ಅಮೆರತ್: ಅಂಡರ್-19 ಏಷ್ಯಾಕಪ್ (U19 Asia Cup 2026) ಏಕದಿನ ಟೂರ್ನಿಯ ಫೈನಲ್ನಲ್ಲಿ ಬದ್ಧವೈರಿ ಪಾಕಿಸ್ತಾನ (Pakistan) ವಿರುದ್ಧ ಟೀಂ ಇಂಡಿಯಾ (Team India) ರೋಚಕ ಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿದೆ.
338 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕ ಲಕ್ಷ್ಯ ರಾಯ್ಚಂದಾನಿ (80) ಮತ್ತು ಆರ್ಯವೀರ್ ಸೆಹ್ವಾಗ್ (58) ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ತಂಡದ ಮೊತ್ತ 252 ರನ್ ಇರುವಾಗ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
𝗖.𝗛.𝗔.𝗠.𝗣.𝗜.𝗢.𝗡.𝗦 🏆
An absolutely incredible run chase in the Final gives India U19 the #MensU19AsiaCup 2026 title 🇮🇳 👏
Scorecard ▶️ https://t.co/srKsrr1jna https://t.co/BYh3iNO18o
— BCCI (@BCCI) November 14, 2026
ಈ ವೇಳೆ, ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಮನಾಲ್ ಚೌಹಾಣ್ (32 ಎಸೆತಗಳಲ್ಲಿ 47) ಮತ್ತು ಮೋಹಿತ್ ಉಲ್ವಾ (26 ಎಸೆತಗಳಲ್ಲಿ 49 ರನ್) ಕೊನೆಯ ಎಸೆತದಲ್ಲಿ ಅದ್ಭುತ ಗೆಲುವು ಸಾಧಿಸಲು ಸಹಾಯ ಮಾಡಿದರು.
ಇದಕ್ಕೂ ಮೊದಲು, ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ಪಾಕಿಸ್ತಾನದ ಆರಂಭಿಕ ಆಟಗಾರ 107 ರನ್ ಗಳಿಸಿದರು ಮತ್ತು ಅಬ್ದುಲ್ ಖಾದಿರ್ (54 ಎಸೆತಗಳಲ್ಲಿ 80) ಮತ್ತು ನಾಯಕ ಫರ್ಹಾನ್ ಯೂಸಫ್ (60 ಎಸೆತಗಳಲ್ಲಿ 63) ಅವರಿಂದ ಅತ್ಯುತ್ತಮ ಬೆಂಬಲ ದೊರೆಯಿತು. ಭಾರತ ತಡವಾಗಿ ಚೇತರಿಸಿಕೊಂಡು ಕೊನೆಯ ಆರು ಓವರ್ಗಳಲ್ಲಿ ಆರು ವಿಕೆಟ್ಗಳನ್ನು ಕಬಳಿಸಿತು. ಕಾವ್ಯಾ ಪಟೇಲ್ ನಾಲ್ಕು ವಿಕೆಟ್ಗಳನ್ನು ಪಡೆದರೆ, ಸಿ ವೆಂಕಟ ಮೂರು ವಿಕೆಟ್ಗಳನ್ನು ಕಬಳಿಸಿದರು.
