದಾರೆ ಎಂದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಒಂದು ವಿಮಾನಕ್ಕೆ ಹತ್ತಲು ನೂರಾರು ಜನ ಮುಗಿಬಿದ್ದಿದ್ದಾರೆ.
https://twitter.com/netbuzzafrica/status/1427122447858511873
ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ

ಉಗ್ರರಿಂದ ಪ್ರಾಣ ಉಳಿದರೆ ಸಾಕು ಎಂದು ವಿಮಾನ ನಿಲ್ದಾಣಕ್ಕೆ ಜನರು ನುಗ್ಗಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
