ಬೆಂಗಳೂರು: ಬಿಹಾರದ ಕಾರ್ಯಕ್ರಮವೊಂದರಲ್ಲಿ “ಮೋದಿ ಜೈಲಿಗೆ ಹೋಗುತ್ತಾರೆ” ಎಂದು ಹೇಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಬಿಜೆಪಿ (BJP) ಎಐ ವಿಡಿಯೋ ಮೂಲಕ ಟಾಂಗ್ ಕೊಟ್ಟಿದೆ.
ಎಕ್ಸ್ನಲ್ಲಿ ಬಿಜೆಪಿ ಹಂಚಿಕೊಂಡಿರುವ ವಿಡಿಯೋದಲ್ಲಿ, ʻಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಎಂದಿಗೂ ಮೋದಿ ಎಲ್ಲೂ ಹೋಗಲ್ಲʼ ಎಂಬ ಹಾಡನ್ನು ಹಾಕಿ ಕಾಂಗ್ರೆಸ್ (Congress) ನಾಯಕರಿಗೆ ಬಿಜೆಪಿ ಕೌಂಟರ್ ಕೊಟ್ಟಿದೆ. ಇದನ್ನೂ ಓದಿ: 50 ಕೋಟಿ ಜನ ಕಡು ಬಡುತನದಿಂದ ಹೊರ ಬಂದಿದ್ದಾರೆ – ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿ ಮೋದಿ ಮಾತು
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ‘ಚುನಾವಣಾ ಅಕ್ರಮ’ದ ಬಗ್ಗೆ ಅವರು ಪ್ರಸ್ತಾಪಿಸಿದ್ದರು. ಈ ವೇಳೆ ಅವರು “ಮೋದಿ ಜೈಲಿಗೆ ಹೋಗುತ್ತಾರೆ” ಎಂದು ಹೇಳುತ್ತಿದ್ದರು. ಅದೇ ಸಮಯದಲ್ಲಿ ಅಲ್ಲಿನ ಸಭೆಯಲ್ಲಿದ್ದ ಸಂತೋಷ್ ಕುಮಾರ್ ಎಂಬಾತ “ಮೋದಿ ಕಹೀಂ ನಹೀಂ ಜಾಯೇಗಾ” (ಮೋದಿ ಎಲ್ಲಿಗೂ ಹೋಗುವುದಿಲ್ಲ) ಎಂಬ ಹೇಳಿದ್ದ. ಇದರಿಂದ ಕೆರಳಿದ ಮಲ್ಲಿಕಾರ್ಜುನ ಖರ್ಗೆ ಅವರು “ಮೋದಿ ಕಾ ಬಾಪ್ ಭೀ ಜಾಯೇಗಾ” (ಮೋದಿಯವರ ತಂದೆಯೂ ಹೋಗಬೇಕಾಗುತ್ತದೆ) ಎಂದು ಹೇಳಿದ್ದರು. ಈ ಮಾತನ್ನು 3 ಬಾರಿ ಪುನರುಚ್ಚರಿಸಿದರು. ಸಭೆಯಲ್ಲಿ ಮೋದಿ ನಹಿ ಜಾಯೇಂಗೇ ಎಂದು ಹೇಳಿದ್ದ ಸಂತೋಷ್ ಕುಮಾರ್ ಎಂಬ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗರು ಥಳಿಸಿ, ಹೊರಗೆ ಕಳಿಸಿದ್ದರು.
ಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ
ಎಂದಿಗೂ ಮೋದಿ ಜನರ ಬಿಟ್ಟು ಎಲ್ಲೂ ಹೋಗಲ್ಲ…#ModiKahinNahinJayega
#KarnatakaWelcomesPMMod https://t.co/rkhhzq2UpS— BJP Karnataka (@BJP4Karnataka) November 13, 2026
ಈ ಬಗ್ಗೆ ಮಾತನಾಡಿದ್ದ ಸಂತೋಷ್ ಕುಮಾರ್, ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನೂ ಕೂಡ ಮೋದಿ ಅಧಿಕಾರದಿಂದ ಹೋಗಲಿ ಎಂದೇ ಬಯಸುತ್ತೇನೆ. ‘ದಂಗೆ ಏಳದ ಹೊರತು ಮೋದಿ ಹೋಗುವುದಿಲ್ಲ’ ಎಂದು ನಾನು ಹೇಳಿದೆ. ಆದರೆ ನನ್ನ ಮಾತಿನ ಒಂದು ಭಾಗ ಮಾತ್ರ ಕೇಳಿಸಿದ್ದು, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮೆಟ್ರೋ ಉದ್ಘಾಟನೆಗೂ ಮುನ್ನ ಫ್ಲೆಕ್ಸ್ ವಾರ್; ಮೋದಿ, ಸಿಎಂ ಸ್ವಾಗತಕ್ಕೆ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ಪೈಪೋಟಿ!
