ರಾಮನಗರ: ಆಶಾ ಕಾರ್ಯಕರ್ತೆಯರು (ASHA Workers Protest) ಕೇಂದ್ರದ ಮೇಲೂ ಒತ್ತಡ ಹೇರಬೇಕು. ಕೇವಲ ರಾಜ್ಯ ಸರ್ಕಾರ ಮಾತ್ರ ಹೊಣೆ ಅಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ಸುಮ್ಮನೆ ಯಾರೂ ಒತ್ತಡಕ್ಕೆ ಮಣಿಯಲು ಹೋಗಬೇಡಿ. ಈ ವಿಚಾರದಲ್ಲಿ ನೀವು ಕೇಂದ್ರ ಸರ್ಕಾರವನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಇದು ಕೇವಲ ರಾಜ್ಯ ಸರ್ಕಾರದ ಒಬ್ಬರದ್ದೇ ಹೊಣೆಯಲ್ಲ. ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ಆದರೆ, ಈ ಬಗ್ಗೆ ಹೆಚ್ಚಿನ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಕೇಂದ್ರ ಸರ್ಕಾರ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಮೊದಲು ಹೋರಾಟಗಾರರು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು. ಇದನ್ನೂ ಓದಿ: ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ: ಆರೋಗ್ಯ ಸಚಿವರ ಬೇಜವಾಬ್ದಾರಿ ಹೇಳಿಕೆ
ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಮದುವೆ ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ ಭಾಗಿಯಾಗಿ ನೂತನ ದಂಪತಿಗಳಿಗೆ ಶುಭಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಬಂದಿದ್ದೇನೆ. ಶಾಸಕ ದರ್ಶನ್ ಧ್ರುವನಾರಾಯಣ್, ಆಡಂಬರ ಬಿಟ್ಟು, ಸರಳತೆಗೆ ಗೌರವ ಕೊಟ್ಟು ರಾಮನಗರದ ಜನಪದ ಲೋಕದಲ್ಲಿ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ಸರಳ ವಿವಾಹವಾಗುತ್ತಿದ್ದಾರೆ. ಇದನ್ನು ನಾವೆಲ್ಲರೂ ಮೆಚ್ಚಬೇಕು. ಅವರಿಗೆ ಶುಭಕೋರಲು ಇಲ್ಲಿಗೆ ಬಂದಿದ್ದೇನೆ ಎಂದರು.
ಸದ್ಯದಲ್ಲೇ ಮತ್ತೆ ರಾಮನಗರಕ್ಕೆ ಬರುತ್ತೇನೆ. ಇಲ್ಲಿ ಮೆಡಿಕಲ್ ಇನ್ಸ್ಟಿಟ್ಯೂಷನ್ ಹಾಗೂ ರೇಷ್ಮೆ ಮಾರುಕಟ್ಟೆ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತಿದ್ದು, ಅವುಗಳ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಇತ್ತೀಚೆಗೆ ಜಪಾನ್ ಪ್ರವಾಸ ಮುಗಿಸಿ ಬಂದಿದ್ದೇನೆ. ನಮ್ಮ ಹಾರೋಹಳ್ಳಿಗೆ ದೊಡ್ಡ ಲಾಟರಿ ಹೊಡೆದಿದ್ದು, ಸುಮಾರು 600 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಈ ಕುರಿತು ಕನಕಪುರಕ್ಕೆ ಬಂದಾಗ ವಿವರವಾಗಿ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು – ಪ್ರತಿಭಟನೆ ಕೈಬಿಡುವಂತೆ `ಆಶಾ’ಗಳಿಗೆ ಸಿಎಂ ಮನವಿ
