– ನವಜೋಡಿಗೆ ಶುಭಹಾರೈಸಿದ ಸೆಲೆಬ್ರಿಟೀಸ್
ಸೌತ್ ಸಿನಿಮಾ ಇಂಡಸ್ಟ್ರಿಯ ಫೇಮಸ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಉದ್ಯಮಿ ಕಾವ್ಯಾ ಮಾರನ್ ಅವರ ಸೆಲೆಬ್ರಿಟಿ ವಿವಾಹ ಆರತಕ್ಷತೆಯು (Anirudh Kavya Reception) ನವೆಂಬರ್ 21ರಂದು ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿತು.
ನವೆಂಬರ್ 11ರಂದು ಗ್ರೀಸ್ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ವಿವಾಹದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು.
ಈ ಸಂಭ್ರಮಾಚರಣೆಗೆ ಸಿನಿಮಾ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರದ ದಿಗ್ಗಜರು ಸಾಕ್ಷಿಯಾದರು.
ಸೂಪರ್ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಆಸ್ಕರ್ ವಿಜೇತ ಎ.ಆರ್. ರೆಹಮಾನ್, ಟಾಲಿವುಡ್ ನಟ ಮಹೇಶ್ ಬಾಬು, ನಿರ್ದೇಶಕರಾದ ಅಟ್ಲೀ ಕುಮಾರ್, ಆರ್ಜೆ ಬಾಲಾಜಿ ಹಾಗೂ ರಾಜಕಾರಣಿಗಳಾದ ಪಿ. ಚಿದಂಬರಂ ಮತ್ತು ನಾರಾ ಲೋಕೇಶ್ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.
ಇದರೊಂದಿಗೆ, ಕಾವ್ಯಾ ಮಾರನ್ ಅವರ ಸಹ-ಮಾಲೀಕತ್ವದ ಸನ್ರೈಸರ್ಸ್ ಹೈದರಾಬಾದ್ (SRH) ತಂಡದೊಂದಿಗೆ ಗುರುತಿಸಿಕೊಂಡಿರುವ ಮಾಜಿ ಕ್ರಿಕೆಟಿಗರಾದ ಕೇನ್ ವಿಲಿಯಮ್ಸನ್, ಡೇಲ್ ಸ್ಟೇನ್ ಮತ್ತು ಡೇನಿಯಲ್ ವೆಟ್ಟೋರಿ ಅವರ ಉಪಸ್ಥಿತಿ ವಿಶೇಷ ಗಮನ ಸೆಳೆಯಿತು. ಸಮಾರಂಭದ ಅಧಿಕೃತ ಚಿತ್ರಗಳನ್ನು ಸನ್ ನ್ಯೂಸ್ ತಮಿಳು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.





