ನಿದ್ರೆ ಮಂಪರಿನಲ್ಲಿ ಚಾಲನೆ – ಬಸ್ ಪಲ್ಟಿ, ಇಬ್ಬರು ಸಾವು

1 Min Read

-ಚಾಲಕ, ನಿರ್ವಾಹಕರಿಬ್ಬರು ಸ್ಥಳದಿಂದ ಪರಾರಿ
-ಅತಿ ವೇಗದಿಂದಾಗಿ ಬಸ್ ಪಲ್ಟಿ

ಚಿತ್ರದುರ್ಗ: ಚಾಲಕನ ಅಜಾಗರೂಕತೆಯಿಂದ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶಿವಮೂರ್ತಿ ಬಡಾವಣೆಯಲ್ಲಿ ನಡೆದಿದೆ.

ಬಸ್‍ನಲ್ಲಿದ್ದ ಬಾಲಕಿ ಸೇರಿದಂತೆ ಓರ್ವ ಯುವಕ ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೆಎ:33 ಎಫ್ 0386 ನಂಬರ್ ನ ಸರ್ಕಾರಿ ಬಸ್‍ನಲ್ಲಿ 50 ಜನ ಪ್ರಯಾಣಿಕರು ಯಾದಗಿರಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ಆದರೆ ಬೆಳಗಿನ ಜಾವ ನಿದ್ರೆ ಮಂಪರಿನಲ್ಲಿದ್ದ ಚಾಲಕ ಅತಿ ವೇಗವಾಗಿ ಬಸ್ ಚಾಲಾಯಿಸಿರುವ ಪರಿಣಾಮ ಬಸ್ ಪಲ್ಟಿಯಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಪ್ರಯಾಣಿಕರ ನೆರವಿಗೆ ಧಾವಿಸಬೇಕಿದ್ದ ಚಾಲಕ, ನಿರ್ವಾಹಕರಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *