ಅಮರಾವತಿ: ತಿರುಮಲದ (Tirumala) ಶ್ರೀ ವೆಂಕಟೇಶ್ವರ ಸ್ವಾಮಿಗೆ ಉದ್ಯಮಿಯೊಬ್ಬರು ನವೆಂಬರ್ 26ರಂದು ಬರೋಬ್ಬರಿ 121 ಕೆಜಿ ಚಿನ್ನದ ಆಭರಣಗಳನ್ನು (Gold Jewels) ಕಾಣಿಕೆಯಾಗಿ ನೀಡಲಿದ್ದಾರೆ. ಅಂದಾಜು ಮೌಲ್ಯ 150ರಿಂದ 160 ಕೋಟಿ ರೂ. ಮೌಲ್ಯದ ಚಿನ್ನ ಇದಾಗಿದ್ದು, ತಿರುಮಲ ದೇವಸ್ಥಾನದ ಇತಿಹಾಸದಲ್ಲೇ ವೈಯಕ್ತಿಕವಾಗಿ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಿದೆ.
ಒಟ್ಟು 121 ಕೆಜಿ ತೂಕದ ಚಿನ್ನದಲ್ಲಿ 9 ಸೆಟ್ಗಳಾಗಿ 45 ವಿವಿಧ ಆಭರಣಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲ ಆಭರಣಗಳ ಒಟ್ಟು ಮೌಲ್ಯ ಸುಮಾರು 150ರಿಂದ 160 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: PUBLiC TV Impact | ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್, ವಾರ್ಡನ್ ಸಸ್ಪೆಂಡ್
ಈಗಾಗಲೇ ದಾನಿಯು ಟಿಟಿಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಕಾಣಿಕೆ ಸಮರ್ಪಣೆಗೆ ಅಗತ್ಯವಿರುವ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ. ನವೆಂಬರ್ 26ರಂದು ದೇವಸ್ಥಾನದಲ್ಲಿ ಅಧಿಕೃತವಾಗಿ ಚಿನ್ನಾಭರಣಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಏರ್ಪೋರ್ಟ್ನಲ್ಲಿ ಮಹಿಳೆ ಬಂಧನ, ದರದರನೆ ಎಳೆದೊಯ್ದ ಅಧಿಕಾರಿಗಳು; ಮಗಳಿಗಾಗಿ ತಾಯಿ ಕಣ್ಣೀರ ಆಕ್ರಂದನ!
2025ರ ಆಗಸ್ಟ್ನಲ್ಲಿ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಷೇರು ಮಾರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನವನ್ನು ಕಾಣಿಕೆಯಾಗಿ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಆಭರಣಗಳ ತಯಾರಿಕೆ ಪೂರ್ಣಗೊಂಡಿದ್ದು, ನವೆಂಬರ್ 26ರಂದು ದೇವರಿಗೆ ಸಮರ್ಪಣೆಯಾಗಲಿದೆ. ಇದನ್ನೂ ಓದಿ: ಶೂ, ಸಾಕ್ಸ್ ವಿತರಣೆಗಾಗಿ ಮನವಿ ನೀಡಲು ಬಂದವರ ಮೇಲೆ ಸಚಿವ ಮಧು ಬಂಗಾರಪ್ಪ ದರ್ಪ? – ವಿಡಿಯೋ ವೈರಲ್!
