– ಅವಶೇಷಗಳಡಿಯಿಂದ ಗರ್ಭಿಣಿಯ ರಕ್ಷಣೆ
ಆಲ್ಬನಿ: ಅಮೆರಿಕದ ನ್ಯೂಯಾರ್ಕ್ನ (New York) ಬ್ರೂಕ್ಲಿನ್ (Brooklyn) ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು (Building Collapse) ಭೀಕರ ದುರಂತ ಸಂಭವಿಸಿದೆ. ಬುಧವಾರ ನಡೆದ ಈ ಘಟನೆಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, ಮೂವರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 17 ಜನರು ಗಾಯಗೊಂಡಿದ್ದಾರೆ.
1930ರಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡ ಬುಧವಾರ ಸ್ಥಳೀಯ ಕಾಲಮಾನ ಸಂಜೆ 4 ಗಂಟೆ ಸುಮಾರಿಗೆ ಸಂಪೂರ್ಣವಾಗಿ ಕುಸಿದಿದೆ. ಪರಿಣಾಮ ಪಕ್ಕದ ಕಟ್ಟಡದ ಗೋಡೆಯೂ ಹಾನಿಗೊಳಗಾಗಿದೆ. ಘಟನೆ ಬಳಿಕ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ವೇಳೆ ಅವಶೇಷಗಳಡಿಯಿಂದ ಗರ್ಭಿಣಿಯೊಬ್ಬರನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಬಸ್ಸಿನ ಮುಂಭಾಗದ ಚಕ್ರದ ನಟ್ ಕಿತ್ತಿ ಹೊಲಕ್ಕೆ ನುಗ್ಗಿದ ಬಸ್ – ತಪ್ಪಿದ ದುರಂತ
ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಎಕ್ಸ್ ಖಾತೆಯಲ್ಲಿ ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾರ್ವಜನಿಕರು ಘಟನಾ ಸ್ಥಳದ ಸಮೀಪಕ್ಕೆ ಹೋಗದಂತೆ ಮನವಿ ಮಾಡಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: Jammu And Kashmir | ಬಾರಾಮುಲ್ಲದಲ್ಲಿ 2 ಹ್ಯಾಂಡ್ ಗ್ರೆನೇಡ್ಗಳೊಂದಿಗೆ ವ್ಯಕ್ತಿ ಅರೆಸ್ಟ್
