ಮೈಸೂರು: ಮೀಸಲಾತಿ (Reservation) ರದ್ದು ಮಾಡಿದ್ರೆ ರಕ್ತಪಾತ ಆಗುತ್ತೆ ಅನ್ನೋದು ಬಿಜೆಪಿಗೆ (BJP) ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಮೈಸೂರಿನಲ್ಲಿ (Mysuru) ನಡೆದ ಸಂವಿಧಾನ ದಿನಾಚರಣೆ (Constitution Day) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಸಂವಿಧಾನ ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಬೇಕಿದೆ. ಸಂವಿಧಾನ ಉಳಿಸಲು ನಾವು ಎಂತಹ ಹೋರಾಟಕ್ಕೆ ಬೇಕಾದರೂ ತಯಾರಾಗಬೇಕಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ, ಮಹದೇವಪ್ಪ ಯಾವುದೋ ವಿಚಾರಕ್ಕೆ ತಮ್ಮ ಸಂಬಂಧವನ್ನು ಬಿಟ್ಟುಕೊಡುವವರಲ್ಲ: ಸುನಿಲ್ ಬೋಸ್
ಬಿಜೆಪಿಗೆ ಮೀಸಲಾತಿ ರದ್ದು ಮಾಡಿದರೆ ರಕ್ತಪಾತ ಆಗುತ್ತದೆ ಎಂದು ಗೊತ್ತಿದೆ. ಬಿಜೆಪಿಯವರದ್ದು ದ್ವೇಷ ಹುಟ್ಟು ಹಾಕುವ ಕೆಲಸ. ಅವರದ್ದು ಸಮಾಜ ಛಿದ್ರಿಸುವ ಕೆಲಸ ಎಂದು ಕಿಡಿಕಾರಿದ್ದಾರೆ.
ಸಂವಿಧಾನದ ಆಶಯಗಳು ಈಗಲೂ ಈಡೇರಿಲ್ಲ. ಬಿಜೆಪಿಯವರು ಈಗ ಸಂವಿಧಾನದ ಬಗ್ಗೆ ಬಹಳ ಮಾತಾಡುತ್ತಿದ್ದಾರೆ. ಸಂವಿಧಾನವನ್ನು ಸಾವರ್ಕರ್, ಹೆಗ್ಗಡೆವಾರ್ ವಿರೋಧ ಮಾಡಿದ್ದರು. ಭಾರತೀಯತೆಯೇ ಈ ಸಂವಿಧಾನದಲ್ಲಿ ಇಲ್ಲ ಎಂದು ಸಾವರ್ಕರ್ ಟೀಕಿಸಿದ್ದರು. ಕೇಂದ್ರದ ಸಚಿವರೊಬ್ಬರು ಕೆಲ ವರ್ಷಗಳ ಹಿಂದೆ ಸಂವಿಧಾನ ಬದಲಾಯಿಸಲು ನಾವು ಬಂದಿದ್ದೇವೆ ಎಂದು ಹೇಳಿದ್ದರು. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬರೀ ರಾಜಕೀಯ ಸ್ವಾತಂತ್ರ್ಯದಿಂದ ಈ ದೇಶದಲ್ಲಿ ಬದಲಾವಣೆಯಾಗಲು ಸಾಧ್ಯವಿಲ್ಲ. ಅಸಮಾನತೆ ತೊಲಗಬೇಕು, ಆಗ ಮಾತ್ರ ದೇಶದಲ್ಲಿ ಬದಲಾವಣೆ ಆಗುತ್ತದೆ. ಅಸಮಾನತೆ ಹೊಗದೆ ಜಾತಿಯತೆ ಹೋಗಲ್ಲ. ಆರ್ಥಿಕ, ಸಾಮಾಜಿಕ ಸಮಾನತೆ ಬರಬೇಕು. ಅದು ಬಾರದೇ ಸ್ವಾತಂತ್ರ್ಯ ಪಡೆದಿದ್ದಕ್ಕೆ ಸಾರ್ಥಕತೆ ಬರಲ್ಲ. ಬಸವಣ್ಣನವರು ಜಾತಿ ವ್ಯವಸ್ಥೆ ಹೋಗಬೇಕು ಎಂದು ಪ್ರತಿಪಾದಿಸಿದರು. ಆದರೆ ಇಂದು ಕೂಡ ಜಾತಿ ವ್ಯವಸ್ಥೆ ಇದೆ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ನಾವು ಜಗಳವೇ ಆಡಿಲ್ಲ, ಮುನಿಸು ಎಲ್ಲಿಂದ ಬಂತು? – ಸಿದ್ದು ಮನೆಯಲ್ಲಿ ಮಹದೇವಪ್ಪ ಮಾತು
