ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ಗೆ ಕೋರ್ಟ್ ಆದೇಶದ ಬೆನ್ನಲ್ಲೇ ಜೈಲಾಧಿಕಾರಿಗಳು ಫಿಸಿಯೋಥೆರಪಿ (Physiotherapy) ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.
ಸಂಜಯ್ ಗಾಂಧಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರು ಜೈಲಿನಲ್ಲೇ ದರ್ಶನ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೋರ್ಟ್ ಸೂಚನೆಯಂತೆ ಜೈಲಾಧಿಕಾರಿಗಳು ವೈದ್ಯರಿಗೆ ಮನವಿ ಮಾಡಿದ್ದು, ಅದರಂತೆ ಚಿಕಿತ್ಸೆ ಆರಂಭಿಸಲಾಗಿದೆ. ಪ್ರತಿ ಎರಡು-ಮೂರು ದಿನಗಳಿಗೊಮ್ಮೆ ಜೈಲಿಗೆ ಭೇಟಿ ನೀಡುವ ತಜ್ಞರು ದರ್ಶನ್ಗೆ ಫಿಸಿಯೋಥೆರಪಿ ನೀಡಲಿದ್ದಾರೆ.
ಬ್ಯಾರಕ್ನಲ್ಲೇ ಒಂದೂವರೆ ಗಂಟೆ ಚಿಕಿತ್ಸೆ
ವೈದ್ಯರು ಫಿಸಿಯೋಥೆರಪಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನೆಲ್ಲ ತಂದು ದರ್ಶನ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜೈಲಿನ ಬ್ಯಾರಕ್ನಲ್ಲೇ ಸುಮಾರು ಒಂದೂವರೆ ಗಂಟೆಗಳ ಕಾಲ ಚಿಕಿತ್ಸೆ ನೀಡಿ ತೆರಳುತ್ತಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಹಾಸನಾಂಬ ದರ್ಶನೋತ್ಸವಕ್ಕೆ ಇಂದು ತೆರೆ – ಕೆಂಡ ಹಾಯುವಾಗ ಕೊನೆಗೆ ಜಾರಿದ ಸಂಸದ ಶ್ರೇಯಸ್ ಪಟೇಲ್
ಈ ಹಿಂದೆಯೂ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯರಿಂದಲೇ ದರ್ಶನ್ಗೆ ಚಿಕಿತ್ಸೆ ಕೊಡಿಸಲಾಗಿತ್ತು. ಹಂತ ಹಂತವಾಗಿ ಫಿಸಿಯೋಥೆರಪಿ ನೀಡಿದ ಬಳಿಕ ಬೆನ್ನು ನೋವಿನ ಸಮಸ್ಯೆ ಕಡಿಮೆಯಾಗಿತ್ತು. ಇದೀಗ ಮತ್ತೆ ಚಿಕಿತ್ಸೆ ಆರಂಭವಾಗಿದ್ದು, ಬೆನ್ನು ನೋವಿನಿಂದ ದರ್ಶನ್ಗೆ ಕೊಂಚ ನಿರಾಳತೆ ಸಿಕ್ಕಿದೆ.ಇದನ್ನೂ ಓದಿ: 2 ಬಾರಿ ಕ್ಯಾನ್ಸರ್ ಗೆದ್ದಿದ್ದ ಸೋನಿಯಾ ಗಾಂಧಿ: ಆತ್ಮಕಥನದಲ್ಲಿ ಉಲ್ಲೇಖ
