ಚೆನ್ನೈ: ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ (Delimitation Bill) ನೀಡಿರುವ ಬೆಂಬಲ ಹಿಂಪಡೆಯುವಂತೆ ಮನವೊಲಿಸಲು ಆಗಮಿಸಿರುವ ಇಂಡಿ ಒಕ್ಕೂಟದ ನಾಯಕರನ್ನು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ (Stalin) ಸ್ವಾಗತಿಸಿದ್ದಾರೆ.
ಡಿಎಂಕೆ ಮುಖ್ಯಸ್ಥರೂ ಆಗಿರುವ ಸ್ಟಾಲಿನ್ ಚೆನ್ನೈನ ತಮ್ಮ ನಿವಾಸದಲ್ಲಿ ಆತ್ಮೀಯವಾಗಿ ಇಂಡಿ ಒಕ್ಕೂಟದ ನಾಯಕರನ್ನ ಬರಮಾಡಿಕೊಂಡಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ನೀಡಿರುವ ಬೆಂಬಲದ ಕುರಿತು ತಮ್ಮ ನಿಲುವನ್ನ ಮರುಪರಿಶೀಲಿಸುವಂತೆ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ಇಂಡಿಯಾ ಮೈತ್ರಿಕೂಟದ ನಾಯಕರು ಕೊನೆಯ ಹಂತದ ಪ್ರಯತ್ನ ನಡೆಸುತ್ತಿದ್ದಾರೆ.
ಈ ಸಂಬಂಧ ಚೆನ್ನೈನಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ನಡುವಿನ ಸಭೆ ನಡೆಯುತ್ತಿದೆ.

