ಅಲ್ ಅಮೆರಾತ್: ಅಂಡರ್-19 ಏಷ್ಯಾಕಪ್ನ(Asia Cup) ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನವನ್ನು(Afghanistan) 8 ವಿಕೆಟ್ಗಳಿಂದ ಭರ್ಜರಿಯಾಗಿ ಸೋಲಿಸಿದ ಭಾರತ(India) ಫೈನಲ್ ಪ್ರವೇಶಿಸಿದೆ.
ಓಮನ್ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಭಾರತದ ವೇಗಿ ಇಶಾನ್ ಸೂದ್ 3 ವಿಕೆಟ್ ಪಡೆದು ಮಿಂಚಿದರು. 228 ರನ್ಗಳ ಗುರಿ ಬೆನ್ನಟ್ಟಿದ ಭಾರತ ಕೇವಲ 36.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 79 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
Lakshya Raichandani doesn’t miss out when it’s right in the slot. ⚡
Watch #AFGvIND in the DP World Men’s U19 Asia Cup, LIVE NOW on Sony Sports Network TV channels & Sony LIV.
#SonySportsNetwork #SonyLIV https://t.co/0OTO05X3c9
— Sony Sports Network (@SonySportsNetwk) November 12, 2026
ತಂಡದ ನಾಯಕ ಲಕ್ಷ್ಯ ರಾಜೇಶ್ ರಾಯಚಂದಾನಿ 90 ಎಸೆತಗಳಲ್ಲಿ 93 ರನ್(13 ಬೌಂಡರಿ, 1 ಸಿಕ್ಸ್) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರಿಗೆ ಆರ್ಯವೀರ್ ಸೆಹ್ವಾಗ್ 51 ರನ್(57 ಎಸೆತ, 4 ಬೌಂಡರಿ, 4 ಸಿಕ್ಸ್) ಸಿಡಿಸಿ ಉತ್ತಮ ಸಾಥ್ ನೀಡಿದರು.
Another milestone, same trademark finish! 😍
Aaryavir Sehwag brought up his fifty with a six. 💥
Watch #AFGvIND in the DP World Men’s U19 Asia Cup, LIVE NOW on Sony Sports Network TV channels & Sony LIV.
#SonySportsNetwork #SonyLIV https://t.co/iqzisSX78h
— Sony Sports Network (@SonySportsNetwk) November 12, 2026
ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು 9 ವಿಕೆಟ್ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ಪಾಕಿಸ್ತಾನ(Pakistan) ತಂಡ ಫೈನಲ್ ತಲುಪಿದೆ. ಫೈನಲ್ ಪಂದ್ಯವು (Final Match) ನವೆಂಬರ್ 14 ರಂದು ಓಮನ್ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10:30ಕ್ಕೆ ಪಂದ್ಯ ಆರಂಭವಾಗಲಿದೆ.
ಈ ಟೂರ್ನಿಯ ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ 3 ವಿಕೆಟ್ಗಳ ಸೋಲಿಗೆ ಹಾಗೂ ಕಳೆದ ಆವೃತ್ತಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದು ಉತ್ತಮ ಅವಕಾಶವಾಗಿದೆ.
