ಬೆಂಗಳೂರು: ಹಾಸನ (Hassan) ಭಾಗದಿಂದ ಕಾಡಾನೆಗಳನ್ನು (Elephant) ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆ (Mudigere) ಭಾಗಗಳಿಗೆ ಅಟ್ಟಿದ್ದಕ್ಕೆ ಶಾಸಕಿ ನಯನಾ ಮೋಟಮ್ಮ (Nayana Motamma) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಅವರು ರಾಜೀನಾಮೆ ಪತ್ರವನ್ನು ಸ್ಪೀಕರ್ ಆಪ್ತ ಕಾರ್ಯದರ್ಶಿಗೆ ನೀಡಿ ತೆರಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಪೀಕರ್ ಇಲ್ಲದ ಕಾರಣ ಅವರ ಪಿಎಸ್ಗೆ ರಾಜೀನಾಮೆ ಪತ್ರ ಕೊಟ್ಟಿದ್ದೇನೆ. ಅವರು ಸ್ಪೀಕರ್ ನಾಳೆ ಬರುತ್ತಾರೆ, ಆಗ ಕೊಡಿ ಎಂದರು. ನಮ್ಮ ಮಾತಿಗೆ ಬೆಲೆ ಇಲ್ಲ ಅಂದ್ರೆ ನಾವ್ಯಾಕೆ ಶಾಸಕರಾಗಿರಬೇಕು ಎಂದು ಅವರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಹಾಸನದ ಗಜಪಡೆಯನ್ನು ಚಿಕ್ಕಮಗಳೂರಿಗೆ ನುಗ್ಗಿಸಿದ್ದಕ್ಕೆ ಆಕ್ರೋಶ – ರಾಜೀನಾಮೆ ಪತ್ರ ಹಿಡಿದು ಸ್ಪೀಕರ್ ಕಚೇರಿಗೆ ಬಂದ ನಯನಾ ಮೋಟಮ್ಮ
ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಭದ್ರ ಅಭಯಾರಣ್ಯಕ್ಕೆ ಆನೆಗಳನ್ನು ಓಡಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಆನೆ ಡ್ರೈವ್ ನಿಲ್ಲಿಸಬೇಕು. ಆನೆಗಳು ಎಲ್ಲಿಂದ ಬಂದವು ಅಲ್ಲಿಗೆ ಹೋಗುವ ಹಾಗೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಮ್ಮ ಅಭಿಪ್ರಾಯ ಕೇಳಿಲ್ಲ, ವಿಶ್ವಾಸಕ್ಕೆ ತಗೆದುಕೊಂಡಿಲ್ಲ. ನಾವು ವಿರೋಧ ಮಾಡುತ್ತೇವೆ ಎಂದು ನಮ್ಮ ಬಳಿ ಮಾತನಾಡಿಲ್ಲ. ನಾಳೆ ನಾನು ಸ್ಪೀಕರ್ ಅವರಿಗೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ಟೆಕ್ನಿಕಲ್ ಆಗಿ ಹೇಗೆ ಬರೆದುಕೊಡಬೇಕು ಅಂತಾರೆ ಹಾಗೆಯೆ ಬರೆದು ಕೊಡುತ್ತೇನೆ. ಕೊಡಗಿನಲ್ಲೂ ಇದೇ ಸಮಸ್ಯೆ ಇದೆ ಅಂತ ಪೊನ್ನಣ್ಣ ಹೇಳಿದರು. ಅದನ್ನೆ ಚರ್ಚೆ ಮಾಡಿದರು. ಈ ಎಲ್ಲಾ ಬೆಳವಣಿಗೆಗಳು ಸಿಎಂಗೆ ಗೊತ್ತಿರಬಹುದು. ಆಡಳಿತ ಪಕ್ಷದ ಶಾಸಕಿ ಆಗಿರಬಹುದು ಆದರೆ ನಾವು ಹೇಳಿದ್ದು ಕೇಳಿಲ್ಲ ಅಂದರೆ ಏನು ಪ್ರಯೋಜನ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೇಲೂರಿನಿಂದ ಮೂಡಿಗೆರೆಯತ್ತ ಕಾಡಾನೆಗಳ ಸಂಚಾರ; ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ
