ಈ ವಾರ ಮನೆಯಲ್ಲಿ ಬಿಗ್ಬಾಸ್ (Bigg Boss) ಪರಿಷತ್ ಟಾಸ್ಕ್ ನೀಡಲಾಗಿತ್ತು. ಮೈತ್ರಿ ಮಾಡಿಕೊಂಡು ಪಕ್ಷ ಕಟ್ಟಿಕೊಂಡು ಎರಡು ತಂಡಗಳಾಗಿ ಆಟವಾಡಿ, ಕೊನೆಗೆ ಜಗದೀಶ್ ಕ್ಯಾಪ್ಟನ್ ಆಗಿದ್ದರು. ಆದರೆ ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಈ ವಾರಕ್ಕೆ ಕ್ಯಾಪ್ಟನ್ ಇಲ್ಲ ಎಂದು ಘೋಷಿಸಿದ್ದಾರೆ.
ಈ ವಾರದ ತಮ್ಮ ಪಕ್ಷದ ನಾಯಕರಿಗೆ ಬಣ್ಣ ಬಳಿಯುವ ಟಾಸ್ಕ್ವೊಂದನ್ನು ಬಿಗ್ಬಾಸ್ ನೀಡಿದ್ದರು. ಆ ಟಾಸ್ಟ್ನಲ್ಲಿ ಉಸ್ತುವಾರಿಗಳಿಂದ ಅಂತಿಮ ನಿರ್ಧಾರ ಬರದ ಕಾರಣ ಟಾಸ್ಕ್ ರದ್ದಾಗಿತ್ತು. ಹೀಗಾಗಿ ಆ ಟಾಸ್ಕ್ನ ಫಲಿತಾಂಶ ತೋರಿಸಿ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ದುಡ್ಡಲ್ಲೇ ಮೆಟ್ರೋ ಟಿಕೆಟ್ ತೆಗೆದುಕೊಂಡ ಡಿಕೆಶಿ; ಪಿಎಂ-ಸಿಎಂ ಮೆಟ್ರೋ ಜರ್ನಿಯ ಸ್ವಾರಸ್ಯಕರ ಸಂಗತಿ ರಿವೀಲ್
ಈ ವಾರ no captain!
ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/m8n9VQuRKM
— Colors Kannada (@ColorsKannada) November 14, 2026
ಕ್ಯಾಪ್ಟನ್ಸಿಯ ಮಹತ್ವ ಮತ್ತು ಆಟದ ಗಂಭೀರತೆಯನ್ನು ತಿಳಿಸುತ್ತಾ ಕಿಚ್ಚ ಸುದೀಪ್ ನೀಡಿದ ಅಂತಿಮ ತೀರ್ಪು ಇಡೀ ಮನೆಯನ್ನು ಸ್ತಬ್ಧಗೊಳಿಸಿದೆ. ಎಐ ಬಳಸಿ ಟಾಸ್ಕ್ನ ರಿಸಲ್ಟ್ ಪತ್ತೆ ಹಚ್ಚಿದ್ದು, ಆಟದಲ್ಲಿ ಯಶಸ್ ತಂಡ ಗೆದ್ದಿದೆ. ಹೀಗಾಗಿ ಕ್ಯಾಪ್ಟನ್ಸಿ ಪ್ರಕ್ರಿಯೆ ಸಂಪೂರ್ಣವಾಗಿ ತಪ್ಪಿದ ಹಿನ್ನೆಲೆ ಈ ವಾರ ಈ ಮನೆಗೆ ಯಾವೊಬ್ಬ ಕ್ಯಾಪ್ಟನ್ ಕೂಡ ಇರಲ್ಲ ಎಂದಿದ್ದಾರೆ.
ತಪ್ಪಿದ ಲೆಕ್ಕಾಚಾರಗಳು, ಕೈತಪ್ಪಿ ಹೋದ ಗೆಲುವಿನಿಂದ ಈ ವಾರ ಕಂಪ್ಲೀಟ್ ವೇಸ್ಟ್ ಆಗಿದೆ. ಯಾರೂ ಕ್ಯಾಪ್ಟನ್ ಆಗಬೇಕಿತ್ತು… ಅವರು ಕ್ಯಾಪ್ಟನ್ ಆಗಲಿಲ್ಲ ಎಂದು ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಮಹಿಳೆಯರು 2,000ಕ್ಕೆ ಮರುಳಾಗಬೇಡಿ.. ನಾನು ತಿಂಗಳಿಗೆ 5,000 ರೂ. ಬರುವಂತೆ ಮಾಡಬಲ್ಲೆ: ‘ಗೃಹಲಕ್ಷ್ಮಿ’ಯರಿಗೆ ಹೆಚ್ಡಿಕೆ ಮನವಿ
