ವೆಲ್ಲಿಂಗ್ಟನ್: ಕೆಎಲ್ ರಾಹುಲ್ (K.L Rahul )ಶತಕ ಮತ್ತು ನಾಯಕ ಶುಭಮನ್ ಗಿಲ್, ದೇವದತ್ ಪಡಿಕ್ಕಲ್ ಅವರ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (Team India) 118 ರನ್ಗಳ ಮುನ್ನಡೆ ಸಾಧಿಸಿದೆ.
– Final over of the day.
– Batting on 98*.FEEL FOR SHUBMAN GILL 💔 he missed a well deserving Hundred by just 2 runs. https://t.co/Ayi6oJHN4n
— Johns. (@CricCrazyJohns) November 21, 2026
1 ವಿಕೆಟ್ ಕಳೆದುಕೊಂಡು 159 ರನ್ಗಳಿಸಿದ್ದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 125 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 486 ರನ್ಗಳಿಸಿದೆ.
ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 13ನೇ ಶತಕವನ್ನು ಹೊಡೆದು ಅಂತಿಮವಾಗಿ 146 ರನ್( 290 ಎಸೆತ, 2 ಸಿಕ್ಸರ್, 9 ಬೌಂಡರಿ) ಗಳಿಸಿ ಔಟಾದರೆ ದೇವದತ್ ಪಡಿಕ್ಕಲ್ 175 ಎಸೆತಗಳಲ್ಲಿ 10 ಬೌಂಡರಿ ಹೊಡೆದು 80 ರನ್ ಹೊಡೆದು ವಿಕೆಟ್ ಒಪ್ಪಿಸಿದರು. ಇವರಿಬ್ಬರು ಎರಡನೇ ವಿಕೆಟಿಗೆ 337 ಎಸೆತಗಳಲ್ಲಿ 165 ರನ್ ಜೊತೆಯಾಟವಾಡುವ ಮೂಲಕ ಭದ್ರವಾದ ಅಡಿಪಾಯ ಹಾಕಿದರು.
ಆದ್ರೆ ದಿನದ ಕೊನೇ ಓವರ್ನಲ್ಲೇ ಜಾಕೊಬ್ ಡಫಿಗೆ ವಿಕೆಟ್ ಒಪ್ಪಿಸಿದ ನಾಯಕ ಗಿಲ್, 2 ರನ್ಗಳಿಂದ ಶತಕ ವಂಚಿತರಾಗಿ ನಿರಾಸೆಯಿಂದ ಹೊರ ನಡೆದರು. ನಾಯಕ ಶುಭಮನ್ ಗಿಲ್ 146 ಎಸೆತಗಳಲ್ಲಿ 2 ಸಿಕ್ಸರ್ 9 ಬೌಂಡರಿ ಸಿಡಿಸಿ 98 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಗಾಯದಿಂದ ಚೇತರಿಸಿಕೊಂಡು ಮರಳಿರುವ ರಿಷಭ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಹೊಡೆದರು. ದಿನದ ಅಂತ್ಯಕ್ಕೆ ರಿಷಭ್ ಪಂತ್ 55 ರನ್(62 ಎಸೆತ, 2 ಸಿಕ್ಸ್, 5 ಬೌಂಡರಿ) ಮತ್ತು ಯಾವುದೇ ರನ್ ಗಳಿಸಿದ ಅನ್ಶುಲ್ ಕಾಂಬೋಜ್ ಕ್ರೀಸ್ನಲ್ಲಿ ಇದ್ದು ನಾಳೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ


