ಬಿಗ್ಬಾಸ್ ಮನೆಯ ಈ ಕ್ಯೂಟ್ ಜೋಡಿ ಈಗ ರಿಯಲ್ ಲೈಫ್ನಲ್ಲೂ ಒಂದಾಗೋಕೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ಬಾಸ್ ಸೀಸನ್ 11ರ ಮೂಲಕ ಕನ್ನಡಿಗರ ಮನಗೆದ್ದಿದ್ದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಸಿಂಧೋಗಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಆದಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ರೀಲ್ಸ್ ಪಾರ್ಟ್ನರ್ಗಳಾಗಿ ಮುಂದೆ ಪ್ರೇಮಿಗಳಾಗಿ ಇದೀಗ ಸಪ್ತಪದಿ ತುಳಿಯುವ ಹಂತಕ್ಕೆ ಬಂದು ನಿಂತಿದ್ದಾರೆ. ಬೆಂಗಳೂರಿನ ಕಗ್ಗಲೀಪುರದಲ್ಲಿರುವ `ಸಂಭ್ರಮ ಬೈ ಸ್ವಾನ್ಲೈನ್ಸ್’ ರೆಸಾರ್ಟ್ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಬಳಿಕ ಮದುವೆ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಶುರುವಾದ ಸ್ನೇಹಕ್ಕೆ ಮದುವೆಯ ಮುದ್ರೆ! – ಶಿಶಿರ್–ಐಶ್ವರ್ಯ ಎಂಗೇಜ್ಮೆಂಟ್
ಕನಸಿನಂತೆ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡ ʻಐಶಿರ್ʼ ಜೋಡಿ ಡೆಸ್ಟಿನೇಷನ್ ವೆಡ್ಡಿಂಗ್ಗೆ ಸಿದ್ಧವಾಗಿದ್ದಾರೆ. ಮುಂದಿನ ವರ್ಷ ಫೆ.1 ರಂದು ಮದುವೆ ದಿನಾಂಕ ನಿಗದಿಯಾಗಿದೆ. ನಂದಿಹಿಲ್ಸ್ ತಪ್ಪಲಿನ ಖಾಸಗಿ ರೆಸಾರ್ಟ್ನಲ್ಲಿ ಮದುವೆ ನಡೆಯಲಿದ್ದು ಪ್ರಕೃತಿಯ ಮಡಿಲಲ್ಲಿ ವಿವಾಹವಾಗುವ ಕನಸು ಕಂಡಿದ್ದಾರೆ. ಇನ್ಮೇಲೆ ಮದುವೆಗೆ ಸಿದ್ಧತೆ ಮಾಡಿಕೊಳ್ಳಲು ಜೋಡಿ ರೆಡಿಯಾಗಿದೆ.
ನಿಶ್ಚಿತಾರ್ಥವನ್ನೇ ಬಹಳ ಅದ್ದೂರಿಯಾಗಿ ಮಾಡಿಕೊಂಡ ಜೋಡಿಯ ಮದುವೆ ಇನ್ನಷ್ಟು ಅದ್ದೂರಿಯಾಗಿ ಇರಬಹುದು ಎಂಬ ಪ್ರಶ್ನೆ ಅನೇಕರದ್ದು, ನಿಶ್ಚಿತಾರ್ಥಕ್ಕೆ ಆಮಂತ್ರಣ ಪತ್ರಿಕೆ ಕೊಟ್ಟು ಗಣ್ಯರಿಗೆ ಉಡುಗೊರೆ ಕೊಟ್ಟು ಆಹ್ವಾನಿಸಿದ್ದರು. ಇದೀಗ ಇನ್ನು ನಾಲ್ಕು ತಿಂಗಳು ಉಳಿದಿರುವಾಗಲೇ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ `ಐಶಿರ್’ ಜೋಡಿ. ಇದನ್ನೂ ಓದಿ: ನಟ ಧನ್ವೀರ್ಗೆ ಮತ್ತೆ ಸಂಕಷ್ಟ – 3 ಕೇಸ್ಗಳ ತಡೆಯಾಜ್ಞೆ ತೆರವು
