ಗದಗ: ಜಿಲ್ಲೆಯಾದ್ಯಂತ ತೀವ್ರ ಬರಗಾಲ ಇರುವ ಪರಿಸ್ಥಿತಿಯಲ್ಲೇ, ಗದಗ (Gadag) ಜಿಲ್ಲಾಧಿಕಾರಿ ತಮ್ಮ ನಿವಾಸದಲ್ಲಿ ಔತಣಕೂಟ (DC Party) ಆಯೋಜಿಸಿ ಮೋಜು ಮಸ್ತಿ ಮಾಡಿರೋದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸೇವೆಯಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ತಮ್ಮ ಅಧಿಕೃತ ನಿವಾಸದಲ್ಲಿ ವಿಶೇಷ ಭೋಜನಕೂಟವನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ನಿವಾಸವನ್ನು ಅರಮನೆಯಂತೆ ದೀಪಾಲಂಕಾರಗಳಿಂದ ಶೃಂಗಾರಗೊಳಿಸಲಾಗಿತ್ತು.
ಔತಣಕೂಟದ ವೇಳೆ ಜಾನಪದ ಹಾಡುಗಳಿಗೆ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಹೆಜ್ಜೆ ಹಾಕಿದ್ದು, ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಿದೆ.ಇದನ್ನೂ ಓದಿ: ಗೋಲ್ಡ್ ಖರೀದಿಗೆ ಇದು ಗೋಲ್ಡನ್ ಟೈಂ – ಜನವರಿ ನಂತರ ಮತ್ತೆ ದರ ಏರಿಕೆ ನಿರೀಕ್ಷೆ: ಶರವಣ
ಒಂದೆಡೆ ಮಳೆಯಿಲ್ಲದೆ ಬರ ತಾಂಡವವಾಡುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತದ ಮುಖ್ಯಸ್ಥರೇ ಸರ್ಕಾರಿ ನಿವಾಸದಲ್ಲಿ ಮೋಜುಮಸ್ತಿಯಲ್ಲಿ ತೊಡಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಕಾವ್ಯಾ – ಅನಿರುದ್ಧ್ ಗ್ರ್ಯಾಂಡ್ ರಿಸೆಪ್ಶನ್; ಸಿಎಂ ವಿಜಯ್, ರಜನಿ, ಕಮಲ್, ಮಹೇಶ್ ಬಾಬು ಭಾಗಿ
