ಶ್ರೀನಗರ: ಕುಲ್ಗಾಮ್ನ ಸಿಆರ್ಪಿಎಫ್ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಲತೀಫ್ ಭಟ್ (Lashkar Commander Lateef Bhat) ಭದ್ರತಾ ಪಡೆಗಳ ಗುಂಡಿಗೆ ಹತನಾಗಿದ್ದಾನೆ.
ಗುಪ್ತಚರ ಮಾಹಿತಿ ಮೇರೆಗೆ ಭಾರತೀಯ ಸೇನೆ (Indian Army), ಜಮ್ಮು ಮತ್ತು ಕಾಶ್ಮೀರದ ಪೊಲೀಸ್, ಸಿಆರ್ಪಿಎಫ್ (CRPF) ಪಡೆಗಳು ನಡೆಸಿದ ʻಆಪರೇಷನ್ ಝಂಗಲ್ಪುರʼ ಜಂಟಿ ಕಾರ್ಯಾಚರಣೆ ವೇಳೆ ಉಗ್ರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.
OP ZANGALPURA, Kulgam
A Joint Operation based on the specific int of JKP was launched by #IndianArmy, @JmuKmrPolice and @crpf_srinagar early morning in general area Zangalpura, Kulgam.
During the operation, terrorist took refuge in a mosque. Security forces displayed exemplary restraint during conduct of operations ensuring the sanctity of the religious place and neutralised the terrorist with precision by forcing him to move out of the mosque premises.
Operation is in progress.
#Kashmir
@adgpi
@NorthernComd_IA
@PRODefSrinagar— Chinar Corps🍁 – Indian Army (@ChinarcorpsIA) November 18, 2026
ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ (Chinar Corps) ಕಂಪನಿ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದೆ. ಸ್ಥಳೀಯ ಪೊಲೀಸರಿಂದ ಲಭಿಸಿದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸಿಆರ್ಪಿಎಫ್ ಪಡೆಗಳು ಇಂದು ಮುಂಜಾನೆ ಕುಲ್ಗಾಮ್ ಜಿಲ್ಲೆಯ ಜಂಗಲ್ಪುರಾ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದವು.
ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರನೊಬ್ಬ ಮಸೀದಿಯಲ್ಲಿ ಆಶ್ರಯ ಪಡೆದುಕೊಂಡಿದ್ದ. ಧಾರ್ಮಿಕ ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಅತ್ಯಂತ ಸಂಯಮದಿಂದ ಕಾರ್ಯಾಚರಣೆ ನಡೆಸಿದವು. ಮಸೀದಿ ಆವರಣದಿಂದ ಹೊರಬರುವಂತೆ ಉಗ್ರನನ್ನ ಒತ್ತಾಯಿಸಿದವು. ನಂತರ ನಿಖರ ಕಾರ್ಯಾಚರಣೆಯ ಮೂಲಕ ಆತನನ್ನ ಹತ್ಯೆಗೈಯಲಾಯಿತು ಎಂದು ತಿಳಿಸಿದೆ. ಜೊತೆಗೆ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಮಾಹಿತಿ ಹಂಚಿಕೊಂಡಿದೆ.

ವಿಡಿಯೋ ಕಾಲ್ನಲ್ಲಿ ಉಗ್ರನ ಮನವೊಲಿಸು ಪ್ರಯತ್ನ
ಕಾರ್ಯಾಚರಣೆಯ ವೇಳೆ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ವಿಡಿಯೋ ಕರೆ ಮೂಲಕ ಲತೀಫ್ ಭಟ್ನನ್ನ ಸಂಪರ್ಕಿಸಿದ್ರು. ನಾವು ನಿಮ್ಮೊಂದಿಗಿದ್ದೇವೆ, ಈ ಮಾರ್ಗವನ್ನು ಏಕೆ ಆರಿಸಿಕೊಂಡಿದ್ದೀರಿ ಶರಣಾಗಿ ಎಂದು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದ್ರು. ಆದ್ರೆ ಭಟ್, ನಾನು ಅಲ್ಲಾಹನನ್ನ ಭೇಟಿಯಾಗಲು ಹೊರಟಿದ್ದೇನೆ. ನನಗೆ ಅಲ್ಲಾಹನೇ ಸಾಕು ಎಂದು ಹೇಳಿ ಶರಣಾಗಲು ನಿರಾಕರಿಸಿದ್ದ. ಈ ಸಂಭಾಷಣೆಯ ವಿಡಿಯೋ ಕೂಡ ಹೊರಬಂದಿದೆ. ಅಷ್ಟೇ ಅಲ್ಲ ಮಸೀದಿಯೊಳಗಿಂದಲೇ ಗುಂಡಿನ ದಾಳಿ ನಡೆಸಿದ್ದ ಎಂದು ಜೆ&ಕೆ ಪೊಲೀಸ್ ಮೂಲಗಳು ತಿಳಿಸಿವೆ.
ನವೆಂಬರ್ 11ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಚೆಕ್ಪೋಸ್ಟ್ ಮೇಲೆ ಲತೀಫ್ ಭಟ್ ಹಾಗೂ ಆತನ ಸಹಚರ ಸೇರಿ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.
