ಬಾಗಲಕೋಟೆ: ಹೋಮ್ ವರ್ಕ್ ಮಾಡದ 2ನೇ ತರಗತಿ ವಿದ್ಯಾರ್ಥಿಗೆ (Student) ಶಿಕ್ಷಕಿ (Teacher) ಹಾಗೂ ಮುಖ್ಯ ಶಿಕ್ಷಕ ಸೇರಿ ಲಾಠಿಯಿಂದ ಮನಬಂದಂತೆ ಥಳಿಸಿದ ಘಟನೆ ರಬಕವಿಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರಾಣಿ ಚೆನ್ನಮ್ಮ ಅನುದಾನಿತ ಶಾಲೆಯಲ್ಲಿ ನಡೆದಿದೆ.
ಅನಾರೋಗ್ಯದ ಹಿನ್ನಲೆ ಬಾಲಕ ಶಾಲೆಗೆ ಎರಡು ದಿನ ರಜೆ ಹಾಕಿದ್ದ. ಇಂದು (ನ.26) ಶಾಲೆಗೆ ಹಾಜರಾಗುತ್ತಿದ್ದಂತೆ, ಯಾಕೆ ಹೋಮ್ ವರ್ಕ್ ಮಾಡಿಲ್ಲ ಎಂದು ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕ ಸೇರಿ ಲಾಠಿಯಿಂದ ಬೆನ್ನು, ಕಾಲು, ಹೊಟ್ಟೆ ಭಾಗದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕನ ಮೈತುಂಬಾ ಬಾಸುಂಡೆ ಬಂದಿದ್ದು, ಆತನನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು, ನನ್ನನ್ನೂ ಆನೆಗಳು ತುಳಿದು ಸಾಯಿಸಲಿ – ತೋಟದಲ್ಲಿ ಕುಳಿತು ರೈತನ ಕಣ್ಣೀರು
ಈ ಸಂಬಂಧ ವಿದ್ಯಾರ್ಥಿಯ ಪೋಷಕರು ರಬಕವಿಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಹಾಗೂ ಮುಖ್ಯ ಶಿಕ್ಷಕ ಅಂಗಡಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು – ಪ್ರತಿಭಟನೆ ಕೈಬಿಡುವಂತೆ `ಆಶಾ’ಗಳಿಗೆ ಸಿಎಂ ಮನವಿ
