ವೆಲ್ಲಿಂಗ್ಟನ್: ಭಾರತ (Team India) ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ರೋಚಕ ಘಟಕ್ಕೆ ತಿರುಗಿದೆ. ನಾಳೆ ಕೊನೆಯ ದಿನದಾಟ ನಡೆಯಲಿದ್ದು, ಭಾರತಕ್ಕೆ 8 ವಿಕೆಟ್ಗಳ ಅಗತ್ಯವಿದ್ದರೆ, ನ್ಯೂಜಿಲೆಂಡ್ (New Zealand) 90 ಓವರ್ಗಳನ್ನ ಡಿಫೆಂಡ್ ಮಾಡಬೇಕಿದೆ.
DHRUV JUREL, WHAT A FREAKISH CATCH. https://t.co/D3SQRgHdEf
— Mufaddal Vohra (@mufaddal_vohra) November 22, 2026
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ, 4ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡ 45 ಓವರ್ಗಳಲ್ಲಿ 119 ರನ್ ಗಳಿಸಿ, 2 ವಿಕೆಟ್ಗಳನ್ನ ಕಳೆದುಕೊಂಡಿದೆ. ಭಾರತ 233 ರನ್ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.
ಆರಂಭಿಕ ಆಟಗಾರ ಡಿವೋನ್ ಕಾನ್ವೆ 59 (137 ಎಸೆತ, 6 ಬೌಂಡರಿ) ಗಳಿಸಿದ್ರೆ, ರಚಿನ್ ರವೀಂದ್ರ 27 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಸೋಮವಾರ (ನಾಳೆ) ಕೊನೆಯ ದಿನದ ಆಟ ಆರಂಭಿಸಲಿದ್ದಾರೆ. ಒಂದು ವೇಳೆ ಕಿವೀಸ್ ದಿನದ 90 ಓವರ್ ಡಿಫೆಂಡ್ ಮಾಡಿದ್ರೆ, ಪಂದ್ಯ ಡ್ರಾನತ್ತ ತಿರುಗುವ ಸಾಧ್ಯತೆಯಿದೆ. ಇಲ್ಲವೇ, ಭಾರತ ಗೆಲುವಿನ ಓಟ ಮುಂದುವರಿಸಲಿದೆ. ಟೀಂ ಇಂಡಿಯಾ ಪರ ಸದ್ಯ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಟೀಂ ಇಂಡಿಯಾ ವಿಶೇಷ ಸಾಧನೆ
ಇದಕ್ಕೂ ಮುನ್ನ 3ನೇ ದಿನದ ಅಂತ್ಯಕ್ಕೆ 125 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 486 ರನ್ಗಳಿಸಿದ್ದ ಭಾರತ 4ನೇ ದಿನ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಟೀಂ ಇಂಡಿಯಾ ವಿಶೇಷ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿತು. ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ನಲ್ಲಿ ವಿದೇಶಿ ತಂಡವೊಂದು 700 ರನ್ ಗಳಿಸಿದ ಸಾಧನೆ ಮಾಡಿತು.
ಪಂತ್ ಫೆಂಟಾಸ್ಟಿಕ್ ಶತಕ
3ನೇ ದಿನದ ಅಂತ್ಯಕ್ಕೆ ಅರ್ಧಶತಕ ಗಳಿಸಿದ್ದ ರಿಷಭ್ ಪಂತ್ 4ನೇ ದಿನದಾಟದಲ್ಲಿ ಬಹುದಿನಗಳ ನಂತರ ಟೆಸ್ಟ್ ಶತಕ ಪೂರೈಸಿದರು. 153 ಎಸೆತಗಳನ್ನು ಎದುರಿಸಿದ ಪಂತ್ 6 ಸಿಕ್ಸರ್, 10 ಬೌಂಡರಿಗಳೊಂದಿಗೆ 128 ರನ್ ಚಚ್ಚಿದರು. ಧ್ರುವ್ ಜುರೆಲ್ 78 ರನ್ (79 ಎಸೆತ, 1 ಸಿಕ್ಸರ್, 7 ಬೌಂಡರಿ) ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಇದರೊಂದಿಗೆ ಅನ್ಶುಲ್ ಕಾಂಬೋಜ್ 38 ರನ್, ವಾಷಿಂಗ್ಟನ್ ಸುಂದರ್ 24 ರನ್, ಆಕಾಶ್ ದೀಪ್ 13 ರನ್, ಬುಮ್ರಾ ಅಜೇಯ 7 ರನ್ ಕೊಡುಗೆ ನೀಡಿದರು. ಇದಕ್ಕೂ ಮುನ್ನ ಕೆ.ಎಲ್ ರಾಹುಲ್ 136 ರನ್, ಶುಭಮನ್ ಗಿಲ್ 98 ರನ್, ಯಶಸ್ವಿ ಜೈಸ್ವಾಲ್ 85, ದೇವದತ್ ಪಡಿಕಲ್ 80 ರನ್ ಕೊಡುಗೆ ನೀಡಿದ್ದರು.


