ಗೌರಿ ಲಂಕೇಶ್ ಹತ್ಯೆಗೆ ಭೀಮಾತೀರದ ನಂಟು-ವಿಜಯಪುರದಿಂದ ರವಾನೆಯಾಗಿದ್ಯಂತೆ ಪಿಸ್ತೂಲ್

Public TV
1 Min Read
BIJ GAURI

ವಿಜಯಪುರ: ರಕ್ತಪಾತದಿಂದ ಪದೇ ಪದೇ ಹೆಸರಾಗುತ್ತಿರುವ ವಿಜಯಪುರ ಈಗ ಮತ್ತೆ ಸುದ್ದಿಗೆ ಬಂದಿದೆ. ಭೀಮಾನದಿ ಒಡಲಲ್ಲಿ ಈಗ ಗನ್, ಬುಲೆಟ್‍ಗಳ ಹೊಳೆಯೇ ಹರೀತಿದೆ ಎಂಬ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 5ರಂದು ನಡೆದ ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಕಗ್ಗೊಲೆಗೂ ಇಲ್ಲಿಂದಲೇ ಗುಂಡು ರವಾನೆಯಾಗಿದೆ. ಅಲ್ಲದೆ, ಹಂತಕರ ಪೈಕಿ ಓರ್ವ ಇಲ್ಲಿಯವನೇ ಎನ್ನಲಾಗಿದೆ. ಸೆಪ್ಟೆಂಬರ್ 14 ರಂದು ದರ್ಗಾ ಜೈಲ್ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ತನಿಖಾ ತಂಡ ಆ ಬಳಿಕ ಅಕ್ಟೋಬರ್ 1ರಂದು ಡಿಸಿಪಿ ಜಿನೇಂದ್ರ ಖನಗಾವಿ ಟೀಮ್ ಮತ್ತೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.

ಈ ಹಿಂದೆ ಬೆಂಗಳೂರಿನ ಎಪಿಎಂಸಿ ಅಧ್ಯಕ್ಷ ಕಡಬಗೇರಿ ಶ್ರೀನಿವಾಸ ಶೂಟೌಟ್ ಪ್ರಕರಣದಲ್ಲೂ ಇಲ್ಲಿಂದಲೇ ಪಿಸ್ತೂಲ್ ರವಾನೆಯಾದ ಸಂಶಯ ವ್ಯಕ್ತವಾಗಿತ್ತು. ಇದರ ಬೆನ್ನತ್ತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

KULADEEP JAIN

ಗನ್ ಮಾಫಿಯಾ ಬಗ್ಗೆ ಜಿಲ್ಲಾ ಎಸ್ ಪಿ ಕುಲದೀಪ್ ಜೈನ್ ಪ್ರತಿಕ್ರಿಯಿಸಿದ್ದು, 2016ರಲ್ಲಿ ಸುಮಾರು 11 ಪ್ರಕರಣಗಳು ದಾಖಲಾಗಿವೆ. ಇನ್ನು 25 ಆಯುಧಗಳು ಜಪ್ತಿ ಆಗಿದ್ದವು. ಅದರಲ್ಲಿ ಸುಮಾರು 41 ಬುಲೆಟ್ ಗಳು ದೊರೆತಿವೆ. ವಿಶೇಷ ತನಿಖಾ ತಂಡ ನಡೆಸಿದ ಕಾರ್ಯಾಚರಣೆಯಿಂದ ಈ ವರ್ಷ ಈಗಾಗಲೇ 4 ಪ್ರಕರಣಗಳಾಗಿ 7 ಆಯುಧಗಳು ಸೀಜ್ ಆಗಿವೆ ಅಂತ ಅವರು ಮಾಹಿತಿ ನೀಡಿದ್ದಾರೆ.

BIJ 1 1

ರಾಜ್ಯದ ಯಾವುದೇ ಮೂಲೆಯಲ್ಲಿ ಕೊಲೆ ಪ್ರಕರಣಗಳು ನಡೆದ್ರೂ, ಜನ ವಿಜಯಪುರ ಜಿಲ್ಲೆಯ ಭಾಗವನ್ನು ಬೊಟ್ಟು ಮಾಡಿ ತೋರಿಸುವಂತಹ ಅನುಮಾನಗಳು ವ್ಯಕ್ತವಾಗುತ್ತಿರುವುದು ನಮಗೆ ಬೇಸರ ತಂದಿದೆ. ಕೊಲೆ ಮಾಡಲು ಬಳಸುವಂತಹ ಕಂಟ್ರಿ ಪಿಸ್ತೂಲ್ ಗಳು ಎಲ್ಲೆ ಸಿಗಲಿ ಅವುಗಳನ್ನು ಸಂಪೂರ್ಣವಾಗಿ ಮಟ್ಟ ಹಾಕುವಂತಹ ಕೆಲಸವಾಗಬೇಕು. ಈ ಕೆಲಸ ಮಾಡಲು ಕರ್ನಾಟಕ ರಾಜ್ಯದ ಪೊಲೀಸರು ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಅಂತ ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಅಷ್ಟೇ ಅಲ್ಲ, 2012ರಿಂದ 31 ಆಗಸ್ಟ್ 2017ರವರೆಗೆ ಅಂದ್ರೆ 6 ವರ್ಷದಿಂದ ಇಲ್ಲಿವರೆಗೆ ಭಾರೀ ಪ್ರಕರಣಗಳು ಸಂಭವಿಸಿವೆ. ಅವುಗಳ ಡೀಟೇಲ್ಸ್ ಹೀಗಿದೆ.

BIJ 3

BIJ 2

https://www.youtube.com/watch?v=E5KklglYg8o

https://www.youtube.com/watch?v=jtfEPQsG_LQ

https://www.youtube.com/watch?v=SrOsUvt0IkA

BIJ 6 1

BIJ 7

BIJ 9

BIJ 8

BIJ 5 1

BIJ 4 1

Share This Article
Leave a Comment

Leave a Reply

Your email address will not be published. Required fields are marked *