– ನಕಲಿ ಭಿಕ್ಷುಕನ ದಿನದ ಸಂಪಾದನೆ 5-10 ಸಾವಿರ ರೂ.
ತುಮಕೂರು: ಅಂಗವಿಕಲನಂತೆ (Disabled Person) ನಟಿಸಿ ಭಿಕ್ಷಾಟನೆ (Begging) ಮಾಡುತ್ತಿದ್ದ ಯುವಕನನ್ನು ಹಿಡಿದು ಸಾರ್ವಜನಿಕರು ಗೂಸಾ ಕೊಟ್ಟಿರುವ ಘಟನೆ ತುಮಕೂರು (Tumakuru) ನಗರದ ಶಿವಕುಮಾರ ಸ್ವಾಮಿಜಿ ವೃತ್ತದಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಸನ್ನಿ ಎಂಬ ಯುವಕ ಕಾಲಿಗೆ ವಾಕಿಂಗ್ ಸ್ಟಿಕ್ ಹಾಕಿಕೊಂಡು ವಿಶೇಷಚೇತನನಂತೆ ನಟಿಸಿ, ಕೈಕಾಲು ನಡಗಿಸುತ್ತಾ, ಕುತ್ತಿಗೆ ಅಲ್ಲಾಡಿಸುತ್ತಾ ಭಿಕ್ಷೆ ಬೇಡುತಿದ್ದ. ಈ ನಕಲಿ ಭಿಕ್ಷುಕರ ಜಾಲ ಪತ್ತೆಹಚ್ಚಿದ ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರು ಯುವಕನ ಬಳಿಯಿದ್ದ ವಾಕಿಂಗ್ ಸ್ಟಿಕ್ ತೆಗೆದಾಗ ಯಾವುದೇ ಅಂಗವೈಕಲ್ಯ ಇಲ್ಲದಿರುವುದು ಸಾಬೀತಾಗಿದೆ. ನಕಲಿ ಭಿಕ್ಷುಕನನ್ನು ಹಿಡಿಯುತಿದ್ದಂತೆ ಸಾರ್ವಜನಿಕರು ಯವಕನಿಗೆ ಧರ್ಮದೇಟು ನೀಡಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಮನಬಂದಂತೆ ಹಲ್ಲೆ – ಶಿಕ್ಷಕನ ವಿರುದ್ಧ ಎಫ್ಐಆರ್
ಭಿಕ್ಷಾಟನೆ ಮಾಡುತ್ತಿದ್ದ ಯುವಕನ ಜೋಳಿಗೆಯಲ್ಲಿ ಸಾವಿರಾರು ರೂಪಾಯಿ ಪತ್ತೆಯಾಗಿದೆ. 10, 20 ರೂ. ನೋಟುಗಳು ಪತ್ತೆಯಾಗಿದೆ. ಈ ನಕಲಿ ಭಿಕ್ಷುಕ ದಿನಕ್ಕೆ 5-10 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದ. ಸದ್ಯ ಭಗತ್ ಕ್ರಾಂತಿ ಸೇನೆ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಜೋಳಿಗೆಯಲ್ಲಿ ಇದ್ದ ಹಣವನ್ನು ಸಾರ್ವಜನಿಕರು ಸಿದ್ದಗಂಗಾ ಮಠದ ಅನ್ನದಾಸೋಹಕ್ಕೆ ತಲುಪಿಸಿದ್ದಾರೆ. ಈ ಯುವಕನ ಹಿಂದೆ ದೊಡ್ಡದೊಂದು ಜಾಲ ಇರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಹೊಸೂರಿನ ಟಾಟಾ ಐಫೋನ್ ಘಟಕದಲ್ಲಿ ದುರಂತ – ವಿಷಾನಿಲ ಸೇವಿಸಿ ಮೂವರು ಕಾರ್ಮಿಕರ ಸಾವು
