Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 35 ವರ್ಷದಿಂದ ಗಿಡ ನೆಟ್ಟು ಪೋಷಣೆ – ಸಾಲುಮರದ ವೀರಾಚಾರಿ ನಮ್ಮ ಪಬ್ಲಿಕ್ ಹೀರೋ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Davanagere | 35 ವರ್ಷದಿಂದ ಗಿಡ ನೆಟ್ಟು ಪೋಷಣೆ – ಸಾಲುಮರದ ವೀರಾಚಾರಿ ನಮ್ಮ ಪಬ್ಲಿಕ್ ಹೀರೋ

Davanagere

35 ವರ್ಷದಿಂದ ಗಿಡ ನೆಟ್ಟು ಪೋಷಣೆ – ಸಾಲುಮರದ ವೀರಾಚಾರಿ ನಮ್ಮ ಪಬ್ಲಿಕ್ ಹೀರೋ

Public TV
Last updated: October 18, 2019 2:08 pm
Public TV
Share
2 Min Read
DVG Public Hero 1
SHARE

-ಹಸಿರು ರಥದಲ್ಲಿ ವೃದ್ಧ ದಂಪತಿ ಸಂಚಾರ

ದಾವಣಗೆರೆ: ಪರಿಸರ ದಿನಾಚರಣೆ ಬಂದಾಗ ಮಾತ್ರ ಗಿಡಗಳನ್ನು ನೆಟ್ಟು ನೀರು ಹಾಕಿ ಫೋಟೋ ತೆಗೆದುಕೊಳ್ಳುವರನ್ನು ನೋಡಿರುತ್ತೇವೆ. ಪ್ರತಿನಿತ್ಯ ಮರಗಿಡಗಳನ್ನು ಬೆಳೆಸುವುದೇ ದಾವಣಗೆರೆಯ ಪರಿಸರ ಪ್ರೇಮಿಯ ದಿನನಿತ್ಯದ ಕಾಯಕ. ಮರ ಗಿಡಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದು, ಹಸಿರು ಇವರ ಉಸಿರಾಗಿದೆ.

ನಿಸ್ವಾರ್ಥ ಸೇವೆ ಮಾಡುತ್ತ, ಮರ ಗಿಡಗಳನ್ನು ಮಕ್ಕಳಂತೆ ಪೋಷಣೆ ಮಾಡುತ್ತಿರುವ ವೀರಾಚಾರಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಜನರು ಇವರನ್ನು ಪ್ರೀತಿಯಿಂದ ಸಾಲುಮರದ ವೀರಾಚಾರಿ ಎಂದು ಸಹ ಕರೆಯುತ್ತಾರೆ. ದಾವಣಗೆರೆಯ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದವರಾದ ವೀರಾಚಾರಿ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಚಿತ್ರದುರ್ಗದ ನಂದಿಹಳ್ಳಿ ಗ್ರಾಮದಿಂದ ಕುಲುಮೆ ಕೆಲಸ ಮಾಡಲು 35 ವರ್ಷದ ಮಿಟ್ಲಕಟ್ಟೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ.

DVG Public Hero

ಪರಿಸರದ ಬಗ್ಗೆ ಕಾಳಜಿ ಇದ್ದ ವೀರಾಚಾರಿ ದೇವರಬೆಳಕೆರೆ ಗ್ರಾಮ ಪಂಚಾಯಿತಿಗೆ ತೆರಳಿ ಬಸ್ ನಿಲ್ದಾಣದ ಆವರಣದಲ್ಲಿ ನೆಡಲು ಎರಡು ಗಿಡಗಳನ್ನ ಕೇಳಿದ್ದಾರೆ. ಆದರೆ ಗಿಡಗಳನ್ನ ಕೊಡಲು ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡ ವೀರಾಚಾರಿ ಗ್ರಾಮ ಪಂಚಾಯಿತಿಯವರಿಗೇ ಸವಾಲ್ ಹಾಕಿದ್ದಾರೆ. ಇನ್ನು ಮುಂದೆ ನಾನೇ ಇಡೀ ದಾವಣಗೆರೆ ಜಿಲ್ಲೆಯ ತುಂಬಾ ಗಿಡ ನೆಡುವುದಾಗಿ ಶಪಥ ಮಾಡಿದ್ದರು.

ಅಂದಿನಿಂದ ಪ್ರಾರಂಭವಾದ ಗಿಡ ನೆಡುವ ಕಾರ್ಯಕ್ರಮ ಸತತ 35 ವರ್ಷಗಳಲ್ಲಿ ಎರಡೂವರೆ ಸಾವಿರಕ್ಕಿಂತ ಹೆಚ್ಚು ಗಿಡ ನೆಟ್ಟಿದ್ದಾರೆ. ಕೇವಲ ಗಿಡ ನೆಡುವುದು ಮಾತ್ರವಲ್ಲದೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕಿ ಬೆಳೆಸುವುದು ಇವರ ನಿತ್ಯ ಕಾಯಕವಾಗಿದೆ. ಈ ವೇಳೆ ಬಡತನದಲ್ಲಿದ್ದ ವೀರಚಾರಿ ತಮ್ಮ ಚಿನ್ನಾಭರಣಗಳನ್ನು ಮಾರಿ ಗಿಡಗಳನ್ನ ಕೊಂಡು ತಂದು ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಪ್ರತಿ ಗ್ರಾಮದ ಬಸ್ ನಿಲ್ದಾಣಗಳಲ್ಲಿ ಗಿಡ ಹಚ್ಚಿದ್ದಾರೆ.

DVG Public Hero 2

ಆರಂಭದಲ್ಲಿ ವೀರಾಚಾರಿಯವರ ಕೆಲಸವನ್ನು ನೋಡಿ ಜನರು ನಗೆಪಾಟಲು ಮಾಡುತ್ತಿದ್ದರಂತೆ. ಆದರೆ ಜನರ ಮಾತುಗಳಿಗೆ ತಲೆಕೆಡಿಸಿಕೊಳ್ಳದ ವೀರಾಚಾರಿ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದರು. ಇಂದು ವೀರಾಚಾರಿ ಅವರು ಬೆಳೆಸಿದ ಗಿಡಗಳು ಅದೆಷ್ಟೋ ಜನರಿಗೆ ನೆರಳು ನೀಡುತ್ತಿವೆ. ಹಾಗೆಯೇ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣಗಳಾಗಿವೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಮನೆಯವರು ಸಹ ಹೆಗಲಿಗೆ ಹೆಗಲು ನೀಡಿ ಮರ ಗಿಡಗಳನ್ನು ಬೆಳೆಸಲು ಸಹಾಯ ಮಾಡುತ್ತಿದ್ದಾರೆ. ಬಡತನದಲ್ಲಿ ಕೂಡ ಮನೆ ಒಡವೆ ಒತ್ತೆ ಇಟ್ಟು ಗಿಡಗಳನ್ನು ತರುತ್ತಿದ್ದರು. ನಾವು ಯಾವುದಕ್ಕೂ ವಿರೋಧ ಮಾಡುತ್ತಿರಲಿಲ್ಲ ಎಂದು ವೀರಾಚಾರಿ ಅವರ ಪತ್ನಿ ಅನಸೂಯಮ್ಮ ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ತಾನಾಯಿತು ತನ್ನ ಮನೆಯಾಯಿತು ಎಂದು ಇರುವ ಜನರ ನಡುವೆ ಈ ರೀತಿ ಪರಿಸರಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವರ ಸಂಖ್ಯೆ ಬಹಳ ವಿರಳ. ಒಟ್ಟಾರೆಯಾಗಿ ಸಾಲುಮರದ ವೀರಾಚಾರಿಯ ಈ ಕಾಯಕಕ್ಕೆ ನಮ್ಮದೊಂದು ಸಲಾಂ.

TAGGED:davanagereEnvironmentalPublic Heroದಾವಣಗೆರೆಪಬ್ಲಿಕ್ ಟಿವಿಪಬ್ಲಿಕ್ ಹೀರೋಪರಿಸರ ಪ್ರೇಮಿ
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

northrop b 2 spirit stealth bomber 1
Latest

ಇರಾನ್‌ನ ಹಿಟ್‌ ಲಿಸ್ಟ್‌ ಸಿದ್ಧಪಡಿಸಿದ ಅಮೆರಿಕ – ಮಧ್ಯಪ್ರಾಚ್ಯದಲ್ಲಿ ಇಂದು ರಾತ್ರಿಯೇ ರಣಭೀಕರ ಕಾಳಗ?

Public TV
By Public TV
22 minutes ago
Siddaramaiah 15
Bengaluru City

ಕರ್ನಾಟಕದಲ್ಲಿ ಹೆಚ್ಚಾದ ಗ್ಯಾಸ್ ಟ್ರಬಲ್; ರಾಜ್ಯ V/S ಕೇಂದ್ರದ ನಡುವೆ ತಾರತಮ್ಯ ವಾರ್ – ಸಿದ್ದರಾಮಯ್ಯ ಕಿಡಿ

Public TV
By Public TV
31 minutes ago
siddaramaiah narendramodi delhi 2
Bengaluru City

ಮೋದಿ ಸರ್ಕಾರದಿಂದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನ ಸರ್ವನಾಶ – ಸಿಎಂ, ಡಿಕೆಶಿ, ಸುರ್ಜೇವಾಲಾ ಖಂಡನೆ

Public TV
By Public TV
51 minutes ago
Mandya Contractor Death copy
Crime

ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಕಂಟ್ರಾಕ್ಟರ್ ಶವವಾಗಿ ಪತ್ತೆ – ಕೊಲೆ ಶಂಕೆ

Public TV
By Public TV
2 hours ago
Mojtaba Khamenei
Latest

ಯುದ್ಧದ ಟೆನ್ಷನ್‌ ಮಧ್ಯೆ ಇರಾನ್‌ಗೆ ದೊಡ್ಡ ಆಘಾತ – ಪ್ರಜ್ಞಾಹೀನ ಸ್ಥಿತಿಯಲ್ಲಿ ಸುಪ್ರೀಂ ಲೀಡರ್‌

Public TV
By Public TV
3 hours ago
Lokayukta Raid
Bellary

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ರಾಜ್ಯದ 4 ಕಡೆ ಲೋಕಾಯುಕ್ತ ದಾಳಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?