ಬೆಂಗಳೂರು: ನವೆಂಬರ್ 15 ರಂದು ನಡೆದಿದ್ದ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನ KPSC ಪ್ರಕಟ ಮಾಡಿದೆ.
KPSC ಇತಿಹಾಸದಲ್ಲೇ ಮೊದಲ ಬಾರಿಗೆ ಪರೀಕ್ಷೆ ಮುಗಿದ 6 ದಿನಕ್ಕೆ KPSC ತಾತ್ಕಾಲಿಕ ಫಲಿತಾಂಶ ಪ್ರಕಟ ಮಾಡಿದೆ. ನವೆಂಬರ್ 15 ರಂದು ಪರೀಕ್ಷೆ ನಡೆದಿತ್ತು. ನವೆಂಬರ್ 16 ರಂದೇ ಕೀ ಉತ್ತರ ಬಿಡುಗಡೆ ಮಾಡಲಾಗಿತ್ತು. ಈಗ 6 ದಿನಗಳಲ್ಲೇ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು KPSC ಪ್ರಕಟ ಮಾಡಿದೆ.
ಈ ಹಿಂದೆಲ್ಲಾ ನಡೆದ ಪರೀಕ್ಷೆಗಳಲ್ಲಿ ಕೀ ಉತ್ತರ ಬಿಡುಗಡೆ ಮಾಡಲು 15-20 ದಿನಗಳು ಆಗ್ತಿತ್ತು. ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡಲು ತಿಂಗಳುಗಳ ಸಮಯ ಆಗ್ತಿತ್ತು. ಆದ್ರೆ ಈ ಬಾರಿ 6 ದಿನಕ್ಕೆ ಫಲಿತಾಂಶ ಪ್ರಕಟ ಮಾಡಿ KPSC ಇತಿಹಾಸ ನಿರ್ಮಾಣ ಮಾಡಿದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಮೊದಲ ಅವಧಿಯಲ್ಲಿ 88,450 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ರು. 2ನೇ ಅವಧಿಗೆ 87,817 ಅಭ್ಯರ್ಥಿಗಳು ಹಾಜರಾಗಿದ್ದರು. ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆ ಸಲ್ಲಿಸಲು ನಾಳೆ 11 ಗಂಟೆವರೆಗೂ ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ.

