ನವದೆಹಲಿ: ರಾಜಧಾನಿಯ ರೋಹಿಣಿ ಸೆಕ್ಟರ್ 10ರಲ್ಲಿ (Delhi Crime) ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
35 ವರ್ಷದ ಪಿಂಟು ಎಂಬಾತನನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇಲ್ಲಿನ ಶಾಪಿಂಗ್ ಮಾಲ್ ಸಮೀಪದ ಜನನಿಬಿಡ ರಸ್ತೆಯಲ್ಲಿ ಘಟನೆ ನಡೆದಿದೆ.
ಮಾರ್ಗಮಧ್ಯೆ ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ ಅಪರಿಚಿತ ದುಷ್ಕರ್ಮಿಗಳು, ಹತ್ಯೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.ಇದನ್ನೂ ಓದಿ: 28 ಲಕ್ಷ ಭಕ್ತರಿಂದ ಹಾಸನಾಂಬ ದೇವಿ ದರ್ಶನ – ಬರೋಬ್ಬರಿ 24 ಕೋಟಿಗೂ ಅಧಿಕ ಆದಾಯ
ಘಟನಾಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ದೀಪಾವಳಿ ಎಫೆಕ್ಟ್; ದಿಲ್ಲಿಯಲ್ಲಿ ದಟ್ಟ ಹೊಗೆ, ಮಂಜಿನ ವಾತಾವರಣ – 307ಕ್ಕೆ ಇಳಿದ ವಾಯುಗುಣಮಟ್ಟ
