ಬೀದರ್: ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಸರ್ಕಾರದ ಮಾತಿಗೆ ಗೌರವ ನೀಡಿ ಪ್ರತಿಭಟನೆ (Protest) ಈ ಕೂಡಲೆ ಕೈ ಬಿಡಬೇಕು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ (U.T. Khader) ಅವರು ಆಶಾ ಕಾರ್ಯಕರ್ತೆಯರಿಗೆ (ASHA Workers) ಪಬ್ಲಿಕ್ ಟಿವಿ ಮೂಲಕ ಮನವಿ ಮಾಡಿದ್ದಾರೆ.
ಬೀದರ್ನಲ್ಲಿ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಜೊತೆ ನಡೆದ ಸಂಧಾನ ವಿಫಲದ ಬಗ್ಗೆ ಪ್ರತಿಕ್ರಿಯಿಸಿದರು. ಇದೇ ವೇಳೆ, ಗ್ರಾಮ ಮಟ್ಟದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಅವರ ಬಗ್ಗೆ ನಮಗೆ ವಿಶೇಷ ಕಾಳಜಿ ಇದೆ. ಕೇಂದ್ರ ಸರ್ಕಾರ 2,000 ರೂ. ಬಿಟ್ಟು ಒಂದು ನೈಯಾ ಫೈಸಾ ಕೊಟ್ಟಿಲ್ಲ. ಹೀಗಾಗಿ ನಮ್ಮ ಸರ್ಕಾರದ 5,000 ರೂ. ನೀಡುತ್ತಿದೆ. ಇನ್ನೂ 15,000 ರೂ. ಬೇಡಿಕೆ ಬಗ್ಗೆ ನಾನು ಸಿಎಂ ಜೊತೆ ದೀರ್ಘಕಾಲ ಚೆರ್ಚೆ ನಡೆಸಿದ್ದೇನೆ. ಇದನ್ನೂ ಓದಿ: ರಾಜಕೀಯ ಒತ್ತಡಕ್ಕೆ ಮಣಿಯಬೇಡಿ – ಜಪಾನ್ ಪ್ರವಾಸಕ್ಕೆ ತೆರಳುವ ಮುನ್ನ ʻಆಶಾʼಗಳಿಗೆ ಸಿಎಂ ಮನವಿ
ಈ ಅಧಿವೇಶನ ಮುಗಿದ ಬಳಿಕ ಸಚಿವರು ಮತ್ತು ಅಧಿಕಾರಿಗಳ ಜೊತೆ ಸೇರಿ ಚರ್ಚೆ ಮಾಡಿ ನಿಮಗೆ ಸಿಹಿ ಸುದ್ದಿ ಕೊಡುತ್ತೇನೆ. ಅಧಿವೇಶನವಾದ ಬಳಿಕ ಮಾಡಿಲ್ಲ ಎಂದರೆ ಮತ್ತೆ ನೀವು ಪ್ರತಿಭಟನೆ ಮಾಡಲು ಅವಕಾಶವಿದೆ. ಸರ್ಕಾರದಿಂದ ನಾವು ಕೇಂದ್ರದ ಸಚಿವರಿಗೆ ಮತ್ತು ಪ್ರಧಾನಿಗೆ ಪತ್ರ ಬರೆಯುತ್ತಿದ್ದೆನೆ. ಕೇಂದ್ರ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇಲ್ಲ ಎಂದರೆ ನಮಗೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಮೇಲೆ ನಂಬಿಕೆ ಇಟ್ಟು ನಮಗೆ ಕಾಲಾವಕಾಶ ನೀಡಬೇಕು. ಹೀಗಾಗಿ ಈ ಕೂಡಲೇ ಮುಷ್ಕರ ಕೈ ಬಿಡುವಂತೆ ನಾನು ಆಶಾ ಕಾರ್ಯಕರ್ತೆಯರ ಬಳಿ ಮನವಿ ಮಾಡಿದರು. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ನಟಿ ರಮ್ಯಾ
