– ನನ್ನ ಬಳಿ ದುಡ್ಡಿಲ್ಲ.. ನೀವೇ ಟಿಕೆಟ್ ತಗೊಳ್ಳಿ ಅಂತ ಮೋದಿ ಬಳಿ ಹೇಳಿದ್ದ ಸಿಎಂ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಅವರ ಮೆಟ್ರೋ ಪ್ರಯಾಣದ ಸ್ವಾರಸ್ಯಕರ ವಿಚಾರವೊಂದು ರಿವೀಲ್ ಆಗಿದೆ. ಮೋದಿ ಅವರ ದುಡ್ಡಲ್ಲೇ ನಿನ್ನೆ (ಶುಕ್ರವಾರ) ಡಿ.ಕೆ.ಶಿವಕುಮಾರ್ ಅವರು ಮೆಟ್ರೋ ಟಿಕೆಟ್ ಖರೀದಿ ಪ್ರಯಾಣಿಸಿದ್ದರಂತೆ. ಈ ವಿಚಾರವನ್ನು ಸ್ವತಃ ಸಿಎಂ ಅವರೇ ಹೇಳಿಕೊಂಡಿದ್ದಾರೆ.
ಇಂದು ಕಾಳೇನ ಅಗ್ರಹಾರದಿಂದ ಎಸ್ಜಿ ಪಾಳ್ಯ (ತಾವರೆಕೆರೆ)ಗೆ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಡಿಕೆಶಿ ಅವರು ಮೋದಿ ಜೊತೆಗಿನ ಮೆಟ್ರೋ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಮೇಕೆದಾಟು ನಮ್ಮ ಹಕ್ಕು, ಅಣೆಕಟ್ಟು ಕಟ್ಟಿ ತಮಿಳುನಾಡಿಗೂ ನೀರು ಕೊಡುತ್ತೇವೆ: ಡಿಕೆಶಿ
ನಿನ್ನೆ ಪ್ರಧಾನ ಮಂತ್ರಿಗಳೇ ಟಿಕೆಟ್ ಖರೀದಿಸಿದರು. ನನ್ನ ಬಳಿ ಕಾಸು ಇರಲಿಲ್ಲ. ಹಾಗಾಗಿ, ನನ್ನ ಟಿಕೆಟ್ ಸಹ ನೀವೇ ತೆಗೆದುಕೊಳ್ಳಿ ಅಂತ ಪ್ರಧಾನಿಗಳಿಗೆ ಹೇಳಿದೆ. ಅವರೇ ಸ್ಮಾರ್ಟ್ ಕಾರ್ಡ್ ತೆಗೆದುಕೊಂಡರು. ಇದೇ ಅದು ಅಂತ ಸಿಎಂ ಕಾರ್ಡ್ ತೋರಿಸಿದರು.
