ಕೈರೋ: ಈಜಿಪ್ಟ್ (Egypt) ರಾಜಧಾನಿ ಕೈರೋದಲ್ಲಿ (Cairo) ಬುಧವಾರ ಇಂಧನ ಟ್ರಕ್ ಒಂದು ಹೆದ್ದಾರಿಯಲ್ಲಿ ಪಲ್ಟಿಯಾಗಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ರಿಂಗ್ ರಸ್ತೆಯಲ್ಲಿ ಅಪಘಾತದಿಂದ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 21 ಜನರು ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ಕಾರುಗಳು ಮತ್ತು ಬೈಕ್ ಸುಟ್ಟುಹೋಗಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೌದಿ ಅರೇಬಿಯಾದ ಗೋಪುರದ ಮೇಲೆ ಹೌತಿ ದಾಳಿ – ಇಬ್ಬರು ಭಾರತೀಯರು ಸೇರಿ 11 ಮಂದಿಗೆ ಗಾಯ
ಅಪಘಾತ ಸಂಭವಿಸಿದ ರಸ್ತೆಯ ಭಾಗವು ಗ್ರೇಟರ್ ಕೈರೋ ಪ್ರದೇಶದ ಭಾಗವಾಗಿರುವ ಗಿಜಾದ ಜನನಿಬಿಡ ನೆರೆಹೊರೆಯ ವಾರಕ್ನಲ್ಲಿದೆ. ರಕ್ಷಣಾ ಸಿಬ್ಬಂದಿ ದಟ್ಟ ಬೆಂಕಿಗೆ ಸಿಲುಕಿದ್ದ ಕಾರುಗಳಿಂದ ಜನರನ್ನು ರಕ್ಷಿಸಿದ್ದಾರೆ.
ಹೆದ್ದಾರಿಯಾದ ಕೈರೋದ ರಿಂಗ್ ರಸ್ತೆಯಲ್ಲಿ ಇಂಧನ ತುಂಬಿದ ಟ್ರಕ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಹತ್ತಿರದ ವಾಹನಗಳನ್ನು ಆವರಿಸಿಕೊಂಡು ಅವಘಡ ಸಂಭವಿಸಿತು. ಘಟನಾ ಸ್ಥಳಕ್ಕೆ 39 ಅಂಬುಲೆನ್ಸ್ಗಳನ್ನು ಕಳುಹಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಬಂಗಾಳ, ಬಿಹಾರದಲ್ಲೂ ಭೂಮಿ ಕಂಪನ; ಬೆಚ್ಚಿಬಿದ್ದ ಜನ
