ನವದೆಹಲಿ/ಲಕ್ನೋ: ಉತ್ತರ ಪ್ರದೇಶ ಚುನಾವಣೆಗೆ (UP Elections) ದಿನಗಳು ಹತ್ತಿರವಾಗುತ್ತಿದ್ದು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಮಾತುಕತೆ ತೀವ್ರಗೊಂಡಿದೆ. ಇಂದು ಉಭಯ ಪಕ್ಷಗಳ ನಾಯಕರ ನಡುವೆ 2ನೇ ಸುತ್ತಿನ ಮಾತುಕತೆ ನಡೆಯಲಿದೆ. ಆದ್ರೆ ಮಾತುಕತೆಗೂ ಮುನ್ನವೇ ಕಾಂಗ್ರೆಸ್ (congress) ತನ್ನ ಬೇಡಿಕೆಯನ್ನ 181 ರಿಂದ 130ಕ್ಕೆ ಇಳಿಸಿದೆ ಎಂದು ವರದಿಯಾಗಿದೆ.
ಇಂದು (ಮಂಗಳವಾರ) ಸಮಾಜವಾದಿ ಪಕ್ಷದೊಂದಿಗೆ (Samajwadi Party) ಕಾಂಗ್ರೆಸ್ 2ನೇ ಸುತ್ತಿನ ಮಾತುಕತೆ ನಡೆಸಲಿದೆ. ಇದಕ್ಕೆ ಮುಂಚಿತವಾಗಿಯೇ ಕಾಂಗ್ರೆಸ್ ತನ್ನ ಸ್ಥಾನಗಳ ಬೇಡಿಕೆಯನ್ನು 181 ರಿಂದ 130ಕ್ಕೆ ಇಳಿಸಿದೆ. ಆದ್ರೆ ʻಎʼ ವರ್ಗದ ಸ್ಥಾನಗಳ ಬೇಡಿಕೆಯನ್ನು 68 ರಿಂದ 70ಕ್ಕೆ ಹೆಚ್ಚಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೊದಲ ಸುತ್ತಿನ ಮಾತುಕತೆಯಲ್ಲಿ ಕಾಂಗ್ರೆಸ್ 55 ರಿಂದ 60 ಎ-ಗ್ರೇಡ್ ಕ್ಷೇತ್ರಗಳತ್ತ ಆಸಕ್ತಿ ತೋರಿತ್ತು.
ಸತತ 2 ಬಾರಿ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿಯನ್ನು ಕೆಳಗಿಳಿಸಲು ಇಂಡಿಯಾ ಮೈತ್ರಿಕೂಟ ರಣತಂತ್ರ ಎಣೆಯುತ್ತಿದೆ. ಹೀಗಾಗಿ ಉಭಯ ಮಿತ್ರಪಕ್ಷಗಳು ಗೆಲ್ಲುವ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಕಸರತ್ತು ನಡೆಸುತ್ತಿವೆ. ಸೀಟು ಹಂಚಿಕೆ ಕುರಿತು ಇಂದು ಮಧ್ಯಾಹ್ನ 2 ಗಂಟೆಗೆ 2ನೇ ಸುತ್ತಿನ ಮಾತುಕತೆ ನಡೆಯಲಿದೆ. ಅದಕ್ಕೂ ಮುನ್ನವೇ ಕಾಂಗ್ರೆಸ್ ತನ್ನ ಸ್ಥಾನಗಳ ಬೇಡಿಕೆಯನ್ನ ಕಡಿಮೆ ಮಾಡಿದೆ.
65 ರಿಂದ 70 ಸ್ಥಾನ ನೀಡಲು ಎಸ್ಪಿ ಒಲವು
ಇನ್ನೂ, ತನ್ನ ಪ್ರಭಾವ ಕುಗ್ಗಿಸಿಕೊಂಡಿರುವ ಕಾಂಗ್ರೆಸ್ ಕಳೆದಬಾರಿ ಉತ್ತರ ಪ್ರದೇಶದಲ್ಲಿ 2 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಹೀಗಾಗಿ ಈ ಬಾರಿ ಎಸ್ಪಿ 40 ರಿಂದ 45 ಕ್ಷೇತ್ರಗಳನ್ನು ನೀಡಲು ಎಸ್ಪಿ ಒಲವು ತೋರಿದ್ದು, ಇಂದಿನ ಸಭೆಯಲ್ಲಿ ಸೀಟು ಹಂಚಿಕೆ ಬಹುತೇಕ ಅಂತಿಮವಾಗುವ ಸಾಧ್ಯತೆಯಿದೆ.

