– ಪೊಲೀಸ್ ಭದ್ರತೆಯ ಲಾರಿಯಲ್ಲಿ ಆಭರಣ ಆಗಮನ
– ದಾನಿಯನ್ನು ಹಾಡಿ ಹೊಗಳಿದ ಸಿಎಂ ನಾಯ್ಡು
ತಿರುಪತಿ: ಕಲಿಯುಗದ ಪ್ರತ್ಯಕ್ಷ ದೈವ, ಸಕಲ ಸಂಪತ್ತಿನ ಒಡೆಯ, ಐಶ್ವರ್ಯ ಮತ್ತು ಸಮೃದ್ಧಿಯನ್ನು ಅನುಗ್ರಹಿಸುವ ತಿರುಮಲ ತಿಮ್ಮಪ್ಪನಿಗೆ(Tirumala Temple) ಭಕ್ತರು ತಮ್ಮ ಶಕ್ತಿಗೆ ತಕ್ಕಂತೆ ಕಾಣಿಕೆ ನೀಡುವುದು ವಾಡಿಕೆ. ಆದರೆ, ಇದೀಗ ತಿರುಮಲ ತಿರುಪತಿ ದೇವಸ್ಥಾನದ (TTD) ಇತಿಹಾಸದಲ್ಲೇ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಚೆನ್ನೈ ಮೂಲದ ಉದ್ಯಮಿಯೊಬ್ಬರು ಶ್ರೀ ವೆಂಕಟೇಶ್ವರ ಸ್ವಾಮಿಗೆ(Lord Venkateswara) ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.
ಚೆನ್ನೈನ ಉದ್ಯಮಿ ವರ್ಧಮಾನ್ ಜೈನ್(Vardhaman Jain) ಅವರು ತಮ್ಮ ಈ ಐತಿಹಾಸಿಕ ಕಾಣಿಕೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಸುಮಾರು 161 ಕೋಟಿ ರೂ. ನಿಂದ 206 ಕೋಟಿ ರೂಪಾಯಿಗಳವರೆಗೆ ಈ ಚಿನ್ನಾಭರಣಗಳ ಮೌಲ್ಯವನ್ನು ಅಂದಾಜಿಸಲಾಗಿದ್ದು, ಭಾರತದ ದೇವಾಲಯಗಳ ಇತಿಹಾಸದಲ್ಲೇ ಒಬ್ಬ ವ್ಯಕ್ತಿ ನೀಡಿದ ಅತ್ಯಂತ ದೊಡ್ಡ ದೇಣಿಗೆಗಳಲ್ಲಿ ಇದೂ ಒಂದಾಗಿದೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ತಿರುಮಲಕ್ಕೆ ತರಲಾದ ಈ ಆಭರಣಗಳನ್ನು ರಂಗನಾಯಕುಲ ಮಂಟಪದಲ್ಲಿ ವಿಶೇಷವಾಗಿ ನಿರ್ಮಿಸಲಾದ ಮರದ ಸ್ಟ್ಯಾಂಡ್ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ತಿರುಪತಿಗೆ ಆಗಮಿಸಿದ ಸಿಎಂ ಚಂದ್ರಬಾಬು ನಾಯ್ಡು ಅವರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಶ್ರೀವಾರಿ ದರ್ಶನ ಪಡೆದರು. ಬಳಿಕ ಬೆಳಿಗ್ಗೆ 11.30ರ ಸುಮಾರಿಗೆ ನಡೆದ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವರ್ಧಮಾನ್ ಜೈನ್ ಅವರು ಆಭರಣಗಳನ್ನು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಹಸ್ತಾಂತರಿಸಿದರು. ಶುಕ್ರವಾರ ನಡೆಯಲಿರುವ ಅಭಿಷೇಕದ ನಂತರ, ದೇವಸ್ಥಾನದ ಅರ್ಚಕರು ಈ ಹೊಸ ಚಿನ್ನಾಭರಣಗಳಿಂದ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಿದ್ದಾರೆ.
15 ತಿಂಗಳ ಶ್ರಮ
ಚೆನ್ನೈನ ಪ್ರಸಿದ್ಧ ‘ಜಿಆರ್ಟಿ ಜ್ಯುವೆಲರ್ಸ್’ (GRT Jewellers) ಸಂಸ್ಥೆಯಲ್ಲಿ ನುರಿತ ಕುಶಲಕರ್ಮಿಗಳ ತಂಡವು ಸುಮಾರು 15 ತಿಂಗಳ ಕಾಲ ಹಗಲಿರುಳು ಶ್ರಮಿಸಿ, ಆಗಮ ಶಾಸ್ತ್ರದ ನಿಯಮಗಳು ಹಾಗೂ ಟಿಟಿಡಿಯ ಪೂಜಾ ವಿಧಿವಿಧಾನಗಳಿಗೆ ಅನುಗುಣವಾಗಿ ಈ ಆಭರಣಗಳನ್ನು ಸಿದ್ಧಪಡಿಸಿದೆ.
ಕಾಣಿಕೆಯಲ್ಲಿ ಏನೇನಿದೆ?
ಒಟ್ಟು 9 ಸೆಟ್ಗಳಲ್ಲಿ ಸುಮಾರು 40 ರಿಂದ 45 ಬಗೆಯ ಸಾಂಪ್ರದಾಯಿಕ ಆಭರಣಗಳನ್ನು ತಯಾರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಶ್ರೀವಾರಿ ಕಿರೀಟ, ಪದ್ಮ ಪಾದಗಳು, ಡಾಬು (ವಡ್ಡಾಣಂ), ಭುಜಕೀರ್ತಿಗಳು, ಶಂಖು-ಚಕ್ರಗಳು, ನಾಗಾಭರಣ, ಕೈಗಳಿಗೆ ತೊಡಿಸುವ ಅಭಯ ಹಸ್ತಗಳು, ಪೀತಾಂಬರ, ಕಂಠಹಾರಗಳು, ಕಾಲ್ಗೆಜ್ಜೆಗಳು ಮತ್ತು ಪದ್ಮಪೀಠ (ಕಮಲದ ಪೀಠ) ಸೇರಿವೆ.
ಸಿಎಂ ಮೆಚ್ಚುಗೆ
ಈ ಬೃಹತ್ ದೇಣಿಗೆ ನೀಡಿದ ವರ್ಧಮಾನ್ ಜೈನ್ ಅವರನ್ನು ಸಿಎಂ ಚಂದ್ರಬಾಬು ನಾಯ್ಡು ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ, ಟಿಟಿಡಿಯ ಎಲ್ಲಾ ಲೆಕ್ಕಪತ್ರಗಳು ಅತ್ಯಂತ ಪಾರದರ್ಶಕವಾಗಿವೆ ಎಂದು ಅವರು ತಿಳಿಸಿದರು. ವರದಿಗಳ ಪ್ರಕಾರ, ತಿರುಮಲ ದೇವಸ್ಥಾನವು ಈಗಾಗಲೇ ಸುಮಾರು 10 ಟನ್ಗಳಷ್ಟು ಚಿನ್ನದ ಸಂಗ್ರಹವನ್ನು ಹೊಂದಿದೆ.
ದೇಣಿಗೆಗೆ ಕಾರಣವೇನು?
ಉದ್ಯಮಿ ವರ್ಧಮಾನ್ ಜೈನ್ ಅವರು ಇತ್ತೀಚೆಗೆ ತಮ್ಮ ಕಂಪನಿಯ ಶೇ. 60 ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದು, ಅದರಿಂದ ಸುಮಾರು 6,000 ಕೋಟಿ ರೂ. ಗಳಿಸಿದ್ದರು. ತಮಗೆ ಸಿಕ್ಕ ಈ ಯಶಸ್ಸು ಮತ್ತು ಸಂಪತ್ತಿನ ಒಂದು ಭಾಗವನ್ನು ಶ್ರೀ ವೆಂಕಟೇಶ್ವರ ಸ್ವಾಮಿಗೆ ಚಿನ್ನದ ಆಭರಣಗಳ ರೂಪದಲ್ಲಿ ಕಾಣಿಕೆ ನೀಡಲು ಅವರು ನಿರ್ಧರಿಸಿದ್ದರು.
A Grand Offering to Lord Sri Venkateswara at Tirumala – 121 kg of Gold Ornaments!
Businessman Vardhaman Jain from Chennai is presenting 121 kg of gold ornaments, valued above ₹160 crore, to Lord Sri Venkateswara at Tirumala.
The ornaments have been specially crafted to adorn the Lord from head to toe and comprise 45 varieties of traditional jewellery arranged in 9 sets.
The grand offering includes:
▪️ Crown (Kireetam)
▪️ Padma Paadalu (lotus feet ornaments)
▪️ Waist belt
▪️ Shoulder ornaments
▪️ Salagrama necklaces
▪️ Shankha and Chakra ornaments
▪️ Various traditional gold ornaments
The ornaments were brought to the Sri Venkateswara Temple in large boxes for the offering, in the presence of the Chief Minister.
The Chairman of Vara Future LLP, a company based in Chennai, has decided to donate 121 kg of gold. He received ₹6,000 crore after selling a 60% stake in his company and is offering the gold as a donation (to Lord Venkateswara at Tirumala) from those proceeds.
🙏 Vardhaman Jain’s Previous Contributions to TTD
Vardhaman Jain has previously made several contributions to Tirumala and TTD:
▪️ 2024: Contributed ₹1 crore towards the expansion of a temple in Chennai.
▪️ November 2024: Donated ₹1.01 crore to the TTD Anna Prasadam Trust and ₹1.01 crore to the Pranadanam Trust.
▪️ 2025: Donated ₹5 crore to SV Bhakti Channel and ₹1 crore towards cow protection.
▪️ May 2026: Announced a donation of an electric bus to Tirumala.
▪️ Latest offering: 121 kg of gold ornamentsThe magnificent donation of 121 kg of gold ornaments is being regarded as one of the major offerings in Tirumala’s history.
#AndhraPradesh #Tirumala #Tirupati #TTD #India
— Amaravati News24 (@amaravatinews24) November 26, 2026
ಯಾರು ಈ ವರ್ಧಮಾನ್ ಜೈನ್?
ವರ್ಧಮಾನ್ ಜೈನ್ ಅವರು ಕೇವಲ ಯಶಸ್ವಿ ಉದ್ಯಮಿಯಷ್ಟೇ ಅಲ್ಲದೆ, ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಚೆನ್ನೈನ ‘ಕಂಚಿ ಕಾಮಕೋಟಿ ಚೈಲ್ಡ್ಸ್ ಟ್ರಸ್ಟ್ ಆಸ್ಪತ್ರೆ’ಯ ವ್ಯವಸ್ಥಾಪಕ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸರಿತಾ ಜೈನ್ ಫೌಂಡೇಶನ್’ ಮೂಲಕ ‘ವಿದ್ಯಾ ಸೇವಾ’ ಮತ್ತು ‘ವೈದ್ಯ ಸೇವಾ’ ಕಾರ್ಯಕ್ರಮಗಳ ಅಡಿಯಲ್ಲಿ ಬಡವರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಬಡ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೌಶಲ್ಯ ತರಬೇತಿ ನೀಡುವ ಸಲುವಾಗಿ ‘ಆವಿಷ್ಕಾರ್’ (Avishkar) ಎಂಬ ಸಂಸ್ಥೆಯನ್ನು ಸಹ ಸ್ಥಾಪಿಸಿದ್ದಾರೆ.



