ಅಮರಾವತಿ: ಆಂಧ್ರ ಪ್ರದೇಶದಲ್ಲಿ ಲೋಕಲ್ ಎಲೆಕ್ಷನ್ ಫೈಟ್ ತಾರಕಕ್ಕೇರಿದೆ. ವೈಎಸ್ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಕಾರ್ಯಕರ್ತರ ಸಂಘರ್ಷ ಮುಂದುವರಿದಿದೆ.
ಆಂಧ್ರಪ್ರದೇಶ ಪಂಚಾಯತ್ ಚುನಾವಣೆಗಳು ಅನಂತಪುರ, ಬಾಪಟ್ಲಾ ಸೇರಿದಂತೆ ಹಲವೆಡೆ ಮಾರಾಮಾರಿ ನಡೆದಿದೆ. ಅನಂತಪುರ ಜಿಲ್ಲೆ ಎಲ್ಲನೂರಿನ ಸಿಂಗನಮಲ ಮತಗಟ್ಟೆಯಲ್ಲಿ ಟಿಡಿಪಿ ಏಜೆಂಟ್ ಪ್ರವೇಶಕ್ಕೆ ವೈಎಸ್ಆರ್ಸಿಪಿ ಅಡ್ಡಿಪಡಿಸಿದ್ದಕ್ಕೆ ಗಲಾಟೆ ನಡೆದು ಪರಸ್ಪರ ಕಲ್ಲು ತೂರಾಟ ನಡೆದಿದೆ. ಬಡಿಗೆ, ಕುಡುಗೋಲಿನಿಂದಲೂ ದಾಳಿ ನಡೆದಿದೆ.
8 ಮಂದಿ ಟಿಡಿಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅನಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರೆದುರೇ ಬಡಿದಾಡಿಕೊಂಡಿದ್ದು, ಪರಿಸ್ಥಿತಿ ಹತೋಟಿಗೆ ತರಲು ಹೈರಾಣಾಗಿದ್ದಾರೆ.
ಇನ್ನು ಬಾಪಟ್ಲಾದಲ್ಲಿಯೂ ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ದೊಣ್ಣೆ, ಬಡಿಗೆಗಳಿಂದ ಬಡಿದಾಡಿಕೊಂಡಿದ್ದಾರೆ.
