ಪಂಚಾಂಗ
ರಾಹುಕಾಲ – 03:02 ರಿಂದ 04:28
ಗುಳಿಕಕಾಲ – 12:09 ರಿಂದ 01:36
ಯಮಗಂಡಕಾಲ -09.17 ರಿಂದ 10.43
ವಾರ : ಮಂಗಳವಾರ, ತಿಥಿ : ಪೌರ್ಣಮಿ, ನಕ್ಷತ್ರ : ಕೃತಿಕ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ಮೇಷ: ಈ ದಿನ ವಿಪರೀತವ ವ್ಯಸನ, ರೋಗಭಾದೆ, ಧನ ಲಾಭ, ತಿರುಗಾಟ, ಶತ್ರು ನಾಶ, ವಿದ್ಯಾರ್ಥಿಗಳಲ್ಲಿ ಪ್ರಗತಿ.
ವೃಷಭ: ವ್ಯಾಪಾರದಲ್ಲಿ ನಂಬಿಕೆದ್ರೋಹ, ಮಾತಿಗೆ ಮರುಳಾಗದಿರಿ, ಹಿರಿಯರ ಮಾತಿಗೆ ಗೌರವ.
ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಅತಿಯಾದ ಒತ್ತಡ, ಅಪಮಾನ.
ಕಟಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಸಹಾಯ, ಸಾಲಬಾಧೆ.
ಸಿಂಹ: ಮಕ್ಕಳೊಂದಿಗೆ ಪ್ರವಾಸ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಶೀತ ಸಂಬಂಧ ರೋಗಗಳು
ಕನ್ಯಾ: ಈ ದಿನ ಕೃಷಿಕರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಕಾರ್ಯ ವಿಕಲ್ಪ, ಮನಸ್ಸಿನಲ್ಲಿ ಗೊಂದಲ.
ತುಲಾ: ಅಮೂಲ್ಯ ವಸ್ತು ಖರೀದಿ, ಅನಾವಶ್ಯಕ ಮಾತುಗಳಿಂದ ದೂರವಿರಿ, ಪತಿ ಪತ್ನಿಯರಲ್ಲಿ ಪ್ರೀತಿ, ಕೋಪ ಜಾಸ್ತಿ.
ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ತಳಮಳ, ಸ್ವಂತ ಉದ್ಯಮಿಗಳಿಗೆ ಲಾಭ.
ಧನಸ್ಸು: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.
ಮಕರ: ಅಪರಿಚಿತದಿಂದ ಕಲಹ, ಅತಿಯಾದ ನಿದ್ರೆ, ವಾಹನ ಯೋಗ, ಸಂತಾನ ಪ್ರಾಪ್ತಿ, ತೀರ್ಥಯಾತ್ರ ದರ್ಶನ.
ಕುಂಭ: ಈ ದಿನ ಆಲಸ್ಯ ಮನೋಭಾವ, ನಾನಾ ರೀತಿಯ ಸಂಪಾದನೆ, ಗೆಳೆಯರಿಂದ ಸಹಾಯ, ವಿದ್ಯೆಯಲ್ಲಿ ಶ್ರದ್ದೆ, ಸುಖ ಭೋಜನ.
ಮೀನ: ವೃತ್ತಿರಂಗದಲ್ಲಿ ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.
