ಶಿಮ್ಲಾ: ಕುಟುಂಬದವರಿಂದ ದೂರವಾಗಿದ್ದ 75 ವರ್ಷದ ವೃದ್ಧ ಹಾಗೂ 63 ವರ್ಷದ ವೃದ್ಧೆ ವೃದ್ಧಾಶ್ರಮದಲ್ಲೇ (Old Age Home) ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ಹಿಮಾಚಲ ಪ್ರದೇಶದಲ್ಲಿ (Himachal Pradesh) ನಡೆದಿದೆ.
ಬಿಲಾಸ್ಪುರ (Bilaspur) ಜಿಲ್ಲೆಯ ಘಾಘಸ್ನಲ್ಲಿರುವ ಅಪ್ನಾ ಘರ್ ವೃದ್ಧಾಶ್ರಮದಲ್ಲಿ ಈ ಅಪರೂಪದ ಮದುವೆ ನಡೆದಿದೆ. ಕನ್ಹಯ್ಯಾ ಲಾಲ್ ಹಾಗೂ ಸಬೀನಾ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ವೃದ್ಧಾಶ್ರಮದ ನಿವಾಸಿಗಳು, ಸಿಬ್ಬಂದಿ ಹಾಗೂ ಹಿತೈಷಿಗಳು ಮದುವೆಗೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಹೃದಯಾಘಾತಕ್ಕೆ LLB ವಿದ್ಯಾರ್ಥಿ ಬಲಿ
ಸಾಂಪ್ರದಾಯಿಕ ಮದುವೆಯ ವಿಧಿವಿಧಾನಗಳೊಂದಿಗೆ ನಡೆದ ಸಮಾರಂಭದಲ್ಲಿ ಹಾರ ಬದಲಾಯಿಸಿಕೊಂಡ ಜೋಡಿ, ಅಗ್ನಿಸಾಕ್ಷಿಯಾಗಿ ಏಳು ಹೆಜ್ಜೆಗಳನ್ನು ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಲಾಸ್ಪುರ ಜಿಲ್ಲಾಧಿಕಾರಿ ಕಿರಣ್ ಭದಾನಾ ಕೂಡ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಮದುವೆಯ ಉಡುಗೊರೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಮಂಗಳವಾರ ಸಂಜೆ ಅರಿಶಿನ ಶಾಸ್ತ್ರದೊಂದಿಗೆ ಮದುವೆ ಸಂಭ್ರಮ ಆರಂಭವಾಗಿತ್ತು. ಕನ್ಹಯ್ಯಾ ಲಾಲ್ ಹಾಗೂ ಸಬೀನಾ ಹಳದಿ ಬಣ್ಣದ ಉಡುಪು ಧರಿಸಿ, ಸಾಂಪ್ರದಾಯಿಕ ಹಿಮಾಚಲಿ ಹಾಡುಗಳಿಗೆ ಸಂಭ್ರಮಿಸಿದ್ದಾರೆ. ವೃದ್ಧಾಶ್ರಮದ ಇತರ ನಿವಾಸಿಗಳು ಹಾಗೂ ಸಂಸ್ಥೆಯ ಸದಸ್ಯರು ಮದುವೆಯಲ್ಲಿ ಪಾಲ್ಗೊಂಡು ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಇದನ್ನೂ ಓದಿ: 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಪೊಲೀಸ್ ಕಾನ್ಸ್ಟೇಬಲ್ಗೆ 5 ವರ್ಷ ಜೈಲು ಶಿಕ್ಷೆ
ಮದುವೆ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕಿರಣ್ ಭದಾನಾ, ಈ ವಿವಾಹ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡಿದೆ ಎಂದು ಹೇಳಿದ್ದಾರೆ. ಅಪ್ನಾ ಘರ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಅವರು, ವಯಸ್ಸಿನ ಮಿತಿ ಇಲ್ಲದೆ ಪ್ರತಿಯೊಬ್ಬರಿಗೂ ಸಂತೃಪ್ತ ಜೀವನ ನಡೆಸುವ ಹಕ್ಕಿದೆ ಎಂದಿದ್ದಾರೆ. ವಯಸ್ಸಾಗುತ್ತಿದ್ದಂತೆ ಜೀವನದ ಸಂತೋಷ ಅಥವಾ ಸಂಗಾತಿಯನ್ನು ಹುಡುಕುವ ಆಸೆಯನ್ನು ಬಿಟ್ಟುಕೊಡಬೇಕಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕ ದರ್ಶನ್ ಧ್ರುವನಾರಾಯಣ್ ಮದುವೆ ಸಂಭ್ರಮ – ಜಾನಪದ ಲೋಕದಲ್ಲಿ ಇಂದು ಮಂತ್ರಮಾಂಗಲ್ಯ
ಒಂಟಿತನದಿಂದ ದಾಂಪತ್ಯ ಜೀವನದವರೆಗೆ:
ಅಪ್ನಾ ಘರ್ ಸಂಸ್ಥೆಯ ಸಂಸ್ಥಾಪಕ ಹಾಗೂ ವಕೀಲ ಪ್ರಕಾಶ್ ಚಂದ್ ಬನ್ಸಾಲ್ ಅವರ ಪ್ರಕಾರ, 2022ರಲ್ಲಿ ಸಂಸ್ಥೆಯ ತಂಡ ಕನ್ಹಯ್ಯಾ ಲಾಲ್ ಅವರನ್ನು ಗುಹೆಯೊಂದರಿಂದ ರಕ್ಷಿಸಿತ್ತು. ಈ ಹಿಂದೆ ಅವರು ಕುಟುಂಬದೊಂದಿಗೆ ವಾಸವಾಗಿದ್ದರು. ಆದರೆ ಪತ್ನಿ ಮೃತಪಟ್ಟ ಬಳಿಕ ತಮ್ಮ ಆಸ್ತಿಯನ್ನು ಸಹೋದರರಿಗೆ ವರ್ಗಾಯಿಸಿದ್ದರು. ಬಳಿಕ ಕುಟುಂಬದವರೇ ಅವರನ್ನು ಮನೆಯಿಂದ ಹೊರಹಾಕಿದ್ದರು. ಇದರಿಂದಾಗಿ ಅವರು ಗುಹೆಯಲ್ಲಿ ವಾಸಿಸುವಂತಾಗಿತ್ತು. ಮಂಡಿ ಜಿಲ್ಲೆಯ ಜಂಜೇಹ್ಲಿ ಪ್ರದೇಶದ ಥುನಾಗ್ ಗ್ರಾಮದವರಾದ ಕನ್ಹಯ್ಯಾ ಲಾಲ್ ಅವರನ್ನು ರಕ್ಷಿಸಿದ ಬಳಿಕ ವೃದ್ಧಾಶ್ರಮಕ್ಕೆ ಕರೆತರಲಾಗಿತ್ತು. ಅಂದಿನಿಂದ ಅವರು ಅಲ್ಲಿಯೇ ವಾಸವಾಗಿದ್ದರು. ಇದನ್ನೂ ಓದಿ: ಹಾಸನ ಆಯ್ತು, ಈಗ ಕೊಡಗಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು
ಇನ್ನು ಮೂಲತಃ ಕೋಲ್ಕತ್ತಾದವರಾದ ಸಬೀನಾ, ಮನೆಯಿಂದ ದೂರವಾಗಿ ಅಲೆದಾಡುತ್ತಾ ಹಿಮಾಚಲ ಪ್ರದೇಶಕ್ಕೆ ಬಂದಿದ್ದರು. ಅವರನ್ನು ಮೊದಲು ಶಿಮ್ಲಾಗೆ ಕರೆತಂದು ಬಳಿಕ 2025ರಲ್ಲಿ ಬಿಲಾಸ್ಪುರದ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಗಿತ್ತು. ಒಂದೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ಕನ್ಹಯ್ಯಾ ಲಾಲ್ ಹಾಗೂ ಸಬೀನಾ ನಡುವೆ ಆತ್ಮೀಯತೆ ಬೆಳೆದಿತ್ತು. ಕಾಲಕ್ರಮೇಣ ಈ ಆತ್ಮೀಯತೆ ಪ್ರೀತಿಯಾಗಿ ಬದಲಾಗಿದ್ದು, ಜೀವನದ ಉಳಿದ ದಿನಗಳನ್ನು ಒಟ್ಟಿಗೆ ಕಳೆಯಲು ಇಬ್ಬರೂ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹತ್ತನೇ ದಿನಕ್ಕೆ ಕಾಲಿಟ್ಟ `ಆಶಾ’ ಪ್ರತಿಭಟನೆ – ಮನವೊಲಿಸುವಲ್ಲಿ ಸಕ್ಸಸ್ ಆಗ್ತಾರಾ ಸಿಎಂ?
ಇಬ್ಬರೂ ಪರಸ್ಪರ ಸಂಗಾತಿಗಳಾಗಲು ನಿರ್ಧರಿಸಿರುವುದು ಸಮಾಜಕ್ಕೆ ಮಹತ್ವದ ಸಂದೇಶ ನೀಡಿದೆ ಎಂದು ಪ್ರಕಾಶ್ ಚಂದ್ ಬನ್ಸಾಲ್ ಹೇಳಿದ್ದಾರೆ. ಕುಟುಂಬಗಳಿಂದ ತಿರಸ್ಕೃತರಾದ ಹಿರಿಯ ನಾಗರಿಕರಿಗೆ ಸಮಾಜ ಬೆಂಬಲ ನೀಡಬೇಕು. ಅವರು ಮತ್ತೆ ಹೊಸ ಜೀವನ ಕಟ್ಟಿಕೊಳ್ಳಲು ನೆರವಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಜಿಪ್ಟ್ನ ಹೆದ್ದಾರಿಯಲ್ಲಿ ಇಂಧನ ಲಾರಿ ಪಲ್ಟಿ – ಭಾರೀ ಬೆಂಕಿಗೆ ಅವಘಡಕ್ಕೆ 31 ಜನ ಬಲಿ
ಸೋಲನ್ ಜಿಲ್ಲೆಯ ನಲಗಢಕ್ಕೆ ಪಯಣ:
ಮದುವೆಯ ಬಳಿಕ ಕನ್ಹಯ್ಯಾ ಲಾಲ್ ಹಾಗೂ ಸಬೀನಾ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಲಗಢದಲ್ಲಿರುವ ಮತ್ತೊಂದು ವೃದ್ಧಾಶ್ರಮಕ್ಕೆ ತೆರಳಲಿದ್ದಾರೆ. ಅಲ್ಲಿ ತಮ್ಮ ದಾಂಪತ್ಯ ಜೀವನವನ್ನು ಆರಂಭಿಸಲಿದ್ದಾರೆ. ಇದನ್ನೂ ಓದಿ: ಕೆಆರ್ಎಸ್ ಜಲಾಶಯದಲ್ಲಿ ತೀವ್ರ ನೀರಿನ ಅಭಾವ – 95 ಅಡಿಗೆ ಕುಸಿದ ನೀರಿನ ಮಟ್ಟ
