ಹೈದರಾಬಾದ್: ಅಪಾರ್ಟ್ಮೆಂಟ್ನಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಆಂಧ್ರಪ್ರದೇಶದ ಹೈದರಾಬಾದ್ನ ಗಚಿಬೌಲಿಯಲ್ಲಿ ನಡೆದಿದೆ.
ರಘುರಾಮ್(35) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ರಘುರಾಮ್ ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಶ್ರೀದೇವಿ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಶ್ರೀದೇವಿ ಜೊತೆ ಕೆಲಸದಿಂದ ಹೊರಬರುತ್ತಿದ್ದಂತೆ ರಘುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರ ಪ್ರಕಾರ ರಘುರಾಮ್ ಬೈಪೋಲಾರ್ ಡಿಸಾರ್ಡರ್ (ಭ್ರಮೆ ಅಥವಾ ತನಗೆ ತಾನೇ ಹಾನಿ ಮಾಡಿಕೊಳ್ಳುವುದು) ರೋಗದಿಂದ ಬಳಲುತ್ತಿದ್ದರು. ಕೆಲಸದಿಂದ ಹೊರ ಬರುತ್ತಿದ್ದಂತೆ ರಘುರಾಮ್ ಮಂತ್ರಿ ಅಪಾರ್ಟ್ಮೆಂಟ್ನಿಂದ ಜಿಗಿದಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಘುರಾಮ್ ಮೂಲತಃ ವಿಜಯವಾಡಾದವರಾಗಿದ್ದು, ಎಂಟು ವರ್ಷಗಳ ಹಿಂದೆ ಶ್ರೀದೇವಿಯನ್ನು ಮದುವೆ ಆಗಿದ್ದರು. ಈ ದಂಪತಿಗೆ 6 ವರ್ಷದ ಮುದ್ದಾದ ಮಗಳು ಕೂಡ ಇದ್ದಾಳೆ. ರಘುರಾಮ್ ಚಂದನನಗರದಲ್ಲಿ ವಾಸಿಸುತ್ತಿದ್ದನು. ಬೈಪೋಲಾರ್ ಡಿಸಾರ್ಡರ್ ಇದ್ದ ಕಾರಣ ರಘುರಾಮ್ ಮೂಡ್ ಬದಲಾಗುತ್ತಿತ್ತು.
ಈ ಬಗ್ಗೆ ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.