ಬೆಂಗಳೂರು: ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆ ಬಳಿಕ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಮತ್ತೊಂದು ಮೆಟ್ರೋ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ನಮ್ಮ ಮೆಟ್ರೋ ಬ್ಲೂ ಲೈನ್ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆದಿದೆ. ಕೆ.ಆರ್ ಪುರಂ ಟು ದೊಡ್ಡನೆಕ್ಕುಂದಿವರೆಗೆ ಟ್ರಯಲ್ ರನ್ ಆರಂಭವಾಗಿದೆ.
ನವೆಂಬರ್ 10ರಿಂದ ಬ್ಲೂ ಲೈನ್ನಲ್ಲಿ (Blue Line Metro) ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಇಂದು ಬ್ಲೂ ಲೈನ್ ಮಾರ್ಗ ಟ್ರಯಲ್ ಪರಿಶೀಲಿಸಿದರು.
ನವೆಂಬರ್ 10 ರಿಂದ ಬ್ಲೂ ಲೈನ್ನಲ್ಲಿ ಪ್ರಾಯೋಗಿಕ ಸಂಚಾರ ಪ್ರಾರಂಭವಾಗಿದೆ. ಬೈಯಪ್ಪನಹಳ್ಳಿ ಡಿಪೋದಿಂದ ಹೊರಟು ಕೆ.ಆರ್. ಪುರಂ ಮಾರ್ಗವಾಗಿ ದೊಡ್ಡನೆಕುಂಡಿ ನಿಲ್ದಾಣದವರೆಗೆ ಸುಮಾರು 6 ಕಿ.ಮೀ. ದೂರ ಮಾತ್ರ ಪರಿಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಪ್ರಾಯೋಗಿಕ ಸಂಚಾರವನ್ನು ಕೆ.ಆರ್. ಪುರಂ ಮೂಲಕ ಮಾರತ್ತಹಳ್ಳಿಯವರೆಗೆ ವಿಸ್ತರಿಸಲು ನಿಗಮ ಯೋಜಿಸಿದೆ. ಸದ್ಯ 4 ಸ್ಟೇಷನ್ನಲ್ಲಿ ಮಾತ್ರ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ದಕ್ಷಿಣ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಉತ್ತರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವರೆಗಿನ ಮಾರ್ಗ ಒಟ್ಟು ಸುಮಾರು 58.19 ಕಿ.ಮೀ. ಉದ್ದವಿದೆ. ಹಂತ-2ಎ ಸೆಂಟ್ರಲ್ ಸಿಲ್ಕ್ ಬೋರ್ಡ್ – ಕೆ.ಆರ್. ಪುರಂ ಸುಮಾರು 19.75 ಕಿ.ಮೀ. ಉದ್ದವಿದ್ದು, ಔಟರ್ ರಿಂಗ್ ರೋಡ್ ಮೂಲಕ ಬೆಳ್ಳಂದೂರು, ಮಾರತ್ತಹಳ್ಳಿ ಮತ್ತು ಕೆ.ಆರ್. ಪುರಂಗಳನ್ನು ಸಂಪರ್ಕಿಸುತ್ತದೆ. ಹಂತ-2ಬಿ ಕೆ.ಆರ್. ಪುರಂ – ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುಮಾರು 38.44 ಕಿ.ಮೀ ಇದೆ.
ದೊಡ್ಡನಕ್ಕುಂಡಿ ಮೆಟ್ರೋ ನಿಲ್ದಾಣಕ್ಕೆ ಇಂದು ಆಗಮಿಸಿದ ಸಚಿವ ಕೃಷ್ಣಬೈರೇಗೌಡ ಪರೀಕ್ಷಾ ಸಂಚಾರ ರೈಲನ್ನ ಸ್ವಾಗತ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಶೀಘ್ರವೇ ಸಿಗಲಿದೆ. 11 & 12 ಲಕ್ಷ ಜನ ಉದ್ಯೋಗಕ್ಕಾಗಿ ಈ ಭಾಗಕ್ಕೆ ಬರುತ್ತಾರೆ. ಜನಗಳ ಜೀವನ ಉದ್ಯೋಗ ದೃಷ್ಟಿ ಮೆಟ್ರೋ ಮುಖ್ಯ. ರಾಜ್ಯದ ಅಭಿವೃದ್ಧಿ ದೇಶದ ಅಭಿವೃದ್ಧಿಯಲ್ಲಿ ಮೆಟ್ರೋ ಪಾತ್ರವಿದೆ. ಒಂದು ತಿಂಗಳಲ್ಲಿ ಅವಧಿಯಲ್ಲಿ ಮುಂದೆ ನಾಲ್ಕು ನಿಲ್ದಾಣಗಳ ಟ್ರಯಲ್ ನಡೆಯಲಿದೆ. ಟ್ರಾಫಿಕ್ ಸಮಸ್ಯೆಗೆ ಈ ಮುಖಾಂತರ ಮುಕ್ತಿ ಸಿಗಲಿದೆ. ಜನವರಿ ಬಳಗೆ ಸಿಗ್ನಲ್ ಲಿಂಗ್ ನಡೆಯಲಿದೆ. 20 ಸಾವಿರ ಕೋಟಿ ಅನುದಾನದಲ್ಲಿ ಈ ಮೆಟ್ರೋ ಲೈನ್ ನಿರ್ಮಾಣವಾಗಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಮೆಟ್ರೋ ಸಂಚಾರಕ್ಕೆ ಮುಕ್ತ ಆಗಲಿದೆ. ಪೇಸ್ 2ಎ ಮಧ್ಯ ಭಾಗದಲ್ಲಿ ಸಂಚಾರಕ್ಕೆ ಮುಕ್ತ ಆಗಬಹುದು. ಮೆಟ್ರೋ ಸಾಲವನ್ನು ಸಂಸ್ಥೆ ಭರಿಸುವ ಶಕ್ತಿ ಇಲ್ಲ. ರಾಜ್ಯ ಸರ್ಕಾರವೇ ಮೆಟ್ರೋ ಸಾಲ ತಿರಿಸುತ್ತದೆ. ನಮ್ಮ ಮೇಲೆ ಹೊರೆ ಆದರೂ, ಮೆಟ್ರೋದವರೂ ಕೇಳಿದರೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಟ್ರಾಫಿಕ್ ಸಮಸ್ಯೆಗೆ ಇದು ಪರಿಹಾರ ಆಗುತ್ತೆ. ಎಲ್ಲಾ ಸೇಷ್ಟಿ ಪ್ರಿಕಾಷನ್ ತೆಗೆದುಕೊಂಡು ಓಪನ್ ಮಾಡಬೇಕು ಅಂತಾ ಪ್ರಯತ್ನ ಆಗಿದೆ. ಅದರಲ್ಲಿ ಇದು ಮೈಲಿಗಲ್ಲು. ಮುಂದಿನ ತಿಂಗಳು ಪರೀಕ್ಷಾರ್ಥ ಸಂಚಾರ ಆಗುತ್ತೆ. ಜನವರಿಗೆ ಸಿಗ್ನಲಿಂಗ್ ಕೆಲಸ ಕೂಡ ಮಾಡುತ್ತೇವೆ. ಎಲ್ಲಾ ಕೆಲಸ ಮಾಡಿ ಮುಂದಿನ ವರ್ಷ ಮಧ್ಯಭಾಗದಲ್ಲಿ ಪೇಸ್ 2ಎ ಓಪನ್ ಮಾಡಬೇಕು ಅಂತಾ ಪ್ರಯತ್ನ ಮಾಡ್ತಾ ಇದ್ದೇವೆ. ಮುಂದಿನದ್ದು ಪೇಸ್ 2ಬಿ ಕೆಲಸ ಕೂಡ ನಡೆಯುತ್ತಾ ಇದೆ. ಕೆ.ಆರ್ ಪುರಂನಿಂದ ಹೆಬ್ಬಾಳ ಮತ್ತು ಏರ್ಪೋರ್ಟ್ ವರೆಗೂ ಕೆಲಸವನ್ನ ಚುರುಕುಗೊಳಿಸುತ್ತೇವೆ ಎಂದರು.
