ದೋಹಾ: ಬಿಹಾರದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ(Vaibhav Sooryavanshi) ಕ್ರಿಕೆಟ್ ಇತಿಹಾಸವನ್ನು ಮತ್ತೊಮ್ಮೆ ತಿರುಗಿ ಬರೆದಿದ್ದಾರೆ. ಮಂಗಳವಾರ ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್(Asia Cup Rising Stars) ಪಂದ್ಯದಲ್ಲಿ ಯುಎಇ (UAE) ವಿರುದ್ಧ ಕೇವಲ 52 ಎಸೆತಗಳಲ್ಲಿ ವಿಶ್ವದಾಖಲೆಯ(World Record) ದ್ವಿಶತಕ ಸಿಡಿಸುವ ಮೂಲಕ ವೈಭವ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾರತ ಹಿರಿಯರ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೈಭವ್, ಈ ಪಂದ್ಯದಲ್ಲಿ ‘ಲಿಸ್ಟ್-ಎ’ (List A) ಹಾಗೂ ವೃತ್ತಿಪರ ಕ್ರಿಕೆಟ್ನ ಹಲವು ವಿಶ್ವದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ.
Doha called for a weather update, but got a full-blown Sooryavanshi storm instead! 🌪️
Watch India A vs UAE in the #DPWorldAsiaCupRisingStarsMens2026, LIVE NOW on Sony Sports Network TV channels & Sony LIV.
#SonySportsNetwork #SonyLIV #INDvUAE https://t.co/tI7zwqqHHn
— Sony Sports Network (@SonySportsNetwk) November 24, 2026
ಒಂದೇ ಇನ್ನಿಂಗ್ಸ್ನಲ್ಲಿ ವಿಶ್ವದಾಖಲೆಗಳ ಸುರಿಮಳೆ:
ಅತಿ ವೇಗದ ಶತಕ (28 ಎಸೆತ): ವೈಭವ್ ತಮ್ಮ ಇನ್ನಿಂಗ್ಸ್ನಲ್ಲಿ 14 ಸಿಕ್ಸರ್ಗಳ ನೆರವಿನಿಂದ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ (29 ಎಸೆತ) ಹಾಗೂ ಎಬಿ ಡಿವಿಲಿಯರ್ಸ್ (31 ಎಸೆತ) ಅವರ ದಾಖಲೆಗಳನ್ನು ಮುರಿದು ‘ಲಿಸ್ಟ್-ಎ’ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ವಿಶ್ವದಾಖಲೆ ಬರೆದರು.
ಅತಿ ವೇಗದ 150 ರನ್ (40 ಎಸೆತ): ಶತಕದ ಬಳಿಕವೂ ಅಬ್ಬರ ಮುಂದುವರಿಸಿದ ಅವರು ಕೇವಲ 40 ಎಸೆತಗಳಲ್ಲಿ 150 ರನ್ ಪೂರೈಸಿ, 2025ರಲ್ಲಿ ತಾವೇ ನಿರ್ಮಿಸಿದ್ದ 59 ಎಸೆತಗಳ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ಅತಿ ವೇಗದ ದ್ವಿಶತಕ (52 ಎಸೆತ): ಕೇವಲ 52 ಎಸೆತಗಳಲ್ಲಿ 200 ರನ್ ಗಡಿ ದಾಟುವ ಮೂಲಕ ಹಿರಿಯರ ವೃತ್ತಿಪರ ಕ್ರಿಕೆಟ್ (ದೇಶೀಯ ಮತ್ತು ಅಂತಾರಾಷ್ಟ್ರೀಯ) ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು. ನ್ಯೂಜಿಲೆಂಡ್ನ ಚಾಡ್ ಬೋವ್ಸ್ (103 ಎಸೆತ) ಅವರ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ವೈಭವ್ ಅರ್ಧಕ್ಕರ್ಧ ಎಸೆತಗಳ ಅಂತರದಲ್ಲಿ ಮುರಿದಿದ್ದಾರೆ.
ಒಂದೇ ಇನ್ನಿಂಗ್ಸ್ನಲ್ಲಿ 28 ಸಿಕ್ಸರ್: ದ್ವಿಶತಕದ ಬೆನ್ನಲ್ಲೇ ಮುಂದಿನ ಎಸೆತದಲ್ಲಿ ಔಟಾದ ವೈಭವ್, ಒಟ್ಟು 53 ಎಸೆತಗಳಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಚಚ್ಚಿದರು. ಈ ಮೂಲಕ ವೃತ್ತಿಪರ ಕ್ರಿಕೆಟ್ನ ಒಂದೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದಾಖಲೆಯನ್ನು (ಈ ಹಿಂದೆ ತನ್ಮಯ್ ಅಗರ್ವಾಲ್ 26 ಸಿಕ್ಸರ್ ಸಿಡಿಸಿದ್ದರು) ತಮ್ಮದಾಗಿಸಿಕೊಂಡರು.
Vaibhav Sooryavanshi smashes the fastest century in List A cricket, going one better than Jake Fraser-McGurk’s 29-ball record! 🥵😱😮💨
Watch India A vs UAE in the #DPWorldAsiaCupRisingStarsMens2026, LIVE NOW on Sony Sports Network TV channels & Sony LIV.
#SonySportsNetwork #SonyLIV #INDvUAE
— Sony Sports Network (@SonySportsNetwk) November 24, 2026
ವೈಭವ್ ವೈಭವದ ಬ್ಯಾಟಿಂಗ್ ಹೀಗಿತ್ತು:
ಅಭಿಷೇಕ್ ಶರ್ಮಾ ಜೊತೆ ಮೊದಲ ವಿಕೆಟಿಗೆ 21 ಎಸೆತಗಳಲ್ಲಿ 68 ರನ್ ಜೊತೆಯಾಟವಾಡಿದ್ದರು. ಈ ಪೈಕಿ ಸೂರ್ಯವಂಶಿ 16 ಎಸೆತಗಳಲ್ಲಿ 54 ರನ್ ಹೊಡೆದಿದ್ದರೆ ಶರ್ಮಾ 5 ಎಸೆತಗಳಲ್ಲಿ 12 ರನ್ ಹೊಡೆದಿದ್ದರು.
ಪ್ರಭುಸಿಮ್ರಾನ್ ಸಿಂಗ್ ಜೊತೆ 2 ವಿಕೆಟಿಗೆ 13 ಎಸೆತಗಳಲ್ಲಿ 40 ರನ್ ಬಂದಿತ್ತು. ಈ ಜೊತೆಯಾಟದಲ್ಲಿ ಸೂರ್ಯವಂಶಿ 9 ಎಸೆತಗಳಲ್ಲಿ 35 ರನ್ ಚಚ್ಚಿದ್ದರೆ ಪ್ರಭುಸಿಮ್ರಾನ್ ಸಿಂಗ್ 4 ಎಸೆತಗಳಲ್ಲಿ 3 ರನ್ ಹೊಡೆದಿದ್ದರು.
ನಾಲ್ಕನೇ ವಿಕೆಟಿಗೆ ಆರ್ಕೆ ಸಿಂಗ್ ಜೊತೆ 43 ಎಸೆತಗಳಲ್ಲಿ 137 ರನ್ ಬಂದಿತ್ತು, ಈ ಜೊತೆಯಾಟದಲ್ಲಿ ಸೂರ್ಯವಂಶಿ 29 ಎಸೆತಗಳಲ್ಲಿ 115 ಬಾರಿಸಿದ್ದರೆ ಆರ್ಕೆ ಸಿಂಗ್ 15 ಎಸೆತಗಳಲ್ಲಿ 19 ರನ್ ಹೊಡೆದಿದ್ದರು.
ಯುಎಇ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಹೊಡೆದಿದ್ದರೆ ಭಾರತ 14.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 254 ರನ್ ಹೊಡೆದಿತ್ತು. ಈ ಮೊತ್ತದಲ್ಲಿ ಸೂರ್ಯವಂಶಿ ಒಬ್ಬರೇ 204 ರನ್(53 ಎಸೆತ, 7 ಬೌಂಡರಿ, 28 ಸಿಕ್ಸ್) ಹೊಡೆದು ತಂಡದ ಮೊತ್ತ 245 ಆಗಿದ್ದಾಗ ವಿಕೆಟ್ ಒಪ್ಪಿಸಿದ್ದರು.
ಲಿಸ್ಟ್-ಎ ಏಕದಿನ ಕ್ರಿಕೆಟ್ನ ಅತಿ ವೇಗದ ದ್ವಿಶತಕಗಳು
1. ವೈಭವ್ ಸೂರ್ಯವಂಶಿ (ಭಾರತ ಎ vs ಯುಎಇ, 2026) – 52 ಎಸೆತ
2. ಚಾಡ್ ಬೋವ್ಸ್ (ಕ್ಯಾಂಟರ್ಬರಿ vs ಒಟಾಗೋ, ಕ್ರೈಸ್ಟ್ಚರ್ಚ್ 2024) – 103 ಎಸೆತ
3. ಎನ್. ಜಗದೀಶನ್ (ತಮಿಳುನಾಡು vs ಅರುಣಾಚಲ ಪ್ರದೇಶ, ಬೆಂಗಳೂರು 2022) – 114 ಎಸೆತ
4. ಹ್ಯಾರಿ ಬ್ರೂಕ್ (ಇಂಗ್ಲೆಂಡ್ vs ಶ್ರೀಲಂಕಾ, ರಾವಲ್ಪಿಂಡಿ 2026) – 114 ಎಸೆತ
ವೃತ್ತಿಪರ ಕ್ರಿಕೆಟ್ನ ಒಂದೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳು:
1. ವೈಭವ್ ಸೂರ್ಯವಂಶಿ (ಭಾರತ ಎ vs ಯುಎಇ, 2026) – 28 ಸಿಕ್ಸರ್
2. ತನ್ಮಯ್ ಅಗರ್ವಾಲ್ (ಹೈದರಾಬಾದ್ vs ಅರುಣಾಚಲ ಪ್ರದೇಶ, ರಣಜಿ ಟ್ರೋಫಿ 2024) – 26 ಸಿಕ್ಸರ್
3. ಕಾಲಿನ್ ಮನ್ರೋ (ಆಕ್ಲೆಂಡ್ vs ಸೆಂಟ್ರಲ್ ಡಿಸ್ಟ್ರಿಕ್ಟ್ಸ್, ಪ್ಲಂಕೆಟ್ ಶೀಲ್ಡ್ 2015) – 23 ಸಿಕ್ಸರ್
4. ಡಿ’ಆರ್ಸಿ ಶಾರ್ಟ್ (ವೆಸ್ಟರ್ನ್ ಆಸ್ಟ್ರೇಲಿಯಾ vs ಕ್ವೀನ್ಸ್ಲ್ಯಾಂಡ್, ಒನ್ ಡೇ ಕಪ್ 2018) – 23 ಸಿಕ್ಸರ್
The Ruthless Boss Baby is turning the powerplay into his personal six-hitting carnival! 😎
Watch India A vs UAE in the #DPWorldAsiaCupRisingStarsMens2026, LIVE NOW on Sony Sports Network TV channels & Sony LIV.
#SonySportsNetwork #SonyLIV #INDvUAE https://t.co/PddpjGJXKL
— Sony Sports Network (@SonySportsNetwk) November 24, 2026
ಲಿಸ್ಟ್-ಎ ಕ್ರಿಕೆಟ್ನ ಅತಿ ವೇಗದ ಶತಕಗಳು
1. ವೈಭವ್ ಸೂರ್ಯವಂಶಿ (ಭಾರತ ಎ vs ಯುಎಇ, 2026) – 28 ಎಸೆತ
2. ಜೇಕ್ ಫ್ರೇಸರ್-ಮೆಕ್ಗುರ್ಕ್ (ಸೌತ್ ಆಸ್ಟ್ರೇಲಿಯಾ vs ತಾಸ್ಮೇನಿಯಾ, ಅಡಿಲೇಡ್ 2023) – 29 ಎಸೆತ
3. ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ಜೊಹಾನ್ಸ್ಬರ್ಗ್ 2015) – 31 ಎಸೆತ
4. ಸಕಿಬುಲ್ ಗನಿ (ಬಿಹಾರ vs ಅರುಣಾಚಲ ಪ್ರದೇಶ, ರಾಂಚಿ 2025) – 32 ಎಸೆತ
5. ಇಶಾನ್ ಕಿಶನ್ (ಜಾರ್ಖಂಡ್ vs ಕರ್ನಾಟಕ, ಅಹಮದಾಬಾದ್ 2025) – 33 ಎಸೆತ
ಲಿಸ್ಟ್-ಎ ಏಕದಿನ ಕ್ರಿಕೆಟ್ನ ಅತಿ ವೇಗದ 150 ರನ್ಗಳು
1. ವೈಭವ್ ಸೂರ್ಯವಂಶಿ (ಭಾರತ ಎ vs ಯುಎಇ, 2026) – 40 ಎಸೆತ
2. ವೈಭವ್ ಸೂರ್ಯವಂಶಿ (ಬಿಹಾರ vs ಅರುಣಾಚಲ ಪ್ರದೇಶ, ರಾಂಚಿ 2025) – 59 ಎಸೆತ
3. ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ಜೊಹಾನ್ಸ್ಬರ್ಗ್ 2015) – 64 ಎಸೆತ
4. ಜೋಸ್ ಬಟ್ಲರ್ (ಇಂಗ್ಲೆಂಡ್ vs ನೆದರ್ಲೆಂಡ್ಸ್, ಆಮ್ಸ್ಟೆಲ್ವೀನ್ 2022) – 65 ಎಸೆತ
