– ಸಿಎಂಗೆ ಪ್ರತಿಷ್ಠೆಯಾದ ಹಿರಿಯೂರು ಬೈಎಲೆಕ್ಷನ್
ಚಿತ್ರದುರ್ಗ: ಹಿರಿಯೂರು ಉಪಚುನಾವಣೆ (Hiriyur By Election) ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆದರೆ ಕಾಂಗ್ರೆಸ್ ಹಾಗೂ ಎನ್ಡಿಎ ಮೈತ್ರಿಕೂಟದಲ್ಲಿ ಅಭ್ಯರ್ಥಿ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅತ್ತ ಹಿರಿಯೂರು ಬೈಎಲೆಕ್ಷನ್ ಸಿಎಂ ಡಿಕೆಶಿಗೆ (DK Shivakumar) ಅಗ್ನಿಪರೀಕ್ಷೆಯಾಗಿದ್ದರೇ, ಇತ್ತ ಹಿರಿಯೂರು ಟಿಕೆಟ್ಗಾಗಿ ಬಿಜೆಪಿ-ಜೆಡಿಎಸ್ (BJP-JDS) ಜಟಾಪಟಿ ನಡೆಸುತ್ತಿವೆ.
ಹಿರಿಯೂರು ಉಪಚುನಾವಣೆಯ ರಣಕಹಳೆ ಮೊಳಗುವ ಮುನ್ನವೇ ಟಿಕೆಟ್ ಫೈಟ್ ತಾರಕಕ್ಕೇರಿದೆ. ಆದರೆ ಶತಾಯಗತಾಯ ಹಿರಿಯೂರನ್ನು ತಮ್ಮ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿರುವ ಸಿಎಂ ಡಿಕೆ ಶಿವಕುಮಾರ್ ಕಾಂಗ್ರಸ್ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ. ತಾನೇ ಅಭ್ಯರ್ಥಿ ಅಂತ ಹೇಳಿಕೊಂಡು ಸರ್ಕಾರದಿಂದ ಮಾಡುವ ಅಭಿವೃದ್ಧಿಗೆ ಕೂಲಿ ಕೊಡಿ ಎಂದು ಪ್ರಜಾಸೇವಾ ಅಭಿಯಾನದ ನೆಪದಲ್ಲಿ ಮತಬೇಟೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಒಡೆದ ಮನೆಯಾಗಿದೆ. ಇದನ್ನೂ ಓದಿ: ಗುಜರಾತ್ನಲ್ಲಿ ಭೀಕರ ಅಪಘಾತ – ಯೋಧನ ಕುಟುಂಬಕ್ಕೆ ಸೇರಿದ 7 ಮಂದಿ ದುರ್ಮರಣ!
ಪಕ್ಷದ ಸಂಪ್ರದಾಯದಂತೆ ಸುಹಾಸ್ ಸುಧಾಕರ್ಗೆ ಟಿಕೆಟ್ ನೀಡಬೇಕೆಂಬ ಒಲವು ಕೆಲನಾಯಕರಲ್ಲಿದೆ. ಆದರೆ ಸಂಘಟನಾತ್ಮಕ ಬೆಂಬಲ ಹಾಗೂ ರಾಜಕೀಯ ಅನುಭವದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಸರ್ಕಾರದ ಸಮೀಕ್ಷೆಯಲ್ಲೂ ಸುಹಾಸ್ ಗೆಲುವಿನ ಬಗ್ಗೆ ಆತಂಕದ ವರದಿ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರವಾಗಿ ಕೈಮುಖಂಡರು ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಕಾಂಗ್ರೆಸ್ನಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ‘ಬಸವ ಮಂಟಪ’ ಲೇಖಕ ರವಿ ಹಂಜ್ ಹತ್ಯೆ ಮಾಡಿದ್ರೆ 5 ಲಕ್ಷ ರೂ. ಬಹುಮಾನ: ಪ್ರಕಾಶ್ ಮಹಾಜನ್ ವಿವಾದಾತ್ಮಕ ಹೇಳಿಕೆ
ಕಾಂಗ್ರೆಸ್ ಟಿಕೆಟ್ ಗೊಂದಲದ ಗೂಡಲ್ಲಿ ಸಿಲುಕಿ ಒದ್ದಾಡುತ್ತಿದೆ. ಈ ಬೆಳವಣಿಗೆಯನ್ನು ಗಮನಿಸಿರುವ ಸಿಎಂ ಡಿ.ಕೆಶಿ ಅಭಿವೃದ್ಧಿ ನೆಪದಲ್ಲಿ ಪದೇಪದೇ ಹಿರಿಯೂರಿಗೆ ಭೇಟಿ ನೀಡುತ್ತಿದ್ದಾರೆ. ರಾಜಕೀಯ ಚಟುವಟಿಕೆಗಳಿಗೆ ವೇಗ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಜಿ ನಿಮ್ಮ ಸಲಹೆ ಪಾಲಿಸಿದ್ದೇವೆ ಅಂತ ಜನತೆ ಹೇಳುತ್ತಿದ್ದಾರೆ: ಚಿನ್ನದ ಬೆಲೆ ಕುಸಿತದ ಬಗ್ಗೆ ಮೋದಿ ಮಾತು
ಎನ್ಡಿಎಯಲ್ಲೂ ಟಿಕೆಟ್ಗಾಗಿ ಹಗ್ಗಜಗ್ಗಾಟ:
ಇನ್ನು ಎನ್ಡಿಎ ಪಾಳಯದಲ್ಲೂ ಸಹ ಜೆಡಿಎಸ್ ಹಾಗು ಬಿಜೆಪಿ ದೋಸ್ತಿಗಳ ಮದ್ಯೆ ಅಭ್ಯರ್ಥಿ ಆಯ್ಕೆಯ ಕಸರತ್ತು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎರಡು ಕಡೆಯೂ ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ಸೋಲು ಗೆಲುವಿನ ಲೆಕ್ಕಾಚಾರದೊಂದಿಗೆ ಬೈಎಲೆಕ್ಷನ್ ಅಭ್ಯರ್ಥಿಗಳಾಗಲು ಸಜ್ಜಾಗಿರುವ ಆಕಾಂಕ್ಷಿಗಳು ಅವರವರ ಶಕ್ತಿಯನುಸಾರ ರಾಜ್ಯ ಹಾಗು ಕೇಂದ್ರದ ಹೈಕಮಾಂಡ್ ಮಟ್ಟದವರೆಗೆ ಲಾಬಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಂಬೋಡಿಯಾದಿಂದ ಸಿಲಿಕಾನ್ ಸಿಟಿಗೆ ಸಫ್ಲೈ ಆಗ್ತಿದ್ದ 12 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಸೀಜ್
ಈ ನಡುವೇ ಜೆಡಿಎಸ್ ಪ್ರಾಬಲ್ಯದ ಕ್ಷೇತ್ರವಾಗಿರುವ ಹಿರಿಯೂರಿನಲ್ಲಿ ನಮಗೇ ಅವಕಾಶ ನೀಡಬೇಕೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದು, ಮತ್ತೊಂದೆಡೆ ಬಿಜೆಪಿ ನಾಯಕರು ಕೂಡ ಸಂಸದ ಗೋವಿಂದ ಕಾರಜೋಳ ಅವರ ಬೆಂಬಲ ಪಡೆದಿರುವ ರಾಜಣ್ಣ ಪರ ಒಲವು ತೋರಿದ್ದಾರೆ. ಆದರೆ ಸ್ಥಳೀಯ ಬಿಜೆಪಿ ನಾಯಕರಾದ ತಾಲೂಕು ಅಧ್ಯಕ್ಷ ಅಭಿನಂದನ್ ಹಾಗೂ ವಿಭಾಗ ಸಹಪ್ರಭಾರಿ ಮುರುಳಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇತ್ತ ಜೆಡಿಎಸ್ನಿಂದ ನಿವೃತ್ತ ಭದ್ರಾ ಎಂಜಿನಿಯರ್ ಸಣ್ಣ ಚಿತ್ತಯ್ಯ ಹಾಗೂ 2023ರ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ ನಡುವೆ ಟಿಕೆಟ್ಗಾಗಿ ಬಾರಿ ಪೈಪೋಟಿ ನಡೆದಿದೆ. ಹೀಗಾಗಿ ಎನ್ಡಿಎ ಟಿಕೆಟ್ ಕೂಡ ಫೈನಲ್ ಆಗದೇ ಕಾರ್ಯಕರ್ತರು ಅಡಕತ್ತರಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿದ ಯುಜುವೇಂದ್ರ ಚಾಹಲ್
