ಜೆರುಸಲೆಮ್: ದಕ್ಷಿಣ ಗಾಜಾದ ಖಾನ್ ಯೂನಿಸ್ನ ಅಲ್-ಮವಾಸಿ ಪ್ರದೇಶದಲ್ಲಿ ಇಸ್ರೇಲ್ ಸೇನೆ (Israel Attack) ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ನ ಪ್ರಮುಖ ಕಮಾಂಡರ್ ಹತ್ಯೆಗೀಡಾಗಿದ್ದಾರೆ.
ಹಮಾಸ್ನ ಸಶಸ್ತ್ರ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್ಗಳ ರಫಾ ಬ್ರಿಗೇಡ್ ಕಮಾಂಡರ್ ಸಮೀರ್ (53) ಅಬು ಯೂನಿಸ್ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಭದ್ರತಾ ಮೂಲಗಳು ಖಚಿತಪಡಿಸಿವೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ.
ನಾಸರ್ ಆಸ್ಪತ್ರೆ ಮೇಲೆ ದಾಳಿ
ಇದಕ್ಕೂ ಮುನ್ನ ನವೆಂಬರ್ 13 ರಂದು ಖಾನ್ ಯೂನಿಸ್ನ ನಾಸರ್ ವೈದ್ಯಕೀಯ ಸಂಕೀರ್ಣದ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ವೈದ್ಯ ಸೇರಿದಂತೆ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು, 27 ಜನರು ಗಾಯಗೊಂಡಿದ್ದಾರೆ. ಇದು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ಖಂಡಿಸಿದೆ.ಇದನ್ನೂ ಓದಿ: ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ ಯಶ್ ʻರಾಮಾಯಣʼ – ಕಾಂತಾರ ಚಾಪ್ಟರ್-1, ಜವಾನ್, ಕಲ್ಕಿ ದಾಖಲೆಗಳು ಉಡೀಸ್
ಕದನ ವಿರಾಮಕ್ಕೆ ಧಕ್ಕೆ
ಅ. 2025 ರಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದಿದ್ದ ಕದನ ವಿರಾಮವು ಈಗ ತೀವ್ರ ಒತ್ತಡಕ್ಕೆ ಸಿಲುಕಿದೆ. ಕದನ ವಿರಾಮ ಜಾರಿಯಾದಾಗಿನಿಂದ ಗಾಜಾದಲ್ಲಿ 1,600ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇತ್ತ ಇಸ್ರೇಲ್ ಕಡೆಯೂ ಏಳು ಸೈನಿಕರು ಮತ್ತು ಒಬ್ಬ ನಾಗರಿಕ ಗುತ್ತಿಗೆದಾರ ಮೃತಪಟ್ಟಿದ್ದಾರೆ.ಇದನ್ನೂ ಓದಿ: ಭಾರತದ ಅಭಿವೃದ್ಧಿಗೆ ಚೀನಾ ಕಣ್ಣ ಕೆಂಪು? – ಸುರಂಗ ಕೊರೆಯುವ ಯಂತ್ರಗಳ ರಫ್ತಿಗೆ ಚೀನಾ ನಿರ್ಬಂಧ
